ಇತ್ತೀಚಿನ ಸುದ್ದಿ
ಮಂಗಳೂರು- ದುಬೈ ನಡುವೆ ನೇರ ವಿಮಾನ ಸಂಚಾರ ಆ. 20ರಂದು ಆರಂಭ: ಏರ್ ಪೋರ್ಟ್ ನಲ್ಲಿ ರಾಪಿಡ್ ಆರ್‌ಟಿಪಿಸಿಆರ್ ಉಪಕರಣ ಅಳವಡಿಕೆ
18/08/2021, 22:10
ಮಂಗಳೂರು(reporterkarnataka.com): ಮಂಗಳೂರು- ದುಬೈ ನಡುವೆ ನೇರ ವಿಮಾನ ಸಂಚಾರ ಆಗಸ್ಟ್ 20ರಂದು ಆರಂಭಗೊಳ್ಳಲಿದ್ದು, ಟಿಕೆಟ್ ಬುಕ್ಕಿಂಗ್ ಆರಂಭಗೊಂಡಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಟ್ವಿಟ್ಟರ್ ಖಾತೆಯಲ್ಲಿ ಈ ವಿಷಯ ತಿಳಿಸಿದೆ.
ಈ ನಡುವೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಪಿಡ್ ಆರ್ ಟಿಪಿಸಿಆರ್ ಉಪಕರಣ ಅಳವಡಿಸಿದ ಹಿನ್ನೆಲೆಯಲ್ಲಿ ಮಂಗಳೂರಿನಿಂದ ದುಬೈಗೆ ಬುಧವಾರದಿಂದ ವಿಮಾನ ಯಾನ ಸಂಚಾರ ಮತ್ತೆ ಆರಂಭಗೊಂಡಿದೆ. ಏರ್ ಇಂಡಿಯಾ ಎಕ್ಸ್ ಪ್ರಸ್ ವಿಮಾನವು ಮಂಗಳೂರಿನಿಂದ ಕೇರಳದ ತಿರುವನಂತಪುರ ಮೂಲಕ ದುಬೈ ತಲುಪಲಿದೆ.
ಭಾರತದ ವಿಮಾನಗಳಿಗೆ ಯುಎಇ ವಿಧಿಸಿದ್ದ ನಿರ್ಬಂಧವನ್ನು ಆಗಸ್ಟ್ 5 ರಂದು ವಾಪಸ್ ಪಡೆದಿತ್ತು. ಆದರೆ ಭಾರತದಿಂದ ಹೊರಡುವ 48 ಗಂಟೆ ಮೊದಲು ನಡೆಸಿದ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯ ನೆಗೆಟಿವ್ ವರದಿ ಮತ್ತು 4 ಗಂಟೆ ಮೊದಲು ನಡೆಸಿದ ರ್ಯಾಪಿಡ್ ಆರ್‌ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಹೊಂದಿದವರು ಮಾತ್ರ ಯುಎಇಗೆ ಬರಬಹುದು ಎಂದು ಷರತ್ತು ವಿಧಿಸಿತ್ತು. ಹೀಗಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ರಾಪಿಡ್ ಆರ್‌ಟಿಪಿಸಿಆರ್ ಉಪಕರಣ ಅಳವಡಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಅತ್ಯಾಧುನಿಕ ರ್ಯಾಪಿಡ್ ಆರ್‌ಟಿಪಿಸಿಆರ್ ಪರೀಕ್ಷೆ ಬುಧವಾರದಿಂದ ಅಧಿಕೃತವಾಗಿ ಪ್ರಾರಂಭವಾಗಿದೆ ಎಂದು ತಿಳಿದು ಬಂದಿದೆ.