ಇತ್ತೀಚಿನ ಸುದ್ದಿ
ಮಸ್ಕಿ: ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿಯಲ್ಲಿ ತೊಗರಿ ಪ್ರಾತ್ಯಕ್ಷಿಕೆ
05/07/2021, 07:48
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
info.reporterkarnataka@gmail.com
ಮಸ್ಕಿ ತಾಲೂಕಿನ ಹಾಲಾಪೂರದ ರೈತ ಸಂಪರ್ಕ ಕೇಂದ್ರದಲ್ಲಿ 2021-22 ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿಯಲ್ಲಿ ತೊಗರಿ ಪ್ರಾತ್ಯಕ್ಷಿಕೆ ಮತ್ತು ಕೀಲು ಚೀಲಗಳ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಹಾಲಾಪೂರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಮರೇಗೌಡ ಪಾಟೀಲ್ ಮಾತನಾಡಿ, ಇಂದು ಸರಕಾರ ಅನೇಕ ರೈತ ಪರ ಯೋಜನೆಗಳನ್ನು ಹಮ್ಮಿಕೊಂಡಿದೆ. ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ರೈತರು ಬೆಳೆ ವಿಮಾ ತುಂಬುವ ಸಂದರ್ಭದಲ್ಲಿ ಸರಿಯಾದ ಬೆಳೆಯನ್ನು ನಮೊದಿಸಬೇಕು. ರೈತ ಬೆಳೆದಿರುವ ಬೆಳೆ ಬೇರೆ ಇರುತ್ತದೆ. ಆದರೆ ಆನ್ ಲೈನ್ ಬೇರೆ ಬೆಳೆಯ ಬಗ್ಗೆ ನಮೂದಿಸುತ್ತೀರಿ. ಇದರಿಂದ ನಮಗೆ ತೊಂದರೆ ಆಗುತ್ತದೆ. ಅದಕ್ಕಾಗಿ ಸರಿಯಾಗಿ ವಿಮೆಯನ್ನು ತುಂಬಬೇಕು. ಹಾಗೆ ಗೊಬ್ಬರವನ್ನು ಹಾಕುವಾಗ ಸರಿಯಾಗಿ ಹಾಕಬೇಕು. ಹೆಚ್ಚುಕಡಿಮೆ ಹಾಕುವುದರಿಂದ ಬೆಳೆ ಸರಿಯಾಗಿ ಬರುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ನಮ್ಮ ಕೇಂದ್ರಕ್ಕೆ ಬನ್ನಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಜಗದೀಶಸ್ವಾಮಿ , ಅಮರೇಗೌಡ, ಬಸವರಾಜ ವಡಗೇರಿ, ವೆಂಕಟರಡ್ಡಿ , ಕರಿಯಪ್ಪ , ಸಹಾಯಕ ಕೃಷಿ ಅದಿಕಾರಿ ಸದ್ದಾಂ ಹುಸೇನ್ , ತಾಹೀರಬೇಗಂ, ಉಪನ್ಯಾಸಕರಾದ ನಾಗೇಶ, ಸಿದ್ದಾರ್ಥ ಪಾಟೀಲ್, ಶ್ರೀಕಾಂತ್ , ಸಿಬ್ಬಂದಿಗಳಾದ ಪ್ರವೀಣ್ಕುಮಾರ, ಮಂಜುನಾಥ , ಮುದುಕಪ್ಪ , ಹೋಬಳಿ ಕೇಂದ್ರದ ರೈತ ಬಾಂಧವರು ಕಾರ್ಯಕ್ರಮದಲ್ಲಿ ಇದ್ದರು.