10:34 AM Sunday21 - December 2025
ಬ್ರೇಕಿಂಗ್ ನ್ಯೂಸ್
ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿ ಮಾಡಲು ಬಿಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಟಿಪ್ಪರ್ -ಬೊಲೆರೋ ಜೀಪ್ ಡಿಕ್ಕಿ: ಕರ್ತವ್ಯದಲ್ಲಿ ತೆರಳುತ್ತಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಗೆ ಗಾಯ ಹೌದು…ವೈದ್ಯೋ ನಾರಾಯಣೋ ಹರಿ; ಆದರೆ, ದಾದಿಯರು ಎಲೆ ಮರೆಯ ಕಾಯಿ! ಪೌರ ಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ:… ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ: ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ನಾಪತ್ತೆಯಾಗಿದ್ದ ಮತ್ತಿಬ್ಬರು ಆರೋಪಗಳ ಬಂಧನ Belagavi | ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ…

ಇತ್ತೀಚಿನ ಸುದ್ದಿ

ಮರಣ ದಂಡಣೆಗೊಳಗಾಗಿದ್ದ ಆತನಿಗೆ ಬಂತು ಸಹಜ ಸಾವು!!: ಆ ನರಹಂತಕನ ಮೇಲಿತ್ತು ಬರೋಬರಿ 130 ಮಂದಿ ಹತ್ಯೆ ಕೇಸು!

02/08/2021, 09:05

ವಾಷಿಂಗ್‌ಟನ್ : ಆತನೊಬ್ಬ ಕೊಲೆಗಾರ. ಅಂತಿಂಥ ಕೊಲೆಗಾರನಲ್ಲ, ಮಹಾನ್ ಕೊಲೆಗಾರ. ಬರೋಬ್ಬರಿ 130 ಮಂದಿಯನ್ನು ಹತ್ಯೆಗೈದ ಆರೋಪ ಆತನ ಮೇಲಿದೆ. ನ್ಯಾಯಾಲಯ ಆತನಿಗೆ ಮರಣ ದಂಡನೆ ವಿಧಿಸಿದೆ. ಆದರೆ ಶಿಕ್ಷೆ ಜಾರಿಯಾಗಿಲ್ಲ. ನೇಣುಗಂಬವೇರಲು ಕಾಯುತ್ತಿದ್ದಂತೆ ಆತ ಸಾವನ್ನಪ್ಪಿದ್ದಾನೆ.

ಈತ ಬೇರೆ ಯಾರೂ ಅಲ್ಲ, ‘ದಿ ಡೇಟಿಂಗ್ ಗೇಮ್ ಕಿಲ್ಲರ್’ ಎಂದೇ ಕರೆಯಲಾದ ರೋಡ್ನಿ ಜೇಮ್ಸ್ ಅಲ್ಕಾಲಾ. ಈತ ಕ್ಯಾಲಿಫೋರ್ನಿಯಾದಲ್ಲಿ ಮರಣದಂಡನೆ ಎದುರು ನೋಡುತ್ತಿದ್ದಂತೆ ಕ್ಯಾಲಿಫೋರ್ನಿಯಾದ ಸ್ಯಾನ್ ಜೊವಾಕ್ವಿನ್ ವ್ಯಾಲಿಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಸಹಜ ಸಾವು ಸಂಭವಿಸಿ ನ್ಯಾಯಾಲಯ ಶಿಕ್ಷೆ ನೀಡುವ ಮುನ್ನವೇ ಇಹಲೋಕ ತ್ಯಜಿಸಿದ್ದಾನೆ. ಜೈಲು ಅಧಿಕಾರಿಗಳು ಈ ವಿಷಯವನ್ನು ದೃಢಪಡಿಸಿದ್ದಾರೆ.

1977 ಮತ್ತು 1979 ರ ನಡುವೆ ಕ್ಯಾಲಿಫೋರ್ನಿಯಾದಲ್ಲಿ ನಡೆದ 12 ಹತ್ಯೆ ಪ್ರಕರಣಗಳಲ್ಲಿ ಅಲ್ಕಾಲಾಗೆ 2010 ರಲ್ಲಿ ಮರಣದಂಡನೆ ವಿಧಿಸಲಾಗಿತ್ತು. ಈತ ಕೊಂದವರಲ್ಲಿ 12 ವರ್ಷದ ಬಾಲಕಿಯೂ ಕೂಡ ಇದ್ದಳು. ಅಲ್ಕಾಲಾ ಮಾಡಿದ ಕೊಲೆಯನ್ನು ಲೆಕ್ಕ ಹಾಕುತ್ತಾ ಅಧಿಕಾರಿಗಳು ದೇಶಾದ್ಯಂತ ಈತ130 ಜನರನ್ನು ಅಲ್ಕಲಾ ಕೊಂದಿರಬಹುದು ಎಂದು ಅಂದಾಜಿಸುತ್ತಾರೆ.

ನ್ಯೂಯಾರ್ಕ್‌ನಲ್ಲಿ ನಡೆದ ಎರಡು ನರ ಹತ್ಯೆ ಪ್ರಕರಣಗಳಲ್ಲಿ ತಪ್ಪೊಪ್ಪಿಕೊಂಡ ನಂತರ 2013 ರಲ್ಲಿ ಅಲ್ಕಲಾನಿಗೆ 25 ವರ್ಷಗಳ ಹೆಚ್ಚುವರಿ ಜೀವಿತಾವಧಿಯನ್ನು ನೀಡಲಾಯಿತು. 2016 ರಲ್ಲಿ ನಡೆದ ಮಹಿಳೆಯ ಕೊಲೆ ಪ್ರಕರಣದಲ್ಲಿ ಡಿಎನ್‌ಎ ಸಾಕ್ಷ್ಯಗಳು ಅಲ್ಕಲಾರಿಗೆ ಸಂಪರ್ಕವಿದೆ ಎಂಬುದನ್ನು ಗೊತ್ತುಪಡಿಸಿದ ನಂತರ ಅವರ ಮೇಲೆ ಆರೋಪ ಹೊರಿಸಲಾಯಿತು.

ಕ್ಯಾಲಿಫೋರ್ನಿಯಾದ ಮರಣದಂಡನೆ ಸ್ಥಳ ಸ್ಯಾನ್ ಫ್ರಾನ್ಸಿಸ್ಕೋದ ಬಳಿಯ ಸ್ಯಾನ್ ಕ್ವೆಂಟಿನ್ ರಾಜ್ಯ ಕಾರಾಗೃಹದಲ್ಲಿದೆ, ಆದರೆ ವರ್ಷಗಳ ಕಾಲ ಅಲ್ಕಾಲಾವನ್ನು 200 ಮೈಲಿಗಿಂತಲೂ ಹೆಚ್ಚು ದೂರದಲ್ಲಿರುವ ಕೊರ್ಕೊರನ್‌ನ ಜೈಲಿನಲ್ಲಿ ಇರಿಸಲಾಗಿತ್ತು, ಅಲ್ಲಿ ಅವರು 24 ಗಂಟೆಯೂ ವೈದ್ಯಕೀಯ ಆರೈಕೆಯನ್ನು ಪಡೆಯಬಹುದಾಗಿತ್ತು.

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಮನುಷ್ಯರನ್ನು ಕೊಲೆ ಮಾಡಿ ಆನಂದಿಸುವ ವಿಲಕ್ಷಣ ವ್ಯಕ್ತಿ ಆತ ಎಂದು ಕ್ಯಾಲಿಫೋರ್ನಿಯಾದ ಆರೆಂಜ್ ಕೌಂಟಿಯ ಪ್ರಾಸಿಕ್ಯೂಟರ್ ಮ್ಯಾಟ್ ಮರ್ಫಿ ತನ್ನ ವಿಚಾರಣೆಯ ಸಮಯದಲ್ಲಿ ತಿಳಿಸಿದ್ದಾರೆ. ಆತ ಎಷ್ಟು ಕೊಲೆ ಮಾಡಿದ್ದಾನೆ ಎಂಬುದು ಯಾರಿಗೂ ಗೊತ್ತಿಲ್ಲ ಇದು ಇನ್ನೂ ಪತ್ತೆಯಾಗದ ಪ್ರಕರಣವಾಗಿದೆ.

ಗವರ್ನ್ ಗೇವಿನ್ ನ್ಯೂಸಮ್ ಅವರು ಗವರ್ನರ್ ಆಗಿದ್ದಾಗ ಮರಣದಂಡನೆಗೆ ನಿಷೇಧ ಮಾಡಿದ್ದರು. ಆದರೆ ಅಲ್ಕಾಲಾದ 

ಲಾಕರ್‌ನಲ್ಲಿರುವ ಆಭರಣ ಚೀಲವೊಂದರಲ್ಲಿ ದೊರೆತ ಒಂದು ಜೋಡಿ ಚಿನ್ನದ ಚೆಂಡಿನಾಕಾರದ ಕಿವಿಯೋಲೆಗಳು ಆತನಿಗೆ ಮರಣದಂಡಣೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿತು. ಅದು

ತನ್ನ 12 ರ ಹರೆಯದ ಮಗಳದ್ದು ಎಂದು ಕೊಲೆಯಾದ ರಾಬಿನ್ ಸ್ಯಾಮ್ಸೊಳ ತಾಯಿ ಕೊಲೆ ವಿಚಾರಣೆಯಲ್ಲಿ ಸಾಕ್ಷ್ಯ ನೀಡಿದ್ದರು.

ಕ್ಯಾಲಿಫೋರ್ನಿಯಾ ಪ್ರಾಸಿಕ್ಯೂಟರ್‌ಗಳು ಅಲ್ಕಾಲಾ ಅವರು ಕೊಲೆ ಮಾಡಿರುವ ಹದಿಹರೆಯದ ಮಕ್ಕಳ ಕನಿಷ್ಠ ಎರಡು ಜೊತೆ ಕಿವಿಯೋಲೆಗಳನ್ನು ಇಟ್ಟುಕೊಂಡಿದ್ದಾನೆ ಎಂದು ಹೇಳಿದರು. ಆತ ಕೊಲೆ ಮಾಡಿದ ನಾಲ್ವರು ಮಹಿಳೆಯರಲ್ಲಿ ಒಬ್ಬಾಕೆ ಮೃತದೇಹ  ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ಮತ್ತೊಬ್ಬಾಕೆಯನ್ನು ಶವ ಸುತ್ತಿಗೆಯಿಂದ ಹೊಡೆದು ಸಾಯಿಸಿದ ಸ್ಥಿತಿಯಲ್ಲಿತ್ತು. ಮತ್ತಿಬ್ಬರನ್ನು ಕತ್ತು ಹಿಚುಕಿ ಕೊಲೆ ಮಾಡಲಾಗಿತ್ತು ಎಂದು ತಿಳಿದು ಬಂದಿತು.

ಇತ್ತೀಚಿನ ಸುದ್ದಿ

ಜಾಹೀರಾತು