9:19 PM Monday21 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಮಸ್ಕಿ: ದಲಿತ ಸಂಘಟನೆಗಳಿಂದ ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

18/10/2021, 21:15

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@gmail.com

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಮಾಡುವಂತೆ ಮಸ್ಕಿಯ ದಲಿತ ಸಂಘಟನೆಗಳು ಚಲವಾದಿ ಮಹಾಸಭಾ ವಿವಿಧ ಸಂಘಟನೆಗಳ ಸಮ್ಮುಖದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತು.

ಪಟ್ಟಣದ ಪ್ರವಾಸಿ ಮಂದಿರದಿಂದ ಆರಂಭವಾದ ಪ್ರತಿಭಟನೆ ಮುಖ್ಯರಸ್ತೆಗಳ ಮೂಲಕ ಸಂಚಾರಿಸಿತು. ಸ್ವಲ್ಪ ಸಮಯ ಸಂಚಾರ ಬಂದ್ ಮಾಡಲಾಯಿತು. ಪ್ರಮುಖ ಮುಖ್ಯ ರಸ್ತೆಗಳಲ್ಲಿ ದೈವದ ಕಟ್ಟೆ, ಕನಕ ವೃತ್ತ, ವಾಲ್ಮೀಕಿ ವೃತ್ತ, ಚೆನ್ನಮ್ಮ ವೃತ್ತ, ಅಶೋಕ್ ಸರ್ಕಲ್ ಸೇರಿದಂತೆ ಅಂಬೇಡ್ಕರ್ ಪ್ರತಿಮೆ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. 

ಮಸ್ಕಿ ಕ್ಷೇತ್ರದ ಎಲ್ಲ ಸಂಘಟನಾಕಾರರು 2000ಕ್ಕೂ ಹೆಚ್ಚು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ದಲಿತ ಮಹಾಸಭಾದ ಮುಖಂಡರಾದ ದಲಿತ ಸಾಹಿತಿ ಕವಿ ಚಿಂತಕ ಸಿ. ದಾನಪ್ಪ ನಿಲಗಲ್ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿ, ಸದಾಶಿವ ಆಯೋಗವು ಜಾರಿ ಮಾಡುವಂತೆ ಆಗ್ರಹಿಸಿ ಸರಕಾರವು ಸದಾಶಿವ ಆಯೋಗ ಜಾರಿಮಾಡಬೇಕು. ಮಸ್ಕಿ ಶಾಸಕರಾದ ಬಸನಗೌಡ ತುರ್ವಿಹಾಳ ಅವರಿಗೆ ಈಗಾಗಲೇ ಮನವಿ ಪತ್ರ ಸಲ್ಲಿಸಲಾಗಿದ್ದು, ಸುಮಾರು 38 ಸಾವಿರ ಮತಗಳಿಂದ ಜಯಗಳಿಸಿ ಮಸ್ಕಿ ಶಾಸಕರು ಸದನದಲ್ಲಿ ಸದಾಶಿವ ಆಯೋಗದ ಬಗ್ಗೆ ಧ್ವನಿಯೆತ್ತಬೇಕು. ಜಾತಿಯಲ್ಲಿ ಸರಕಾರ ಪ್ರಣಾಳಿಕೆಯನ್ನು ತಳ್ಳಿ ಹಾಕುವುದರ ಮೂಲಕ ತಿರಸ್ಕರಿಸಿ ಮುಂದಿನ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. 

ದಲಿತ ಯುವ ಮುಖಂಡ ತಮ್ಮ ಆಕ್ರೋಶವನ್ನು ವೇದಿಕೆ ಮೂಲಕ ಹೊರಹಾಕಿದರು. ಚೆಲುವಾದಿ ಮಹಾಸಭಾ ಮುಖಂಡ ಮಲ್ಲಪ್ಪ ಗೋನಾಳ್ ಮಾತನಾಡಿ, ಸರಕಾರ ಸದಾಶಿವ ಆಯೋಗ ವನ್ನು ಜಾರಿಗೊಳಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು. ಎಲ್ಲಾ ಸಂಘಟನೆಯ ಮುಖಂಡ ಮಹಿಳಾ ಸ್ತ್ರೀಶಕ್ತಿ ಮುಖಂಡರು ಜೈ ಘೋಷಗಳನ್ನು ಹೋಗುವ ಮೂಲಕ ಸರಕಾರ ಸದಾಶಿವ ಆಯೋಗದ ಬಗ್ಗೆ ಎಚ್ಚರಿಕೆ ಮೂಡಿಸಿದರು. ನಂತರ ಮನವಿ ಪತ್ರ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಮಸ್ಕಿ ಕ್ಷೇತ್ರದ 2000ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು. ದಲಿತ ಮಹಾ ಸಭಾ ಮುಖಂಡರಾದ ಸಿ. ದಾನಪ್ಪ ನೀಲಗಲ್, ಮಲ್ಲಯ್ಯ ಬಳ್ಳ, ಹನುಮಂತಪ್ಪ ವೆಂಕಟಾಪುರ್, ಸುರೇಶ್ ಅಂತರಗಂಗೆ, ಮಲ್ಲಯ್ಯ ಮುರಾರಿ, ಮಲ್ಲಪ್ಪ ಗೋನಾಳ್, ನಾಗಲಿಂಗ ತೀರ್ಥಭಾವಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಹಾಜರಾಗಿದ್ದರು. 

ಇತ್ತೀಚಿನ ಸುದ್ದಿ

ಜಾಹೀರಾತು