7:01 AM Sunday5 - October 2025
ಬ್ರೇಕಿಂಗ್ ನ್ಯೂಸ್
ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್

ಇತ್ತೀಚಿನ ಸುದ್ದಿ

ಮಸ್ಕಿ ಲಾಕ್ ಡೌನ್ ಸಂಪೂರ್ಣ ಯಶಸ್ವಿ: ವಾಹನ  ಸವಾರರಿಗೆ ಬಿಸಿ ಮುಟ್ಟಿಸಿದ ಖಾಕಿ ಅಧಿಕಾರಿಗಳು

17/05/2021, 18:40

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ 

info.reporterkarnataka news@gmail.com

ಕೋವಿಡ್ 19 ನಿಯಂತ್ರಣಕಾಗಿ ಬಿಗಿ ಬಂದೋಬಸ್ತ್ ಕ್ರಮಕೈಗೊಳ್ಳಲು ಜಿಲ್ಲಾಡಳಿತ ಆದೇಶದಂತೆ  ಮಸ್ಕಿ ತಾಲೂಕಿನಾದ್ಯಂತ ಸಂಪೂರ್ಣ ಲಾಕ್ ಡೌನ್ ಯಶಸ್ವಿಯಾಗಿದೆ.  


ಪಟ್ಟಣ ಸೇರಿದಂತೆ ಮಸ್ಕಿ ತಾಲೂಕಿನ ಬೆಳ್ಳಂಬೆಳಗ್ಗೆ ಬೀದಿಗಿಳಿದ ಪೊಲೀಸ್ ಸಿಪಿಐ ದೀಪಕ್ ಬೋಸು ರೆಡ್ಡಿ, ಪಿಎಸ್ಐ ಸಿದ್ದರಾಮ ಬಿದರಾಣಿ ನೇತೃತ್ವದಲ್ಲಿ ಪೊಲೀಸರು  ಮತ್ತು ಪುರಸಭೆ ಸಿಬ್ಬಂದಿ ಪ್ರಮುಖ ರಸ್ತೆಗಳಲ್ಲಿ ಗಸ್ತು ನಡೆಸಿ ಕೋವಿಡ್ ನಿಯಮ ಉಲ್ಲಂಘಿಸಿ ರಸ್ತೆಗೆ ಬಂದ ವಾಹನ ಸವಾರರಿಗೆ ಹಾಗೂ ಅಂಗಡಿಗಳನ್ನು ತೆರೆದಿದ್ದ ಮಾಲೀಕರಿಗೆ ಬಿಸಿ ಮುಟ್ಟಿಸಿದರು. ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಎಲ್ಲ ರಸ್ತೆಗಳನ್ನು ಲಾಕ್ ಮಾಡಲಾಗಿತ್ತು. ಕೆಲವೊಂದು ಕಡೆ ಸಾರ್ವಜನಿಕರು ಬಾರಿ ಗೇಟುಗಳನ್ನು ಕಿತ್ತುಹಾಕಿದರು. ಜನರು ವಾಹನ ಚಲಾಯಿಸಿಕೊಂಡು ಹೋಗುವುದು ಕಂಡುಬಂದಿತ್ತು. ಅಂತವರಿಗೆ ಪೊಲೀಸರು ಎಚ್ಚರಿಕೆ ನೀಡಿ ಮರಳಿ ಮನೆಗೆ ಹೋಗುವಂತೆ ಕಳಿಸಿದರು. ಪಟ್ಟಣದ ಮುಖ್ಯರಸ್ತೆಗಳಲ್ಲಿ ಅಶೋಕ ವೃತ್ತ, ಕನಕ ವೃತ್ತ, ವಾಲ್ಮೀಕಿ ವೃತ್ತ, ಮೇನ್ ಬಜಾರ್ ಸೇರಿದಂತೆ ಎಲ್ಲ ರಸ್ತೆಗಳು ಜನ ಇಲ್ಲದೆ ಬಿಕೋ ಎನ್ನುವ ದೃಶ್ಯ ಕಂಡುಬಂತು. ಅಲ್ಲೊಂದು ಇಲ್ಲೊಂದು ಅಲ್ಲೊಂದು ಇಲ್ಲೊಂದು ವಾಹನ ತಿರುಗಾಡುತ್ತಿ ಕಂಡುಬಂದಿತ್ತು. ಅಂತಹ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು ದಂಡ ಹಾಕಿ ಕಳಿಸುವ ದೃಶ್ಯ ಕಂಡು ಬಂತು. ಪುರಸಭೆ ಮುಖ್ಯಧಿಕಾರಿ ಹನುಮಂತಮ್ಮ ನಾಯಕ್ ನೇತೃತ್ವದಲ್ಲಿ ನೇತೃತ್ವದಲ್ಲಿ ಪುರಸಭೆ ಸಿಬ್ಬಂದಿ ಸಿಬ್ಬಂದಿ ಧ್ವನಿವರ್ಧಕ ಮೂಲಕ ಸಾರ್ವಜನಿಕರಿಗೆ  ಲಾಕ್ ಡೌನ್ ಇದ್ದು ಅಂಗಡಿಗಳನ್ನು ತೆರೆಯದಂತೆ ಮನವಿ ಮಾಡುವುದು ಕಂಡುಬಂದಿತ್ತು ಮಸ್ಕಿ ಕ್ಷೇತ್ರದ ಮೆದಿಕಿನಾಳ ಅಂತರಗಂಗೆ ನಾಗರಬೆಂಚಿ ಮಸ್ಕಿ ತಾಂಡಾ ಸೇರಿದಂತೆ ಜನ ಗುಂಪು ಗುಂಪು ಕೊಡುವುದನ್ನು ಬಿಡಬೇಕೆಂದು ಪೊಲೀಸರು ಮುನ್ನೆಚ್ಚರಿಕೆ ನೀಡಿದರು ತಸಿಲ್ದಾರ್ ಬಲರಾಮ್ ಕಟ್ಟಿಮನಿ ಸಿಪಿಐ ದೀಪಕ್ ಬೋಸರಾಜ್ ಪಿಎಸ್ಐ ಸಿದ್ದರಾಮ ಬಿದರಾಣಿ ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ್ ಸೇರಿದಂತೆ ಇನ್ನಿತರ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡುವ ದೃಶ್ಯ ಕಂಡುಬಂದಿತು.

ಇತ್ತೀಚಿನ ಸುದ್ದಿ

ಜಾಹೀರಾತು