ಇತ್ತೀಚಿನ ಸುದ್ದಿ
ಮಿಜಾರು ಕಾಂಬೆಟ್ಟು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾಮಗಾರಿ ವೀಕ್ಷಿಸಿದ ಶಾಸಕ ಡಾ. ಭರತ್ ಶೆಟ್ಟಿ: ಹೆಚ್ಚಿನ ಅನುದಾನದ ಭರವಸೆ
09/01/2023, 20:32

ಸುರತ್ಕಲ್(reporterkarnataka.com): ಮಂಗಳೂರು ಉತ್ತರ ಕ್ಷೇತ್ರದ ಬಡಗ ಎಡಪದವು ಗ್ರಾಮದ ಮಿಜಾರು ಕಾಂಬೆಟ್ಟು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾಮಗಾರಿಗಳನ್ನು ವೀಕ್ಷಿಸಿದ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳಿಗೆ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಅಭಿವೃದ್ಧಿ ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ಶೆಟ್ಟಿ, ಪಂಚಾಯತ್ ಅಧ್ಯಕ್ಷ ಹರೀಶ್, ಉಪಾಧ್ಯಕ್ಷರಾದ ಯಶೋಧ, ಪಂಚಾಯತ್ ಸದಸ್ಯರುಗಳಾದ ಚಂದ್ರಹಾಸ್, ವಸಂತ್, ಕಮಲಾಕ್ಷಿ, ಶ್ರೀಲತಾ, ಮೋಹಿನಿ, ವಸಂತಿ, ಸವಿತಾ ಶಕ್ತಿ ಕೇಂದ್ರ ಪ್ರಮುಖ್ ತಾರನಾಥ ಸಫಳಿಗ, ಬೂತ್ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ, ಉಮನಾಥ, ರಮೇಶ್ ಶೆಟ್ಟಿ, ಪ್ರವೀಣ್ ಸಫಳಿಗ, ರಾಮಣ್ಣ ಶೆಟ್ಟಿ, ಹರೀಶ್ ಕುಲಾಲ್, ಪ್ರಕಾಶ್, ಗೋಪಾಲ್ ಪೂಜಾರಿ ಉಪಸ್ಥಿತರಿದ್ದರು.