7:44 AM Sunday5 - October 2025
ಬ್ರೇಕಿಂಗ್ ನ್ಯೂಸ್
ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್

ಇತ್ತೀಚಿನ ಸುದ್ದಿ

ಮಾರನಾಳ ತಾಂಡದಲ್ಲಿ ನೂತನ ತರಕಾರಿ ಮಾರುಕಟ್ಟೆ ಉದ್ಘಾಟನೆ: ಪಿಎಸ್ ಐ ರಾಜಶೇಖರ ರಾಠೋಡ ಚಾಲನೆ

05/01/2025, 10:06

ಶಿವು ರಾಠೋಡ ಹುಣಸಗಿ ಯಾದಗಿರಿ

info.reporterkarnataka@gmail.com

ಮಾರನಾಳ ತಾಂಡ (ಮಾರನಾಳ ತಾಂಡಾ) ರಾಮರಾವ್ ನಗರ ಕ್ರಾಸ್ ಬಳಿ ತರಕಾರಿ ಮಾರುಕಟ್ಟೆ ಉದ್ಘಾಟನೆಯನ್ನು ನಾರಾಯಣಪುರ ಪಿಎಸ್ಐ ರಾಜಶೇಖರ್ ರಾಠೋಡ ನೆರವೇರಿಸಿದರು.

ಸುಸಜ್ಜಿತ ಮತ್ತು ಸುವ್ಯವಸ್ಥಿತ ಮಾರುಕಟ್ಟೆ ಇದಾಗಿದೆ. ಈ ಮಾರುಕಟ್ಟೆಯಿಂದ ದಶಕಗಳಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವರಿಗೆ ಹಾಗೂ ಮಾರಾಟಗಾರರಿಗೆ ಬಹಳ ಅನುಕೂಲವಾಗಲಿದೆ.
ವ್ಯವಸ್ಥಿತವಾಗಿ ಮಾರುಕಟ್ಟೆ ಇಲ್ಲದೆ ರೈತರು ಮತ್ತು ಮಾರಾಟಗಾರರು, ತರಕಾರಿ, ಹಣ್ಣು, ಹೂವುಗಳನ್ನು ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ಇದಾನ ನಾವು ಸದುವಯೋಗ ಪಡೆದುಕೊಳ್ಳೋಣಾ ಎಂದು ತಿಳಿಸಿದರು.
*ರಾಮರಾವ್ ನಗರ ಕ್ರಾಸ್ ಬಳಿ ಸಿದ್ದವಾಗುತ್ತಿದೆ ತರಕಾರಿ ಮಾರುಕಟ್ಟೆ;* ನಾರಾಯಣಪುರ ಮತ್ತು ಕೊಡೇಕಲ್ ನಡುವೆ, ನಾರಾಯಣಪುರ ಗ್ರಾಮದಿಂದ ಸುಮಾರು 7 ಕಿ.ಮೀ. ದೂರದಲ್ಲಿದೆ. ಹೊಸ ಮಾರುಕಟ್ಟೆಯು (ಮಾರನಾಳ ತಾಂಡಾ) ರಾಮರಾವ್ ನಗರ ಕ್ರಾಸ್ ಬಳಿ ನಿರ್ಮಿಸಲಾಗಿದೆ. ಇದರಿಂದ ಮಾರನಾಳ, ಯರಕಿಹಾಳ, ಮಾವಿನಗಿಡ್ ತಾಂಡಾ, ಜೋಕಾಂಡಭಾವಿ , ಗಡ್ಡದ ತಾಂಡಾ, ಬರದೇವನಾಳ , ರಾಯನಗೋಳ, ಜುಮಾಲಪುರ್ ದೊಡ್ಡ ತಾಂಡಾ, ಬೆಲ್ಲದಗಿಡ ತಾಂಡಾ, ಹಾಗೂ ಸುತ್ತಮುತ್ತಲಿನ ಗ್ರಾಮ ನಿವಾಸಿಗಳಿಗೆ ಅನುಕೂಲವಾಗಲಿದೆ.
ಮಾರುಕಟ್ಟೆಯಲ್ಲಿನ ಹೈಟೆಕ್ ಸೌಲಭ್ಯಗಳು ಇಲ್ಲದಿದ್ದರೂ ಸಹ ಹವಾಮಾನ ಪರಿಸ್ಥಿತಿಗಳಲ್ಲೂ ಯಾವುದೇ ತೊಂದರೆಯಿಲ್ಲದೆ. ತರಕಾರಿಗಳು, ಹಣ್ಣುಗಳು ಮತ್ತು ಹೂವುಗಳನ್ನು ಮಾರಾಟ ಮಾಡಬಹುದಾಗಿದೆ. ಗ್ರಾಮದ ಮಾರುಕಟ್ಟೆಯ ಸುತ್ತಲಿನ ಸಂಚಾರ ದಟ್ಟಣೆಯಿಂದ ಪ್ರಯಾಣಿಕರು ಮತ್ತು ಪಾದಚಾರಿಗಳು ಕಿರಿಕಿರಿ ಅನುಭವಿಸುತ್ತಾರೆ. ಸದ್ಯ ಮಾರನಾಳ ತಾಂಡದ ರಾಮರಾವ್ ನಗರ ಕ್ರಾಸ್ ಬಳಿ ನಿರ್ಮಿಸಲಾದ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುತ್ತಿರುವ 100ಕ್ಕೂ ಹೆಚ್ಚು ಮಾರಾಟಗಾರರು ಹೊಸ ಮಾರುಕಟ್ಟೆಗೆ ಬಂದಿದರು ಸಂತೋಷ ತರತಕ್ಕದು ಎಂದು ಮಾರಾಟಗಾರರು ಹರ್ಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ನಾರಾಯಣಪುರ ಪಿ.ಎಸ್.ಐ. ರಾಜಶೇಖರ್ ರಾಠೋಡ್, ಬರದನಾಳ ಪಿ.ಡಿ.ಓ ಪ್ರೀಮಾ ರಾಠೋಡ್ , ಚಂದು ಹರಾವತ, ಸೀತಾಬಾಯಿ ಪವಾರ, ಶೇಖರ್ ನಾಯಕ್ , ಕೃಷ್ಣ್ ಜಾದವ . ಬಾಬು ಚವಾಣ್,
ಹರಿಕೃಷ್ಣ ಮೂಡ್ , ವಿನೋದ ಪವಾರ , ಜೈರಾಮ್ ರಾಠೋಡ, ತಿರುಪತಿ ಚವಾಣ್ ಹಾಗೂ ಗೋರ್ ಸೇನಾ ಗೋರ್ ಸಿಕವಾಡಿಯ ಹಲವಾರು ಪದಾಧಿಕಾರಿಗಳು. ಮತ್ತು ಗುರು ಹಿರಿಯರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು