ಇತ್ತೀಚಿನ ಸುದ್ದಿ
ಮೆಥಾಎಂಪೈಟಮೈನ್ ಡ್ರಗ್ಸ್ ಮಾರಾಟ ಯತ್ನ: ಆರೋಪಿ ಬಂಧನ; 1.30 ಲಕ್ಷ ಮೌಲ್ಯದ ಸೊತ್ತು ವಶ
01/02/2024, 20:13
ಮಂಗಳೂರು(reporterkarnataka.com): ನಗರದ ಮೇರಿಹೀಲ್ ಹೆಲಿಪ್ಯಾಡ್ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಒಬ್ಬನನ್ನು ಬಂಧಿಸಲಾಗಿದೆ.
ಮೆಥಾಎಂಪೈಟಮೈನ್ ಎಂಬ ಮಾದಕ ವಸ್ತು ಅಕ್ರಮವಾಗಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮೊಹಮ್ಮದ್ ಫರಾಜ್ ಎಂಬಾತನನ್ನು ಮಂಗಳೂರು ಉತ್ತರ ಉಪ ವಿಭಾಗದ ಡ್ರಗ್ಸ್ ಸ್ಕ್ವಾಡ್ ಸಿಬ್ಬಂದಿಗಳು ಮತ್ತು ಕಾವೂರು ಪೊಲೀಸ್ ಠಾಣಾ ಸಿಬ್ಬಂದಿಗಳು ಜಂಟಿಯಾಗಿ ನಡೆಸಿದ
ಕಾರ್ಯಾಚರಣೆಯಲ್ಲಿ ದಸ್ತಗಿರಿ ಮಾಡಿದ್ದಾರೆ. ಅರೊಪಿಯಿಂದ 7.28 ಗ್ರಾಂ ನಷ್ಟು ಮೆಥಾಎಂಪೆಟಮೈನ್ ಹಾಗೂ ಅದರ ಮೌಲ್ಯ ಸುಮಾರು 30,000 ರೂಗಳನ್ನು ಮತ್ತು ಸುಜುಕಿ ಎಕ್ಸಸ್ ವಾಹನ ಅದರ ಮೌಲ್ಯ ಒಂದು ಲಕ್ಷ ರೂಗಳನ್ನು ವಶಕ್ಕೆ ಪಡೆಯಲಾಗಿದೆ. ಕಾವೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ 15/2024 ಕಲಂ : 8(c), 21 (b) NDPS ರಂತೆ ಪ್ರಕರಣ ದಾಖಲಿಸಲಾಗಿದೆ.