9:44 AM Wednesday3 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಮಂಗಳೂರು ವಿವಿ ಕಾಲೇಜ್‌ನಲ್ಲಿ ‘ಅಟಿಲ್-೨೦೨೩’ ಆಹಾರ ಮೇಳ

08/06/2023, 10:14

ಚಿತ್ರ/ವರದಿ: ಅನುಷ್ ಪಂಡಿತ್ ಮಂಗಳೂರು
ಮಂಗಳೂರು (Reporter Karnataka)ದಕ್ಷಿಣ ಕನ್ನಡದ ಪ್ರವಾಸೋದ್ಯಮ,ಆಹಾರ ಮತ್ತು ಸಂಸ್ಕೃತಿ ಒಂದಕ್ಕೊಂದು ಸಂಬಂಧಿಸಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ವಿಶೇಷ ಅಧಿಕಾರಿ ಡಾ.ಶೇಖರ್ ನಾಯ್ಕ್ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಬಿ.ಬಿ.ಎ ಮತ್ತು ಬಿ.ಎ ಪ್ರವಾಸೋದ್ಯಮ ವಿಭಾಗದ ವತಿಯಿಂದ ಇತ್ತೀಚೆಗೆ ನಡೆದ ಆಹಾರ ಮೇಳೈ- “ಅಟಿಲ್ 2K23” ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ಖಂಡಿಗೆ ಬೀಡಿನ ಶ್ರೀ ಧರ್ಮ ಅರಸು ಉಲ್ಲಾಯ ಕ್ಷೇತ್ರದ ಗಡಿ ಪ್ರಧಾನರಾದ ಶ್ರೀ ಆದಿತ್ಯ ಮುಕ್ಕಾಲ್ದಿ ಅವರು ಆಹಾರ ಮೇಳವನ್ನು ಉದ್ಘಾಟಿಸಿದರು.




ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಿನ್ಸಿಪಾಲ್ ಡಾ.ಅನಸೂಯ ರೈ ವಹಿಸಿದ್ದರು. ಬಿ.ಬಿ.ಎ ವಿಭಾಗ ಮುಖ್ಯಸ್ಥ ಡಾ. ಯತೀಶ್ ಕುಮಾರ್ ಹಾಗು ಬಿ.ಎ ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಮೀನಾಕ್ಷಿ ಎಂ.ಎಂ, ಉಪನ್ಯಾಸಕರಾದ ಶ್ರೀರಾಜ್ ಬಿ ಎಸ್, ಪರಿಣಿತಾ ಶೆಟ್ಟಿ, ರೊವೀನಾ ಸೋನ್ಸ್, ಸುಹಾನಾ ಖುಲ್ಸಂ ,
ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ನಾಗರತ್ನ ಕೆ.ಎ ಮೊದಲಾದವರು ಉಪಸ್ಥಿತರಿದ್ದರು.



ಆಹಾರ ಮೇಳದಲ್ಲಿ ಸುಮಾರು 65 ಕ್ಕೂ ಅಧಿಕ ಬಗೆಯ ಆಹಾರ ಖಾದ್ಯಗಳು ಪ್ರದರ್ಶನಕ್ಕಿದ್ದವು. ವಿದ್ಯಾರ್ಥಿಗಳಿಗೆ ತುಳುನಾಡ್ ಕೇಟರರ್ಸ್ ಸಾಥ್ ನೀಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು