7:11 PM Friday18 - April 2025
ಬ್ರೇಕಿಂಗ್ ನ್ಯೂಸ್
Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ… ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:… Karnataka BJP | ದಲಿತರ ತುಳಿದವರೇ ಕಾಂಗ್ರೆಸಿಗರು: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ

ಇತ್ತೀಚಿನ ಸುದ್ದಿ

ಮಸ್ಕಿ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ  ಕೊರೊನಾ ಟಾಸ್ಕ್ ಫೋರ್ಸ್ ಸಭೆ: ಗ್ರಾಮಸ್ಥರಿಗೆ ಮಾಹಿತಿ

24/05/2021, 18:45

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@gmail.com

ಜಿಲ್ಲಾ ಆಡಳಿತ ಹಾಗೂ ತಾಲೂಕು ಆಡಳಿತ ಆದೇಶದಂತೆ ಮಸ್ಕಿ ತಾಲೂಕಿನ ಮೆದಿಕಿನಾಳ, ತಲೆಕಾನ್, ಮಾರಲದಿನ್ನಿ, ಅಡವಿಭಾವಿ, ಮಸ್ಕಿ, ಹಾಲಾಪುರ, ಸಂತೆಕೆಲ್ಲೂರು, ಗುಡದೂರು, ಉದ್ಬಾಳ, ಗೌಡನಬಾವಿ, ತೋರಣದಿನ್ನಿ, ಹಿರೆದಿನ್ನಿ , ಮಲ್ಲದಗುಡ್ಡ, ಗುಂಡ ಸೇರಿದಂತೆ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಸೋಮವಾರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಭೆ ಸಂಪೂರ್ಣವಾಗಿ ನೆರವೇರಿತು. 

ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಸಮ್ಮುಖದಲ್ಲಿ ಕಾರ್ಯಕ್ರಮ ಆರಂಭಿಸಲಾಯಿತು. ಆರೋಗ್ಯ ಇಲಾಖೆ ವೈದ್ಯಾಧಿಕಾರಿ, ಮೇಲ್ವಿಚಾರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 ಈ ಎರಡನೇ ಅಲೆ ಪ್ರತಿ ಗ್ರಾಮಗಳಲ್ಲಿ ಹೆಚ್ಚಾಗಿ ಕೊರೊನಾ ಕಾಣಿಸಿಕೊಳ್ಳುತ್ತಿದ್ದು, ಯಾರಿಗಾದರೂ ಕೆಮ್ಮು ನಗಡಿ ಜ್ವರ ಬಂದ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ಚಿಕಿತ್ಸೆಗೆ ಒಳಪಡಿಸಿ ಸರಕಾರದ ಆದೇಶದಂತೆ ಜಿಲ್ಲಾ ಆಡಳಿತ ತಾಲೂಕು ಆಡಳಿತದಲ್ಲಿ ನಾವು ಪಂಚಾಯಿತಿ ಮಟ್ಟದ ಸಭೆ ಮಾಡಿ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಸರಕಾರದ ಆದೇಶ ಅವರಿಗೆ ತಿಳಿಸಬೇಕು. ಹೆಚ್ಚಿನ ನಿಗಾವಹಿಸುವುದಾಗಿ ಅಭಿವೃದ್ಧಿ ಅಧಿಕಾರಿ ತಿಳಿಸಿದರು. ಒಂದು ಗ್ರಾಮೀಣ ಮಟ್ಟದಲ್ಲಿ ಯಾರಿಗಾದರೂ ಕೋರೋನಾ ಕಾಣಿಸಿಕೊಂಡರು ಅವರು ಮುಚ್ಚಿಡುವ ಪ್ರಯತ್ನ ಮಾಡುತ್ತಾರೆ. ಹೀಗೆ ಮುತ್ತಿಡುವುದರಿಂದ ಗ್ರಾಮೀಣ ಭಾಗದಲ್ಲಿ ಜಾಸ್ತಿ ಜನರಿಗೆ ಹರಡುವ ಸಾಧ್ಯತೆಯಿದ್ದು, ಅಂತವರನ್ನು ಕೋವಿಡ್ ಸೆಂಟರಿಗೆ ತಿಳಿಸಿಕೊಡಲಾಗುವುದು. ಅವರಿಗೆ ಅಲ್ಲಿ ಎಲ್ಲಾ ಸೌಕರ್ಯ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಸಾಮಾಜಿಕ ಅಂತರ ಕಾಪಾಡುವುದು, ಪ್ರತಿಯೊಬ್ಬರೂ ಮಾಸ್ಕ್ ಧರಿಸ ಜೀವ ರಕ್ಷಿಸಿ ಕೊಳ್ಳಬೇಕು. ಸ್ಯಾನಿಟರಿ ನಿಂದ ಆಗಾಗ ಕೈ ತೊಳೆಯ ಎಂದು ಹೇಳಿದರು.

 ಈ ಸಂದರ್ಭ ದಲ್ಲಿ ಊರಿನ ಮುಖಂಡರು, ಪೋಲಿಸ ಅಧಿಕಾರಿಗಳು, ಅಭಿವೃದ್ಧಿ ಅಧಿಕಾರಿಗಳಾದ ತಿಮ್ಮಣ್ಣ ಬೋವಿ, ಸುರೇಶ್ ಪಾಟೀಲ್, ಕನಳ ತಿಮ್ಮನಗೌಡ ಪಾಟೀಲ್ 

ಹಡಗಲಿ, ಕೃಷ್ಣ ಹುನಗುಂದ, ಮುದುಕಪ್ಪ, ಅಭಿವೃದ್ಧಿ ಅಧಿಕಾರಿ ಶರಣೆ ಗೌಡ, ಅಂದ್ರಾ ಳ ಮಂಜುನಾಥ್ , ಜಾವೂರ್ ಲಕ್ಷ್ಮಿ ಕಾಂತ್ ಮೆದಿಕಿನಾಳ, ಮಲ್ಲಿಕಾರ್ಜುನ್ ಗುಡದೂರು, ಸಂದೇಶ್ ಮಲ್ಲದಗುಡ್ಡ, ಬಸವಲಿಂಗಪ್ಪ ಗೌಡ, ಹೊಸ ಗೌಡ, ವಿಜಯಶ್ರೀ ಬೋವಿ ಸೇರಿದಂತೆ ಇನ್ನಿತರರು ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮ ನೆರವೇರಿಸಿದರು.

ಗ್ರಾಮ ಪಂಚಾಯಿತಿ ಅಂಕುಶದೊಡ್ಡಿ ಟಾಸ್ಕಪೊರ್ಸ ಸಭೆ ಯಶಸ್ವಿಯಾಗಿ ಜರುಗಿಸಲಾಯಿತು . ಸರಕಾರದ ಆದೆಶವನ್ನು ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಜರುಗಿಸಲು ಎಲ್ರು ಮುಂದಾಗಬೆಕು ತಿಳಿಸಲಾಯಿತು. ಎಲ್ಲ ಟಾಸ್ಕಪೊರ್ಸ ಸದಸ್ಯರಿಗಳಿಗೆ ಸ್ಯಾನಿಟೈಜರ್ ಹಾಗೂ ಎನ್ 95
ಮಾಸ್ಕ್ ತರಿಸಲಾಯಿತು. 

ಇತ್ತೀಚಿನ ಸುದ್ದಿ

ಜಾಹೀರಾತು