8:23 AM Tuesday30 - December 2025
ಬ್ರೇಕಿಂಗ್ ನ್ಯೂಸ್
ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ… ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಗೃಹ ಸಚಿವರೇ ಹೊಣೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Bangalore | ಹೊಸ ವರ್ಷಾಚರಣೆ: ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ತಾಕೀತು ಕನ್ನಡ ಭಾಷೆ, ನೆಲ, ಜಲ, ಗಡಿ, ಕನ್ನಡಿಗರಿಗೆ ಉದ್ಯೋಗ ವಿಚಾರದಲ್ಲಿ ರಾಜಿ ಇಲ್ಲ:… ಮೈಸೂರು ಅರಮನೆ ಬಳಿ ಸ್ಫೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ; ಹೆಚ್ಚಿದ ಆತಂಕ ಮಂಗಳೂರು ಡೇಟಾ ಸೆಂಟರ್ ಭಾರತದ ಅತ್ಯಂತ ವೆಚ್ಚ-ದಕ್ಷ ಕೇಂದ್ರ: ಫೀಸಿಬಿಲಿಟಿ ವರದಿ ಹೊಸ ವರ್ಷಾಚರಣೆ: ರೆಸಾರ್ಟ್, ಹೋಟೆಲ್, ಹೋಂ ಸ್ಟೇ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ಕೊಡಗಿನಲ್ಲಿ ಅರಣ್ಯ ರಕ್ಷಕರಿಂದಲೇ ಮರಗಳ ಲೂಟಿ: ಲೋಡರ್ ಬಂಧನ; ನಾಲ್ವರು ಪರಾರಿ ಖಾಸಗಿ ವಾಹನಕ್ಕೆ ನಾಮಫಲಕ | ಪೊಲೀಸಪ್ಪನಿಂದೇ ಕಾನೂನು ಉಲ್ಲಂಘನೆ: ದಂಡ ಯಾವತ್ತೇ ವಿಧಾನಸಭೆ ಚುನಾವಣೆ ನಡೆದರೂ ಬಿಜೆಪಿಗೆ ಬಹುಮತ: ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ವಿಶ್ವಾಸ

ಇತ್ತೀಚಿನ ಸುದ್ದಿ

ಮಣಿಪಾಲದಲ್ಲಿ ಮನೆ ಕಳ್ಳತನ: ಇಬ್ಬರು ತರುಣರು ಸಹಿತ 4 ಮಂದಿ ಬಂಧನ

03/03/2023, 13:35

ಉಡುಪಿ(reporterkarnataka.com):
ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ಬಾಲಕರು ಸಹಿತ ನಾಲ್ವರು ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಅಲೆವೂರು ಆದರ್ಶನಗರ ನಿವಾಸಿ ವರುಣ್ ಕೊಡಂಚ(19) ಮತ್ತು ಕಾರ್ತಿಕ್ ಪೂಜಾರಿ(19) ಬಂಧಿತ ಆರೋಪಿಗಳು. ಇವರು ಫೆ.18ರಂದು ರಾತ್ರಿ ಶಿವಳ್ಳಿ ಗ್ರಾಮದ ನೆಹರು ನಗರದ ಮನೆಯೊಂದಕ್ಕೆ ನುಗ್ಗಿ ಕಪಾಟಿನೊಳಗೆ ಇದ್ದ 2.40 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಕಾರ್ಯಾಚರಣೆಗೆ ಇಳಿದ ಪೊಲೀಸರು, ಇಬ್ಬರು ಅಪ್ರಾಪ್ತ ಬಾಲಕರು ಸಹಿತ ಒಟ್ಟು ನಾಲ್ವರು ಆರೋಪಿಗಳನ್ನು ಪೆರಂಪಳ್ಳಿ ಶೀಂಬ್ರಾ ಕ್ರಾಸ್ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರಿಂದ 2.40 ಲಕ್ಷ ಚಿನ್ನಾಭರಣ, 1 ಸ್ಕೂಟರ್ ಹಾಗೂ ಕೃತ್ಯಕ್ಕೆ ಬಳಸಿದ 1 ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು