4:19 PM Wednesday27 - November 2024
ಬ್ರೇಕಿಂಗ್ ನ್ಯೂಸ್
ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ…

ಇತ್ತೀಚಿನ ಸುದ್ದಿ

ಎಂಸಿಸಿ ಬ್ಯಾಂಕಿನಿಂದ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ: ನೂತನ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಅನಿಲ್ ಲೋಬೊ ಘೋಷಣೆ

28/08/2023, 19:07

ಮಂಗಳೂರು(reporterkarnataka.com): ಮಂಗಳೂರು ಕಥೋಲಿಕ್ ಕೋ-ಆಪರೇಟಿವ್ ಬ್ಯಾಂಕ್ ತನ್ನ ಬ್ಯಾಂಕಿಂಗ್ ಸೇವೆಯಲ್ಲಿ ಸಿಬ್ಬಂದಿಯ ಜ್ಞಾನ – ಕೌಶಲ್ಯ ಅಭಿವೃದ್ದಿ, ಗ್ರಾಹಕ ಸೇವೆಯಲ್ಲಿ ಸುಧಾರಣೆ, ಸ್ಪರ್ಧಾತ್ಮಕ ಬಡ್ಡಿದರದಲ್ಲಿ ಶಿಕ್ಷಣ, ವಾಹನ ಮತ್ತು ಎಂಎಸ್ ಎಂಇ ಉದ್ಯಮ ಸಾಲ ಮತ್ತು ಸ್ವತಂತ್ರ ಯುಪಿಐ ಜೊತೆಗೆ ಬ್ಯಾಂಕಿನ ವ್ಯವಹಾರವನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಿ ಮನೆಬಾಗಿಲಿಗೆ ಬ್ಯಾಂಕಿಂಗ್ ಸೇವೆಯನ್ನು ನೀಡುವ ಉದ್ದೇಶ ಹೊಂದಿದೆ ಎಂದು ಬ್ಯಾಂಕಿನ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಅನಿಲ್ ಲೋಬೊ ಹೇಳಿದರು.
ಮುಂದಿನ 5 ವರ್ಷಗಳ ಅವಧಿಗೆ ಬ್ಯಾಂಕಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅನಿಲ್ ಲೋಬೊ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬ್ಯಾಂಕಿನ ಕಾರ್ಯಕ್ಷೇತ್ರ ವಿಸ್ತರಣೆ ಜತೆಗೆ ಗ್ರಾಹಕರ ಅಹವಾಲುಗಳನ್ನು ತುರ್ತು ವಿಲೇ ಮಾಡಲು ವಿಶೇಷ ಕುಂದು ಕೊರತೆ ನಿವಾರಣಾ ಘಟಕವನ್ನು ಸ್ಥಾಪಿಸಲಾಗುವುದು ಎಂದರು.


ಕಾರ್ಯವ್ಯಾಪ್ತಿ ವಿಸ್ತರಣೆ : ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬ್ಯಾಂಕ್ ಸಂಪೂರ್ಣ ಆಧುನೀಕೃತ ೧೬ ಶಾಖೆಗಳನ್ನು ಹೊಂದಿದ್ದು, ಹಿಂದಿನ ವಿತ್ತೀಯ ವರ್ಷದಲ್ಲಿ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ – ಹೀಗೆ ಐದು ಜಿಲ್ಲೆಗಳಿಗೆ ವ್ಯವಹಾರ ಕ್ಶೇತ್ರವನ್ನು ವಿಸ್ತರಿಸುವ ಅನುಮತಿ ಈಗಾಗಲೇ ದೊರಕಿದ್ದು, ಶಾಖೆಗಳನ್ನು ತೆರೆಯುವ ಕೆಲಸ ಪ್ರಗತಿಯಲ್ಲಿದೆ. ಸಾಧ್ಯವಾದರೆ ಜಿಲ್ಲಾವಾರು ಪ್ರಾದೇಶಿಕ ಕಛೇರಿಗಳನ್ನು ತೆರೆದು ವಿಸ್ತರಣೆಯ ಕೆಲಸಕ್ಕೆ ಚುರುಕು ನೀಡಲಾಗುವುದು. ಮುಂದಿನ ವರ್ಷಗಳಲ್ಲಿ ಬ್ಯಾಂಕಿನ ಕಾರ್ಯವ್ಯಾಪ್ತಿಯನ್ನು ಸಮಸ್ತ ಕರ್ನಾಟಕಕ್ಕೆ ತಲುಪಿಸುವ ಕನಸೂ ಇದೆ.
ಸ್ಪರ್ಧಾತ್ಮಕ ದರದಲ್ಲಿ ಸಾಲ : ಇತರ ಬ್ಯಾಂಕ್‌ಗಳಿಗೆ ಹೋಲಿಸಿದರೆ ಎಂ.ಸಿ.ಸಿ. ಬ್ಯಾಂಕಿನಲ್ಲಿ ಶಿಕ್ಷಣ, ವಾಹನ, ಎಂ.ಎಸ್.ಎಂ.ಇ. ಉದ್ಯಮ ಸಾಲಗಳು ಕಡಿಮೆ ಮತ್ತು ಸ್ಪರ್ಧಾರ್ತ್ಮಕ ಬಡ್ಡಿದರದಲ್ಲಿ ಲಭ್ಯವಿರುವುದು ಮಾತ್ರವಲ್ಲ, ಸಾಲ ಮಂಜೂರಾತಿ ಪ್ರಕ್ರಿಯೆಗೆ ತ್ವರಿತ ವೇಗದಲ್ಲಿ ನಡೆಯುತ್ತಿದೆ. ಈಗಷ್ಟೇ ಸಿಇಟಿ, ನೀಟ್ ಮತ್ತಿತರ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದ್ದು, ಶಿಕ್ಷಣ ಸಾಲಕ್ಕೆ ನಮ್ಮ ಬ್ಯಾಂಕ್ ವಿಶೇಸ ಒತ್ತು ನೀಡುತ್ತಿರುವುದರಿಂದ, ಸೀಮಿತ ಅವಧಿಗೆ ರೂಪಾಯಿ ಹತ್ತು ಲಕ್ಷದವರೆಗಿನ ಶಿಕ್ಷಣ ಸಾಲವನ್ನು ಶೂನ್ಯ ಪ್ರೊಸೆಸಿಂಗ್ ಫೀಸ್‌ನಲ್ಲಿ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು. ಸಮಾಜದ ಹೆಚ್ಚೆಚ್ಚು ವಿದ್ಯಾರ್ಥಿಗಳು ನಮ್ಮ ಬ್ಯಾಂಕಿನಿಂದ ಶಿಕ್ಷಣ ಸಾಲವನ್ನು ಪಡೆದು, ಉನ್ನತ ಶಿಕ್ಷಣದ ತಮ್ಮ ಕನಸನ್ನು ಸಾಕಾರಗೊಳಿವುದರ ಜೊತೆಗೆ, ಶಿಕ್ಷಣದಿಂದ ಸಾಮಾಜಿಕ ಸಶಕ್ತೀಕರಣ ನಮ್ಮ ಉದ್ದೇಶ ಎಂದು ಅವರು ಹೇಳಿದರು.
ಗ್ರಾಹಕ ಸೇವೆಯಲ್ಲಿ ಸುಧಾರಣೆ: ಈಗಾಗಲೇ ಬ್ಯಾಂಕಿನ ಆಡಳಿತ ಕಛೇರಿಯಲ್ಲಿ ಸರ್ವ ಸುಸಜ್ಜಿತ ಸಿಬ್ಬಂದಿ ಕೌಶಲ್ಯ ತರಬೇತಿ ಕೇಂದ್ರ ಕಾರ್ಯಾಚರಿಸುತಿದ್ದು, ಈಗಾಗಲೇ ನೂತನ ಸಿಬ್ಬಂದಿ ಆಯ್ಕೆ ನಡೆದಿರುತ್ತದೆ. ಆಧುನಿಕ ತಂತ್ರಜ್ಞಾನ ಮತ್ತು ಸಂವಹನ ಕೌಶಲ್ಯಗಳಲ್ಲಿ ನಮ್ಮ ಸಿಬ್ಬಂದಿವರ್ಗ ತರಬೇತಾಗಿದ್ದು, ಬ್ಯಾಂಕಿನ ಎಲ್ಲಾ ಶಾಖೆಗಳಲ್ಲೂ ನಗುಮೊಗದ ಮತ್ತು ತ್ವರಿತ ಸೇವೆ ಲಭ್ಯವಿರುತ್ತದೆ. ಹಿರಿಯ ನಾಗರಿಕರಿಗಾಗಿ ಪ್ರತೀ ಶಾಖೆಯಲ್ಲಿ ಉಸ್ತುವಾರಿ ಸಿಬ್ಬಂದಿ ಲಭ್ಯವಿದ್ದು, ಎಲ್ಲಾ ಶಾಖೆಗಳಲ್ಲಿ ಸೂಕ್ತ ವಾಹನ ನಿಲುಗಡೆ ವ್ಯವಸ್ಥೆಯಿದೆ. ಗ್ರಾಹಕರಿಗೆ ಯಾವುದೇ ಶಾಖೆಯ ಗ್ರಾಹಕ ಸೇವೆಯ ಬಗ್ಗೆ ಅಹವಾಲುಗಳಿದ್ದರೆ ಕುಂದು ಕೊರತೆ ನಿವಾರಣೆಗಾಗಿ ಸ್ಥಾಪಿಸಲಾಗುವ ವಿಶೇಷ ಘಟಕವನ್ನು ಸಂಪರ್ಕಿಸಬಹುದು. ಈ ಹಿಂದಿನಂತೆಯೇ ಗ್ರಾಹಕರಿಂದ ವಿಶೇಷ ಮನ್ನಣೆಯನ್ನು ಪಡೆದಿರುವ ಶಾಖಾವಾರು ಗ್ರಾಹಕ ಸಮಾವೇಶಗಳನ್ನು ತಪ್ಪದೇ ನಡೆಸಲಾಗುವುದು ಎಂದರು.
ಸಂಪೂರ್ಣ ಡಿಜಿಟಲೀಕರಣ: ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಮೂಲಕ ನಮ್ಮ ಸಾಕಷ್ಟು ಗ್ರಾಹಕರು ಆಧುನಿಕ ತಂತ್ರಜ್ಞಾನದ ಪ್ರಯೋಜನ ಪಡೆದುಕೊಳ್ಳುತ್ತಿದ್ದರೂ, ಸ್ವತಂತ್ರ ಯುಪಿಐ ವ್ಯವಸ್ಥೆ ಇಲ್ಲದಿರುವುದರಿಂದ ಕೆಲವೊಂದು ವಿಶೇಷ ಡಿಜಿಟಲ್ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಪ್ರಕ್ರಿಯೆ ಈಗಾಗಲೆ ಆರಂಭಗೊAಡಿದ್ದು, ಸದರಿ ವಿತ್ತೀಯ ವರ್ಷದಲ್ಲಿ ಬ್ಯಾಂಕಿನ ಎಲ್ಲಾ ವಿತ್ತೀಯ ವ್ಯವಹಾರಗಳು ಸಂಪೂರ್ಣ ಡಿಜಿಟಲೀಕರಣಗೊಳ್ಳಲಿವೆ ಎಂದು ಅವರು ನುಡಿದರು.
ಸಾಮಾಜಿಕ ಸಹಾಯಹಸ: ಕಳೆದ ವರ್ಷ ನಮ್ಮ ಬ್ಯಾಂಕಿನ ಶತಮಾನೋತ್ತರ ದಶಮಾನೊತ್ಸವ ಸಂದರ್ಭದಲ್ಲಿ ಸಮಾಜದ ಅಶಕ್ತ ವರ್ಗದವರಿಗೆ ವೈದ್ಯಕೀಯ, ಶಿಕ್ಷಣ, ಗೃಹ ನಿರ್ಮಾಣ ಮತ್ತು ದುರಸ್ತಿ ಮತ್ತು ಹೆಣ್ಣುಮಕ್ಕಳ ವಿವಾಹದ ವೆಚ್ಚಕ್ಕೆ ನೆರವು ನೀಡಿ, ಬ್ಯಾಂಕಿನಿಂದ ಸಮಾಜಕ್ಕೆ ಸಹಾಯಹಸ್ತ ಚಾಚಿದ್ದೇವೆ. ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಘ – ಸಂಸ್ಥೆಗಳಿಗೆ ಬ್ಯಾಂಕಿನ ಸಭಾಂಗಣವನ್ನು ಉಚಿತವಾಗಿ ನೀಡುತ್ತಿದ್ದೇವೆ. ಈ ಸೇವೆ ಮುಂದುವರೆಯಲಿದೆ. ನಮ್ಮ ನಾಡಿನ ಪ್ರಮುಖ ಹಬ್ಬಗಳನ್ನು ವಿಶೇಷ ಚಟುವಟಿಕೆಗಳೊಂದಿಗೆ ಸಂಭ್ರಲ್ಲೋಸದಿಂದ ಆಚರಿಸುತ್ತೇವೆ.
ಇತ್ತೀಚೆಗೆ ನಡೆದ ಇದರ ನಿರ್ದೇಶಕ ಮಂಡಲಿಯ ೨೦೨೩ -೨೦೨೮ ರ ಅವಧಿಯ ಚುನಾವಣೆಯಲ್ಲಿ ಶ್ರೀ ಅನಿಲ್ ಲೋಬೊ ನೇತೃತ್ವದ ೧೪ ಅರ್ಭರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ೨೮ ಅಗೋಸ್ತ್ ೨೦೨೩ ರಂದು ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಶ್ರೀ ಅನಿಲ್ ಲೋಬೊ, ಮುಂದಿನ ೫ ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಪುನರಾಯ್ಕೆಯಾಗಿರುತ್ತಾರೆ. ಉಪಾಧ್ಯಕ್ಷರಾಗಿ ಜೆರಾಲ್ಡ್ ಜೂಡ್ ಡಿ’ಸಿಲ್ವ ಆಯ್ಕೆಯಾಗಿರುತ್ತಾರೆ. ಸುಧೀರ್ ಕುಮಾರ್ ಜೆ., ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಮಂಗಳೂರು ಇವರು ಚುನಾವಣಾಧಿಕಾರಿಯಾಗಿದ್ದರು. ಎನ್ ಜೆ. ಗೋಪಾಲ್, ಸುಪರಿಟೆಂಡೆಂಟ್ ಚುನಾವಣಾ ಪ್ರಕ್ರಿಯೆಗೆ ಸಹಕರಿಸಿದರು. ಬ್ಯಾಂಕಿನ ಮಹಾಪ್ರಬಂಧಕ ಸುನಿಲ್ ಮಿನೇಜಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿ’ಸಿಲ್ವ ಇವರ ಜೊತೆಗೆ ನಿರ್ದೇಶಕರಾಗಿ ಡಾ. ಜೆರಾಲ್ಡ್ ಪಿಂಟೋ ಕಲ್ಯಾಣ್‌ಪುರ, ಆಂಡ್ರು ಡಿ’ಸೋಜ ಪಾಲಡ್ಕ , ಜೋಸೆಫ್ ಎಂ.ಅನಿಲ್ ಪತ್ರಾವೊ ದೇರೆಬೈಲ್, ಡೇವಿಡ್ ಡಿ’ಸೋಜ ಬಜಪೆ, ಎಲ್‌ರೊ ಕಿರಣ್ ಕ್ರಾಸ್ಟೊ ಗಂಗೊಳ್ಳಿ, ಜೆ.ಪಿ.ರೋಡ್ರಿಗಸ್ ಪುತ್ತೂರು, ರೋಶನ್ ಡಿ’ಸೋಜ ಮುಡಿಪು, ಹೆರಾಲ್ಡ್ ಜೋನ್ ಮೊಂತೆರೊ ಕೆಲರಾಯ್, ಐರಿನ್ ರೆಬೆಲ್ಲೊ ಕುಲಶೇಖರ, ಡಾ. ಫ್ರೀಡಾ ಫ್ಲಾವಿಯಾ ಡಿ’ಸೋಜ ಬಳ್ಕುಂಜೆ, ಮೆಲ್ವಿನ್ ಅಕ್ವಿನಸ್ ವಾಸ್ ಮಿಲಾಗ್ರಿಸ್, ವಿನ್ಸೆಂಟ್ ಅನಿಲ್ ಲಸ್ರಾದೊ, ಬಂಟ್ವಾಳ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು