2:20 AM Monday26 - January 2026
ಬ್ರೇಕಿಂಗ್ ನ್ಯೂಸ್
ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:… ಸೋಮವಾರಪೇಟೆ ಕಾಜೂರಿನಲ್ಲಿ ಭಾರೀ ಬೆಂಕಿ ಅವಘಡ: ಮನೆಯೊಳಗೆ ನಿದ್ರಿಸುತ್ತಿದ್ದ ಬಾಲಕ ಬಚಾವ್ ಮಾಡಿದ… ಕೊಡಗಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ: ಉಸ್ತುವಾರಿ ಸಚಿವ ಬೋಸರಾಜ್ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಾಲದಲ್ಲಿ ಗಣರಾಜ್ಯೋತ್ಸವ: 130ಕ್ಕೂ ಅಧಿಕ ವಾಹನ ಚಾಲಕಿಯರಿಗೆ… ರಾಜ್ಯದಲ್ಲಿದ್ದಾರೆ ಒಟ್ಟು 10,365 ಟ್ರಾನ್ಸ್ ಜೆಂಡರ್: ಸಮೀಕ್ಷೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ… ಹುಬ್ಬಳ್ಳಿ | ಕೊಳೆಗೇರಿ ನಿವಾಸಿಗಳ ಮುಖ್ಯವಾಹಿನಿಗೆ ತರಲು ಬೃಹತ್ ಪ್ರಮಾಣದಲ್ಲಿ ಮನೆ ವಿತರಣೆ:… ಪ್ರೀತಿಯಲ್ಲಿ ಒಂದಾದ ಭಾರತ- ಚೀನಾ!: ಚೈನಾದ ಬೆಡಗಿಯ ಕೈ ಹಿಡಿದ ಕಾಫಿನಾಡ ಯುವಕ ಗೋಣಿಕೊಪ್ಪ- ತಿತಿಮತಿ ಮುಖ್ಯ ರಸ್ತೆಯಲ್ಲಿ‌ ರಾತ್ರಿ ವ್ಯಾಘ್ರನ ದರ್ಶನ; ಭಯಭೀತರಾದ ಗ್ರಾಮಸ್ಥರು ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ

ಇತ್ತೀಚಿನ ಸುದ್ದಿ

ಮಂಜು ಮುಚ್ಚಿದ ಕಾಫಿನಾಡ ಕೊಟ್ಟಿಗೆಹಾರ: ಕರ್ನಾಟಕದ ಕಾಶ್ಮೀರ ಅಂದ್ರು ಪ್ರವಾಸಿಗರು!!

05/05/2022, 07:58

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ರಸ್ತೆ ತುಂಬಾ ಭಾರೀ ಮಂಜು ಕವಿದಿರುವ ಪರಿಣಾಮ ವಾಹನ ಸವಾವರು ವಾಹನಗಳನ್ನ ಚಲಾಯಿಸೋದಕ್ಕೂ ಪರದಾಡುವಂತಹಾ ಸನ್ನಿವೇಶ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಎದುರಾಗಿದೆ. ಕೊಟ್ಟಿಗೆಹಾರ ಬೆಟ್ಟಗುಡ್ಡಗಳ ಮಧ್ಯೆ ಇರುವ ಪುಟ್ಟ ಹಾಗೂ ಸುಂದರ ಗ್ರಾಮ. ಪ್ರವಾಸಿಗರನ್ನ ಮಂತ್ರಮುಗ್ಧರನ್ನಾಗಿಸೋ ಚಾರ್ಮಾಡಿಘಾಟಿಗೆ ಅಂಟಿಕೊಂಡಂತೆಯೇ ಇರುವ ಊರು. ಚಾರ್ಮಾಡಿ ಘಾಟಿಯಲ್ಲಿ ಬೀಸುವ ಗಾಳಿ ಶಬ್ಧ ಕೂಡ ಈ ಊರಲ್ಲಿ ಕೇಳಿಸುತ್ತದೆ. ಜೊತೆಗೆ, ಮಳೆಗಾಲದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ. ಮಳೆ ಜೊತೆ ವರ್ಷಪೂರ್ತಿ ತಣ್ಣನೆಯ ಗಾಳಿ ಬೀಸುವ ಸ್ಥಳವಾಗಿದ್ದು, ವರ್ಷದ ಏಳೆಂಟು ತಿಂಗಳು ಮಂಜಿನಿಂದಲೇ ಕೂಡಿರುವ ಊರು. ಕರ್ನಾಟಕದ ಕಾಶ್ಮೀರ ಅಂದರೂ ತಪ್ಪಿಲ್ಲ. ಅದೇ ರೀತಿ, ಇಂದು ಕೂಡ ಕೊಟ್ಟಿಗೆಹಾರದಲ್ಲಿ ಭಾರೀ ಮಂಜು ಕವಿದಿದ್ದು ವಾಹನ ಸವಾರರು ಪರದಾಡುವಂತಾಗಿದೆ.


ಕೇವಲ ಕೊಟ್ಟಿಗೆಹಾರವಷ್ಟೆ ಅಲ್ಲದೆ ಧರ್ಮಸ್ಥಳ ಮಾರ್ಗದ ಚಾರ್ಮಾಡಿಘಾಟ್ ಹಾಗೂ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ಬಾಳೂರು, ಕಳಸ ಮಾರ್ಗದಲ್ಲೂ ಕೂಡ ಯತೇಚ್ಛವಾಗಿ ಮಂಜು ಕವಿದಿರುವ ಪರಿಣಾಮ ವಾಹನ ಸವಾರರು ವಾಹನಗಳನ್ನ ಚಲಾಯಿಸಲು ಪರಿಪಾಟಲು ಅನುಭವಿಸಿದ್ದಾರೆ. ಧರ್ಮಸ್ಥಳ ಹಾಗೂ ಹೊರನಾಡಿಗೆ ಹೋಗುವ ಪ್ರವಾಸಿಗರು ಈ ಮಂಜಿನಲ್ಲಿ ವಾಹನ ಚಲಾಯಿಸೋದು ಸಹಾಸವೇ ಸರಿ ಎಂದು ವಾಹನಗಳನ್ನ ರಸ್ತೆ ಬದಿಯಲ್ಲಿ ನಿಲ್ಲಿಸಿ ರಸ್ತೆ ಬದಿಯ ಕ್ಯಾಂಟೀನ್‍ಗಳಲ್ಲಿ ಬೋಂಡ, ಬಜ್ಜಿ, ಕಾಫಿ-ಟೀ ಜೊತೆ ನೀರ್ ದೋಸೆ ತಿಂದು ಮಿಸ್ಟ್ ಸ್ವಲ್ಪ ಕಡಿಮೆಯಾದ ಬಳಿಕ ಹೋಗುತ್ತಿದ್ದಾರೆ. ಫಾಗ್ ಲೈಟ್ ಹಾಗೂ ಹೆಡ್‍ಲೈಟ್ ಹಾಕಿಕೊಂಡೇ ಸಾಗುವಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಟ್ಟಿಗೆಹಾರದಿಂದ ಧರ್ಮಸ್ಥಳ ಹಾಗೂ ಹೊರನಾಡಿನ ಎರಡು ಮಾರ್ಗಗಳೂ ಹಾವು-ಬಳುಕಿನ ಮೈಕಟ್ಟಿನ ತಿರುವುಗಳ ರಸ್ತೆಯಾಗಿದ್ದು ಈ ಮಂಜಿನ ಮಧ್ಯೆ ತಿರುವುಗಳಲ್ಲಿ ಹೆಡ್‍ಲೈಟ್-ಫಾಗ್ ಲೈಟ್ ಹಾಕಿಕೊಂಡು ವಾಹನ ಚಲಾಯಿಸೋದಕ್ಕೂ ಚಾಲಕರು ಹಿಂದೇಟು ಹಾಕುತ್ತಿದ್ದಾರೆ. ರಸ್ತೆಯಲ್ಲಿ ಓಡಾಡುವ ವಾಹನಗಳಲ್ಲಿ ಉರಿಯುವ ದೀಪದ ಬೆಳಕಿಗೆ ಮಂಜು ಸೇರಿ ಮತ್ತೊಂದು ಲೋಕವೇ ಸೃಷ್ಟಿಯಾಗಿದೆ. ಆದರೆ, ಪ್ರವಾಸಿಗರು ಈ ಕಷ್ಟ-ನಷ್ಟದ ಮಧ್ಯೆಯೂ ಮಂಜಿನಿಂದ ಮುಳುಗಿರೋ ಕೊಟ್ಟಿಗೆಹಾರ ಹಾಗೂ ಮರಗಿಡಗಳ ಮೇಲೆ ಹಾಲ್ನೊರೆಯಂತೆ ಕೂತಿರೋ ಈ ಸುಂದರ ವಾತಾವರಣವನ್ನ ಕಂಡು ಇದು ಕರ್ನಾಟಕದ ಕಾಶ್ಮೀರ ಎಂದು ಬಣ್ಣಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು