ಇತ್ತೀಚಿನ ಸುದ್ದಿ
ಮಸ್ಕಿ: ನೂತನ ಶೀಲ ಮಂಟಪ ಲೋಕಾರ್ಪಣೆ, ರಥೋತ್ಸವ; ಪತ್ರಕರ್ತ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠಗೆ ಶ್ರೀರಕ್ಷೆ ಗೌರವ
06/01/2024, 15:18
ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಮಸ್ಕಿ
info.reporterkarnataka@gmail.com
ಶರಣರ ನಾಡಲ್ಲಿ ಜನಿಸಿದ ನಾವು ಪುಣ್ಯವಂತರು. ಅಂತಹ ನಿಟ್ಟಿನಲ್ಲಿ ಪತ್ರಕರ್ತ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಮಸ್ಕಿ ಅವರ ಪತ್ರಿಕ ರಂಗ ಸೇವೆಯನ್ನು ಗುರುತಿಸಿ ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳ ಕಾರ್ಯಕ್ರಮದಲ್ಲಿ ಪೂಜ್ಯ ಡಾ. ಚೆನ್ನಮಲ್ಲ ಶಿವಯೋಗಿಗಳು ಹಾಗೂ ನಾಡಿನ ಅರ ಗುರು ಶರಮೂರ್ತಿಗಳು ಶಿವಶರಣ ಅವರು ವಿರೂಪಾಕ್ಷಯ್ಯ ಸ್ವಾಮಿ ಅವರಿಗೆ ಶ್ರೀರಕ್ಷೆ ಆಶೀರ್ವಾದ ಮಾಡಿದರು.
ನೂತನ ಶೀಲ ಮಂಟಪ ಲೋಕಾರ್ಪಣೆ ನೂತನ ರಥೋತ್ಸವ ಹಾಗೂ 68ನೇ ಶ್ರೀ ಚನ್ನಮಲ್ಲ ಶಿವಯೋಗಿಗಳ ಜಾತ್ರಾ ಮಹೋತ್ಸವ ಬಹಳ ಉತ್ಸವದಿಂದ ನಡೆಯ ನೆರವೇರಿತು. ಶ್ರೀಗಳು ಪತ್ರಿಕ ರಂಗವನ್ನು ಕುರಿತು ತಮ್ಮ ಭಾಷಣದಲ್ಲಿ ಪತ್ರಕರ್ತರಿಗೆ ಸಮಾಜದಲ್ಲಿ ದೊಡ್ಡ ಗೌರವವಿದೆ. ಅದನ್ನು ಪತ್ರಕರ್ತರು ಉಳಿಸಿಕೊಂಡು ಹೋಗಬೇಕೆಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ನಾಡಿನ ಶಿವಶರಣರು ರಾಜಕೀಯ ಮುಖಂಡರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿದ್ದರು.