ಇತ್ತೀಚಿನ ಸುದ್ದಿ
ಮಣ್ಣಗುಡ್ಡೆ ವಾರ್ಡ್ ವಿವಿಧ ಅಭಿವೃದ್ಧಿ ಕಾಮಗಾರಿ: ಶಾಸಕ ವೇದವ್ಯಾಸ ಕಾಮತ್ ಭೂಮಿಪೂಜೆ
10/12/2022, 19:29

ಮಂಗಳೂರು(reporterkarnataka.com): ಪಾಲಿಕೆಯ ಮಣ್ಣಗುಡ್ಡೆ ವಾರ್ಡಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಯ ಕಾಮಗಾರಿಗಳಿಗೆ ಶಾಸಕ ವೇದವ್ಯಾಸ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಮತ್, ಮಣ್ಣಗುಡ್ಡೆ ವಾರ್ಡಿನಲ್ಲಿ ಸಾರ್ವಜನಿಕರ ಹಾಗೂ ಪಾಲಿಕೆ ಸದಸ್ಯರ ಮನವಿಯಂತೆ ಗುಂಡೂರಾವ್ ಲೇನ್ ದತ್ತ ಅಪಾರ್ಟ್‌ಮೆಂಟ್ ಬಳಿ 18 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಲುಸಂಕ ನಿರ್ಮಾಣ, 4.80 ಲಕ್ಷ ರೂಪಾಯಿ ವೆಚ್ಚದಲ್ಲಿ ಮಣ್ಣಗುಡ್ಡೆ ಗುರ್ಜಿ ಜಂಕ್ಷನ್ ಬಳಿಯಿರುವ ಆಟೋರಿಕ್ಷಾ ನಿಲ್ದಾಣಕ್ಕೆ ಮೇಲ್ಛಾವಣಿ ನಿರ್ಮಾಣ ಕಾಮಗಾರಿ ಹಾಗೂ 40 ಲಕ್ಷ ರೂಪಾಯಿ ವೆಚ್ಚದಲ್ಲಿ ಮಠದಕಣಿ ಸಂಘನಿಕೇತನ ಹಿಂಭಾಗದಿಂದ ಬರ್ಕೆಯ ವರೆಗೆ ರಾಜಕಾಲುವೆಗೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಮಣ್ಣಗುಡ್ಡೆ ಪರಿಸರದಲ್ಲಿ ಈಗಾಗಲೇ ಅನೇಕ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ಕೆಲ ವರ್ಷಗಳಲ್ಲಿ ಈ ಪರಿಸರದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದರು.
ಸ್ಥಳೀಯ ಕಾರ್ಪೋರೇಟರ್ ಸಂಧ್ಯಾ ಮೋಹನ್ ಆಚಾರ್, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ಬಿಜೆಪಿ ಮುಖಂಡರಾದ ರಾಮಚಂದ್ರ ಭಂಡಾರಿ, ರಾಜೇಂದ್ರ ರೈ, ಕೇಶವ ಪ್ರಭು, ತರುಣ್ ಠಾಕರ್, ಜಗದೀಶ್ ಭಂಡಾರಿ, ಸ್ಟೇನಿ ರೋಡ್ರಿಗಸ್, ಸುಕಾಲಾಕ್ಷಿ ಸುವರ್ಣ, ಶ್ರೀ ದೇವಿ ಆಚಾರ್, ಜಯಂತಿ ಆಚಾರ್ಯ, ಅಶ್ವಿನಿ ಬಾಳಿಗ, ವಸಂತ್ ಶೇಟ್, ಸುರೇಂದ್ರ ಶ್ರಿಯಾನ್, ಪ್ರದೀಪ್ ಕುಮಾರ್ ಶೆಟ್ಟಿ, ವಿಜಯ್ ಕುಮಾರ್, ನಾಗೇಂದ್ರ ಪೈ, ಉದಯ್ ಕುಮಾರ್, ಶ್ರೀನಿವಾಸ್, ರಮಾನಂದ ಪಾಂಗಳ್, ಕಮಲಾಕ್ಷಿ, ನವೀನ್ ಮಾಡ ಮುಂತಾದವರು ಉಪಸ್ಥಿತರಿದ್ದರು.