ಇತ್ತೀಚಿನ ಸುದ್ದಿ
ಮಣಿಪಾಲ: ಜೀವನದಲ್ಲಿ ಜಿಗುಪ್ಸೆಗೊಂಡು ಆಟೋ ಚಾಲಕ ನೇಣಿಗೆ ಶರಣು
14/09/2022, 12:22
ಮಣಿಪಾಲ(reporterkarnataka.com):ಆಟೋ ಚಾಲಕರೊಬ್ಬರಿ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲ ಹೆರ್ಗ ಗ್ರಾಮದ ನರಸಿಂಗೆ ದೇವಸ್ಥಾನದ ಬಳಿ ನಡೆದಿದೆ.
ಮೃತರನ್ನು ಹೆರ್ಗ ಗ್ರಾಮದ ನಿವಾಸಿ ರಾಧಾಕೃಷ್ಣ(53) ಎಂದು ಗುರುತಿಸಲಾಗಿದೆ. ಇವರು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಕೋಣೆಯ ಪಕ್ಕಾಸಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಣಿಪಾಲ ಪೋಲಿಸರು ಮಹಜರು, ಕಾನೂನು ಪ್ರಕ್ರಿಯೆ ನಡೆಸಿದರು. ಶವವನ್ನು ಮಣಿಪಾಲ ಆಸ್ಪತ್ರೆಯ ಶವಗಾರಕ್ಕೆ ವೈದ್ಯಕೀಯ ಪರೀಕ್ಷೆಗೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಇಲಾಖೆಗೆ ನೆರವಾದರು.