9:31 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಮಾರ್ಚ್ 25: ಮಂಗಳೂರಿನ ಕೊರ್ಡೆಲ್ ಹೋಲಿ ಕ್ರಾಸ್ ಚರ್ಚ್ ನೇತೃತ್ವದಲ್ಲಿ ‘ಶಿಲುಬೆಯ ಹಾದಿ’

12/03/2024, 16:12

ಮಂಗಳೂರು(reporterkarnataka.com): ನಗರದ ಕೊರ್ಡೆಲ್ ಹೋಲಿ ಕ್ರಾಸ್ ಚರ್ಚು ನೇತೃತ್ವದಲ್ಲಿ ಮಾರ್ಚ್ 25ರಂದು ಸಂಜೆ 4.30 ಗಂಟೆಗೆ “ಶಿಲುಬೆಯ ಹಾದಿ” (ಕುರ್ಸಾಚಿ ವಾಟ್) ನ್ನು ಸಿಟಿ ವಲಯದ 12 ಚರ್ಚುಗಳ ಸಹಯೋಗದಿಂದ ನಡೆಸಲಾಗುತ್ತದೆ.

ಕೊರ್ಡೆಲ್, ವಾಮಂಜೂರ್, ಪಾಲ್ದಾನೆ, ಬೊಂದೇಲ್, ದೇರೆಬೈಲು, ನೀರುಮಾರ್ಗ, ಕೆಲರೈ, ಬಜ್ಜೊಡಿ, ಕಪಿತಾನಿಯೋ, ಬಜಾಲ್, ಪೆರ್ಮಾಯಿ, ಶಕ್ತಿನಗರ ಚರ್ಚುಗಳು ಭಾಗವಹಿಸಲಿದ್ದು, ಏಸುಕ್ರಿಸ್ತರು ಶಿಲುಬೆಯ 14 ಹಾದಿಗಳನ್ನು ಈ ಚರ್ಚುಗಳ ಕಲಾವಿದರ ನಟನೆಯ ಮೂಲಕ ಚರ್ಚಿನ ಆವರಣದ ಒಳಗೆ ನಡೆಸಲಾಗುವುದು. ಶಿಲುಬೆಯ ಹಾದಿಯ 14 ನಿಲ್ದಾಣಗಳನ್ನು (ಸ್ಟೇಶನ್) ನ್ನು ವಲಯದ 12 ಚರ್ಚುಗಳ ಹಾಗೂ ಧರ್ಮಗುರುಗಳ ಮತ್ತು ಧರ್ಮಭಗಿನಿಯರ ಪ್ರತಿನಿಧಿಗಳು ನಡೆಸಿಕೊಡುತ್ತಾರೆ. ಸಂಜೆ 4.30ಕ್ಕೆ ಬಲಿಪೂಜೆ, ನಂತರ ಶಿಲುಬೆಯ ಹಾದಿ, 12ನೇ ನಿಲ್ದಾಣದಲ್ಲಿ ಪ್ರವಚನವನ್ನು ನಡೆಸಿಲಾಗುವುದು.
ಈ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ| ಪಾ| ಕ್ಲಿಫರ್ಡ್ ಫೆರ್ನಾಂಡಿಸ್ ಅವರು
ಸ್ಕ್ರಿಪ್ಟ್ ಬಿಡುಗಡೆ ಮಾಡಿದರು. ಸಹಾಯಕ ಧರ್ಮಗುರುಗಳಾದ ವಂ| ಪಾ| ಪಾವುಲ್ ಡಿ’ಸೋಜ, ಧರ್ಮಪ್ರಾಂತ್ಯದ ಪಿ.ಆರ್.ಓ. ರೋಯ್ ಕ್ಯಾಸ್ಟಲಿನೋ, ಚರ್ಚಿನ ಉಪಾಧ್ಯಕ್ಷ ರೂತ್ ಕ್ಯಾಸ್ಟಲಿನೋ, ಕಾರ್ಯದರ್ಶಿ ಅನಿಲ್ ಡೆಸಾ, ಸರ್ವ ಆಯೋಗದ ಸಂಚಾಲಕ ಡೊಲ್ಫಿ ಡಿ’ಸೋಜ, 12 ಚರ್ಚುಗಳ ಉಪಾಧ್ಯಕ್ಷರು ಉಪಸ್ಥಿತರಿದ್ದರು. ಕಲಾವಿದರಿಗೆ ನಿರ್ದೇಶಕರಾಗಿ ಡೆನ್ನಿಸ್ ಮೊಂತೆರೋ ಹಾಗೂ ಸ್ಟಾö್ಯನಿ ಅಲ್ವಾರೀಸ್, ಏಸು ಕ್ರಿಸ್ತರ ಪಾತ್ರ ವನ್ನು ವಿಕಾಸ್ ಕುಲಾಕುಲ್, ಮದರ್ ಮೇರಿಯ ಪಾತ್ರವನ್ನು ಆ್ಯಶೆಲ್ ಡಿ’ಸಿಲ್ವಾ, ಪಿಲಾತನ ಪಾತ್ರವನ್ನು ಆಲ್ವಿನ್ ಪಾಯಸ್ ಮುಂತಾದವರು ನಿರ್ವಹಿಸಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು