10:14 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಮಸ್ಕಿ ಭ್ರಮರಾಂಬ ದೇವಿ ಉತ್ಸವ: ಮಹಿಳೆಯರಿಂದ ಮಹಾದೇವಿಗೆ ಮಹಾ ರಥೋತ್ಸವ

20/10/2021, 22:50

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ರಾಯಚೂರು ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರವಾದ ಮಸ್ಕಿಯ. ಶ್ರೀ ಭ್ರಮರಾಂಬ ದೇವಿಯ ಸನ್ನಿದಾನದಲ್ಲಿ ಮೈಸೂರು ದಸರಾ ಉತ್ಸವ ಮಾದರಿಯಲ್ಲಿ ಆಚರಿಸಲಾಯಿತು.


ಶ್ರೀ ಗಚ್ಚಿನ ಹಿರೇಮಠದ ಶ್ರೀ ವರರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಮಂಗಳವಾರ ಬೆಳಗ್ಗೆ ಭ್ರಮರಾಂಬ ದೇವಿಗೆ ಪ್ರತಿ ವರ್ಷದ ಪದ್ದತಿಯಂತೆ ಈ ವರ್ಷವೂ ಕೂಡ ಕುಂಕುಮಾರ್ಚನೆ, ಕುಂಭಾಭಿಷೇಕ, ರುದ್ರಾಭಿಷೇಕ, ವಿಶೇಷ ಹೂವಿನ ಪೂಜೆ ಅಲಂಕಾರ ನೇರವೇರಿಲಾಯಿತು. ನಂತರ ಗಣಾರಾಧನೆ ಮಹಾಪ್ರಸಾದವಾದ ಬೂಂದಿ, ಅನ್ನ ಪ್ರಸಾದ ಕಾರ್ಯಕ್ರಮ ಭಕ್ತಾದಿಗಳು ಸವಿದರು. ಮಹಾದೇವಿಯ ಪಲ್ಲಕ್ಕಿ ಸೇವೆ ಜರುಗಿತು.ಸಂಜೆ 4.15ಕ್ಕೆ ಮಹಿಳೆಯರು ಸೇರಿ ತನು-ಮನ ಕಳಸ ಕನ್ನಡಿ ಭಜನಾ ಭಕ್ತಿಯೇ ಮೂಲ ಧನದಿಂದ ಭಕ್ತಿಯ ಮೂಲಕ ದೇವಿ ಕೃಪೆಗೆ ಪಾತ್ರರಾಗಿ ದರ್ಶನ ಪಡೆದರು.ಮಹಿಳೆಯರಿಂದಲೇ ಮಹಾ ರಥೋತ್ಸವ ಜರುಗುವುದು ಇಲ್ಲಿನ ವಿಶೇಷವಾಗಿದೆ.

ಮಹಾದೇವಿಯ ರಥವನ್ನು ಎಳೆಯುವ ಮೂಲಕ ತಮ್ಮಲ್ಲಿ ಭಕ್ತಿ ಭಾವವನ್ನು ಆನಂದಿಸಿದರು. ಮಸ್ಕಿ ಬಳಗಾನೂರ, ಸುಂಕನೂರ, ಕಡಬೂರ,ಗುಡದೂರ, ತುರ್ವಿಹಾಳ, ಹಸ್ಮಕಲ್,ಮೆದಿಕಿನಾಳ, ಸಂತೆಕೆಲ್ಲೂರ, ಅಂಕುಶದೂಡ್ಡಿ, ಅಂತರಗಂಗೆ, ನಾಗರಬೆಂಚಿ, ಬೈಲಗುಡ್ಡ, ಹಾಲಾಪೂರ ಹಾಗೂ ಇನ್ನಿತರ ಗ್ರಾಮದ ಭಕ್ತಾದಿಗಳು ಆಗಮಿಸಿ ಶ್ರೀ ಭ್ರಮರಾಂಬ ದೇವಿಯ ದರ್ಶನ ಪಡೆದರು.


ಕಾರ್ಯಕ್ರಮಕ್ಕೆ ಮಸ್ಕಿ ಶಾಸಕ ಬಸನಗೌಡ ತುರುವಿಹಾಳ, ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್,  ಮಹಾದೇವಪ್ಪಗೌಡ, ಪೊಲೀಸ್ ಪಾಟೀಲ್ ಮುಂತಾದವರು ಆಗಮಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು