ಇತ್ತೀಚಿನ ಸುದ್ದಿ
ಮೆಟ್ರೋ ಪಿಲ್ಲರ್ ಕುಸಿತದಲ್ಲಿ ಇಬ್ಬರ ಸಾವು; ಸಮಗ್ರ ತನಿಖೆಗೆ ಆದೇಶ: ಮುಖ್ಯಮಂತ್ರಿ ಬೊಮ್ಮಾಯಿ
10/01/2023, 21:59

ಬೆಂಗಳೂರು(reporterkarnataka.com): ನಗರದ ನಾಗವಾರದ ಬಳಿ ಮೆಟ್ರೋ ಪಿಲ್ಲರ್ ಕುಸಿದು ಇಬ್ಬರು ಸಾವೀಗಿಡಾಗಿದ್ದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ. ಈ ಸಂಬಂಧ ಸಮಗ್ರ ತನಿಖೆ ನಡೆಸಲು ಆದೇಶಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಗಳವಾರ ಮಾಧ್ಯಮ ಜತೆ ಮಾತನಾಡಿದ ಅವರು, ಮೃತರ ಕುಟುಂಬಕ್ಕೆ ಮೆಟ್ರೋ ಸಂಸ್ಥೆ ನೀಡುವ ಪರಿಹಾರದ ಜೊತೆ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಹ ಪರಿಹಾರ ನೀಡಲಾಗುವುದು ಎಂದರು. ನೀಡಲಾಗುವುದು.