ಇತ್ತೀಚಿನ ಸುದ್ದಿ
ಮಸ್ಕಿ: ಹೃದಯಾಘಾತಕ್ಕೆ ಶಿಕ್ಷಕ ಬಲಿ; ಮೊದಲ ತರಗತಿ ಮುಗಿಸಿದ್ದ ಅಧ್ಯಾಪಕ; ಮುಗಿಲು ಮುಟ್ಟಿದ ಸಿಬ್ಬಂದಿ, ವಿದ್ಯಾರ್ಥಿಗಳ ಆಕ್ರಂದನ
26/12/2023, 20:55
ವೀರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಪ್ರಭಾರ ಮುಖ್ಯ ಶಿಕ್ಷಕ ಶಾಲೆಯಲ್ಲೇ ಹಠಾತ್ ಹೃದಯಘಾತದಿಂದ ಮೃತಪಟ್ಟ ಘಟನೆ ಗದ್ರಟಗಿ ಗ್ರಾಮದಲ್ಲಿ ಜರುಗಿದ್ದು, ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗದ್ರಟಗಿ ಗ್ರಾಮದ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಭಾರ ಮುಖ್ಯಶಿಕ್ಷಕ ಸುರೇಶ(57) ಹೃದಯಘಾತದಿಂದ ಮೃತಪಟ್ಟಿದ್ದಾರೆ. ಶಾಲೆ ಆರಂಭವಾಗುತ್ತಿದ್ದಂತೆ ಮೊದಲ ತರಗತಿ ಮುಗಿಸಿಕೊಂಡು ಬಂದು ಕಚೇರಿಯಲ್ಲಿ ಕುಳಿತ್ತಿದ್ದ ಮುಖ್ಯೋಪಾಧ್ಯಾಯ ಸುರೇಶ ಅವರು, ಶಾಲೆಗೆ ಸಂಬಂಧಿಸಿದ ಮಾಹಿತಿ ಪುಸ್ತಕದಲ್ಲಿ ಬರೆಯುತ್ತಿದ್ದರು, ಈ ವೇಳೆ ಹಠಾತ್ ಹೃದಯಾಘಾತವಾಗಿದೆ. ಕುಳಿತ ಛೇರಿನ ಮೇಲೆಯ ಮೃತಪಟ್ಟಿದ್ದಾರೆ.
ಹಠಾತ್ ನಿಧನದಿಂದ ಶಾಲೆಯ ಶಿಕ್ಷಕರು, ಇಡೀ ಶಾಲೆ ಮಕ್ಕಳ ಮತ್ತು ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಮೃತ ಶಿಕ್ಷಕನಿಗೆ ಪತ್ನಿ, ಮೂವರು ಪುತ್ರರು ಇದ್ದು,ಮೂಲತಃ ರಾಣೆಬೆನ್ನೂರಿನವರಾಗಿದ್ದಾರೆ. ಪತ್ರಕರ್ತ ವಿರೂಪಾಕ್ಷಯ್ಯ ಸ್ವಾಮಿಗೆ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.