ಇತ್ತೀಚಿನ ಸುದ್ದಿ
ಜೂನ್ 8ರಂದು ಪಾದುವ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ -2024: ಪ್ರತಿಷ್ಠಿತ ಕಂಪನಿಗಳ ಪಾಲ್ಗೊಳ್ಳುವಿಕೆ
06/06/2024, 20:49
ಮಂಗಳೂರು(reporterkarnataka.com):ಪಾದುವ ಕಾಲೇಜು ಮಂಗಳೂರು ಇದರ ಪ್ಲೇಸ್ಮೆಂಟ್ ಸೆಲ್ ವತಿಯಿಂದ ಬೃಹತ್ ಉದ್ಯೋಗ ಮೇಳ 2024 ಜೂನ್ 8ರಂದು ಶ 9.00ಗಂಟೆಗೆ ಪಾದುವ ಕ್ಯಾಂಪಸ್ ನಲ್ಲಿ ನಡೆಯಲಿದೆ.
ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳು ಬೃಹತ್ ಉದ್ಯೋಗವಕಾಶಗಳೊಂದಿಗೆ ಭಾಗವಹಿಸಲಿವೆ. 10ನೇ, ಪಿಯುಸಿ, ಪದವಿ, ಸ್ನಾತಕೋತ್ತರ ಪದವೀಧರರು, ಐಟಿಐ, ಡಿಪ್ಲೋಮ ಅಭ್ಯರ್ಥಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.
ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಮೂಲಕ ಆನ್ಲೈನ್ ರಿಜಿಸ್ಟ್ರೇಷನ್ ಮಾಡಬಹುದಾಗಿದೆ
https://forms.gle/kQYd9T6jXukusBRg9
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ -9481552457, 9743078519