ಇತ್ತೀಚಿನ ಸುದ್ದಿ
ಮಾಣಿಲ ಶ್ರೀಧಾಮ ವರಮಹಾಲಕ್ಷ್ಮೀ ಪೂಜೆ ಹೊರಕಾಣಿಕೆ: ಶರವು ದೇವಾಲಯದಿಂದ ಚಾಲನೆ
10/08/2023, 11:21
ಮಂಗಳೂರು(reporterkarnataka.com): ಮಾಣಿಲ ಶ್ರೀಧಾಮದಲ್ಲಿ ಶ್ರೀ ಮೋಹನದಾಸ ಸ್ವಾಮೀಜಿ ಅವರ ನೇತೃತ್ವದಲ್ಲಿ ಒಂದು ಮಂಡಲ ನಡೆಯುವ ಶ್ರೀ ವರಮಹಾಲಕ್ಷ್ಮಿ ಪೂಜೆಗೆ ಭಕ್ತರಿಂದ ಸಂಗ್ರಹಿಸಿದ ಹೊರೆ ಕಾಣಿಕೆಗೆ ನಗರದ ಶ್ರೀ ಶರವು ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.
ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ,ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಕಾರ್ಪೋರೇಟರ್ ಸುಧೀರ್ ಕಣ್ಣೂರು,ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಜಗದೀಶ ಶೇಣವ, ಶಶಿಕಲಾ ಕಾವ ಮುಂತಾದವರು ಭಾಗವಹಿಸಿದ್ದರು.