ಇತ್ತೀಚಿನ ಸುದ್ದಿ
ಮಣಿಪಾಲ: ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಭಾರೀ ಅಗ್ನಿ ಅನಾಹುತ: ತಪ್ಪಿದ ದುರಂತ
15/07/2022, 13:42
ಮಣಿಪಾಲ(reporterkarnataka.com): ಬೆಂಕಿ ಅನಾಹುತಕ್ಕೆ ಇಲ್ಲಿನ ಪೇಟೆಯಲ್ಲಿರುವ ವಸತಿ ಗೃಹದಲ್ಲಿದ್ದ ರೆಸ್ಟೋರೆಂಟ್ ಒಂದು ಸುಟ್ಟು ಕರಕಲಾದ ಘಟನೆ ಶುಕ್ರವಾರ ನಡೆದಿದೆ.
ಖಾಸಗಿ ವಸತಿಗೃಹದ ರೆಸ್ಟೋರೆಂಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಕೆಲವೇ ಹೊತ್ತಿನಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಫ್ಯಾಮಿಲಿ ರೆಸ್ಟೋರೆಂಟ್ ನ್ನು ವ್ಯಾಪಿಸಿದೆ.
ಬೆಳಗಿನ ಜಾವ ಬೆಂಕಿ ಹೊತ್ತಿಕೊಂಡ ತಕ್ಷಣ ಅಗ್ನಿಶಾಮಕ ದಳವನ್ನು ಕರೆಸಿಕೊಳ್ಳಲಾಯಿತು. ಸತತ ಕಾರ್ಯಚರಣೆಯಿಂದ ಬೆಂಕಿ ನಂದಿಸಲಾಗಿದೆ. ಆದರೆ ಫ್ಯಾಮಿಲಿ ರೆಸ್ಟೋರೆಂಟ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂ.ನಷ್ಟ ಸಂಭವಿಸಿದೆ. ರೆಸ್ಟೋರೆಂಟ್‌ನ ಪೀಠೋಪಕರಣಗಳ ಜೊತೆಗೆ ಸಾಕಷ್ಟು ಮದ್ಯದ ಬಾಟಲಿಗಳು ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದುಬಂದಿದೆ.