11:36 PM Tuesday16 - December 2025
ಬ್ರೇಕಿಂಗ್ ನ್ಯೂಸ್
1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು

ಇತ್ತೀಚಿನ ಸುದ್ದಿ

ಮರೋಳಿ ಡೇಂಜರ್ ಟ್ರೀಯ ಕೊಂಬೆ ಮುರಿತ: ಮರ ತೆರವಿಗೆ ಇನ್ನೂ ಅಧಿಕಾರಿಗಳ ಮೀನಮೇಷ!

26/07/2024, 18:49

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಮಂಗಳೂರಿನ ಮರೋಳಿ ಸೂರ್ಯನಾರಾಯಣ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿರುವ ಹಳೆಯ ಮರದ ಅಪಾಯದ ಕುರಿತು ನಾಲ್ಕೈದು ದಿನಗಳ ಹಿಂದೆಯಷ್ಟೇ ರಿಪೋರ್ಟರ್ ಕರ್ನಾಟಕ ವರದಿ ಮಾಡಿತ್ತು. ಸರಕಾರಿ ಇಲಾಖೆಗಳ ನಡುವಿನ ಸಮನ್ವಯತೆ ಕೊರತೆಯಿಂದ ಅಪಾಯಕಾರಿ ಮರವೊಂದನ್ನು ಬಗಲಿನಲ್ಲೇ ಇಟ್ಟುಕೊಂಡು ಸ್ಥಳೀಯರು ಹೇಗೆ ಬದುಕು ನಡೆಸುತ್ತಿದ್ದಾರೆ ಎನ್ನುವ ಕುರಿತು ವಿವರಿಸಲಾಗಿತ್ತು. ಇದೀಗ ಗಾಳಿ ಮಳೆಗೆ ಮರದ ಕೊಂಬೆ ಬಿದ್ದಿದೆ. ಆದರೆ ಸರಕಾರಿ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ.
ಸರಕಾರಿ ಇಲಾಖೆಗಳ ನಡುವೆ ಎಷ್ಟು ಸಮನ್ವಯತೆ ಕೊರತೆ ಇದೆ ಎನ್ನುವುದಕ್ಕೆ ಇದೊಂದು ತಾಜಾ ನಿದರ್ಶನ. ಹಳೆಯ ಈ ಮರ ಯಾವುದೇ ಕ್ಷಣದಲ್ಲಿ ಧರಾಶಾಹಿಯಾಗಿ ದಾರಿಹೋಕರಿಗೆ ಅಪಾಯ ಉಂಟು ಮಾಡುವ ಸಾಧ್ಯತೆಗಳಿದ್ದರೂ ಅಧಿಕಾರಿಗಳು ಮಾತ್ರ ತನ್ನದ್ದಲ್ಲ ತನ್ನದ್ದಲ್ಲ ಅಂತ ಮುಖ ತಿರುಗಿಸಿಕೊಳ್ಳುತ್ತಿದ್ದಾರೆ. ಸ್ಥಳೀಯ ಕಾರ್ಪೋರೇಟರ್ ಅಂತೂ ಊರಲ್ಲಿದ್ದಾರೆಯೇ? ಅಥವಾ ವಿದೇಶಕ್ಕೆ ಹೋಗಿದ್ದಾರಾ? ಎನ್ನುವ ಸಂಶಯ ಕಾಡುತ್ತಿದೆ.

ಮರೋಳಿ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿರುವ ಈ ಹಳೆಯ ಮರದ ಕೊಂಬೆ ಬೀಳುವ ಸ್ಥಿತಿಯಲ್ಲಿದೆ ಎಂದು ರಿಪೋರ್ಟರ್ ಕರ್ನಾಟಕ ವರದಿ ಮಾಡಿತ್ತು. ಮೆಸ್ಕಾಂ ಹಾಕಿರುವ ಡಮ್ಮಿ ತಂತಿಗೆ ಕೊಂಬೆ
ತಾಗಿ ಇತ್ತು. ಮರದ ಪಕ್ಕದಲ್ಲೇ ಅಂಗನವಾಡಿ ಕೇಂದ್ರವಿದೆ. ಅಂಗನವಾಡಿಗೆ ತೆರಳುವ ಮಕ್ಕಳು ಇದೇ ಮರದಡಿಯಿಂದ ಹಾದು ಹೋಗಬೇಕಾಗಿದೆ. ಸುತ್ತ 50 ಮನೆಗಳಿದ್ದು ಅದೇ ದಾರಿ ದೇವಸ್ಥಾನ ಹಾಗೂ ನಾಗುರಿ ಮತ್ತು ಹೈವೇ ಗೆ ಬಂದು ಸೇರುತ್ತದೆ. ಹೀಗಿರುವಾಗ ಯಾವಾಗ ಮರ ಮೈಮೇಲೆ ಬೀಳುತ್ತೋ ಎನ್ನುವ ಆತಂಕ ಸುತ್ತ ಮುತ್ತ ಜನರದ್ದಾಗಿದೆ. ಈ ಮರ ದಾಟಿ ಶಾಲಾ ಬಸ್ಸುಗಳು ಬರಲು ಒಪ್ಪುತ್ತಿಲ್ಲ. ಮಕ್ಕಳೇ ನಡೆದುಕೊಂಡು ಹೋಗಬೇಕಾಗಿದೆ. ಸ್ಥಳೀಯರು ಸ್ಥಳೀಯ ಕಾರ್ಪೋರೇಟರ್ ಬಳಿ ಅಲವತ್ತು ಕೊಂಡರೂ ಪ್ರಯೋಜನವಾಗಿಲ್ಲ.
ಪಾಲಿಕೆ ವಿದ್ಯುತ್ ವಿಭಾಗದ ಸಂಬಂಧಪಟ್ಟವರು ಬಂದು ನಮಗೆ ಆಗಲ್ಲ ಮೆಸ್ಕಾಂ ತಂತಿ ಇದೆ ಎನ್ನುತ್ತಾರೆ. ಮೆಸ್ಕಾಂಗೆ ಹೇಳಿದರೆ, ಮೆಸ್ಕಾಂ ಸಿಬ್ಬಂದಿಗಳು ಅರಣ್ಯ ಇಲಾಖೆಯತ್ತ ಬೆರಳು ತೋರಿಸುತ್ತಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಗಮನವೇ ಹರಿಸುತ್ತಿಲ್ಲ. ಇನ್ನು ಇದಲ್ಲದೆ ಸುತ್ತಮುತ್ತ ಚಾಲ್ತಿಯಲ್ಲಿರುವ ಮೆಸ್ಕಾಂ ತಂತಿಗೆ ತಾಗಿ ಮರಗಳ ಕೊಂಬೆಗಳಿವೆ. ಇದೀಗ ಒಂದು ಕೊಂಬೆ ಮುರಿದು ಬಿದ್ದಿದೆ. ಆದರೂ ಮರ ಇನ್ನೂ ಅಪಾಯದ ಸ್ಥಿತಿಯಲ್ಲಿದೆ. ಅದರೆ, ಕಾರ್ಪೊರೇಟರ್ ಆಗಲಿ, ಅಧಿಕಾರಿಗಳಾಗಲಿ ಕ್ಯಾರೇ ಎನ್ನುತ್ತಿಲ್ಲ. ಪಾಂಡೇಶ್ವರದಲ್ಲಿ ಇತ್ತೀಚೆಗೆ ವಿದ್ಯುತ್ ತಂತಿ ತಗುಲಿ ಇಬ್ಬರು ಆಟೋ ಚಾಲಕರು ಸಾವನ್ನಪ್ಪಿದ ಬಳಿಕ ಸಭೆ ನಡೆಸಿದ ಸ್ಪೀಕರ್ ಯು. ಟಿ. ಖಾದರ್ ಅವರು ಮೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಆದರೆ ಯಾವುದೂ ಇದುವರೆಗೆ ಫಲ ನೀಡಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು