ಇತ್ತೀಚಿನ ಸುದ್ದಿ
ಮತ್ತೆ ಚಿಣ್ಣರ ಕಲರವ: ಗುಲಾಬಿ ಕೊಟ್ಟು, ಸಿಹಿತಿಂಡಿ ನೀಡಿ ಶಾಲೆಗೆ ಶಿಕ್ಷಕರಿಂದ ಮಕ್ಕಳಿಗೆ ಸ್ವಾಗತ
07/09/2021, 15:30
ದೇವಲಾಪುರ ಜಗದೀಶ್ ನಾಗಮಂಗಲ ಮಂಡ್ಯ
info.reporterkarnataka@gmail.com
ವರ್ಷಗಟ್ಟಲೆ ಶಾಲೆಗೆ ಹಾಜರಾಗದೆ ಮನೆಯಲ್ಲೇ ಇದ್ದು ಕಾಲ ಕಳೆದಿದ್ದ ಮಕ್ಕಳಿಗೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸಡಗರ-ಸಂಭ್ರಮದಿಂದ 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳು ಶಾಲೆಗೆ ಹಾಜರಾದರು.
ನಾಗಮಂಗಲ ತಾಲೂಕು ದೇವಲಾಪುರ ಹೋಬಳಿ ಸಮೀಪವಿರುವ ತೂಬಿನಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಇಂದು ಶಾಲಾ ಪ್ರಾರಂಭೋತ್ಸವ ನಡೆಯಿತು. ಶಿಕ್ಷಕರು ಪೋಷಕರ ಒಪ್ಪಿಗೆಯೊಂದಿಗೆ ಮಕ್ಕಳಿಗೆ ಗುಲಾಬಿ ಹೂವು ನೀಡಿ ಸ್ವಾಗತಿಸಿದರು. ನಂತರ ಸಿಹಿತಿಂಡಿ ಕೊಟ್ಟು ಮಕ್ಕಳು ಬಾಯಿ ಚಪ್ಪರಿಸುವಂತೆ ಮಾಡಿದರು.
ಮಕ್ಕಳಿಗೆ ಶಾಲೆಗೆ ಬರುವ ಮುನ್ನ ಸ್ಯಾನಿಟೈಸರ್ ಮಾಡಿಸಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿತ್ತು. ಈ ವ್ಯವಸ್ಥೆಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ಚನ್ನಬಸವ ಹಾಗೂ ಸಹ ಶಿಕ್ಷಕರಾದ ನವೀನ್ ನೆರವೇರಿಸಿದರು.