5:52 PM Monday15 - December 2025
ಬ್ರೇಕಿಂಗ್ ನ್ಯೂಸ್
ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ…

ಇತ್ತೀಚಿನ ಸುದ್ದಿ

ಮಂಗಳೂರು ವಿವಿ ಕಾಲೇಜು ಹಿಜಾಬ್‌ ನಿಷೇಧ: 15 ವಿದ್ಯಾರ್ಥಿನಿಯರ ಪೈಕಿ ಓರ್ವ ವಿದ್ಯಾರ್ಥಿನಿ ಟಿಸಿ ವಾಪಾಸ್‌

23/06/2022, 00:07

ಮಂಗಳೂರು(reporterkarnataka.com): ಹಿಜಾಬ್‌ ಧರಿಸಲು ಅವಕಾಶ ನೀಡದ ಹಿನ್ನೆಲೆ ಮಂಗಳೂರು ಯೂನಿವರ್ಸಿಟಿ ಕಾಲೇಜಿನಿಂದ ಮುಸ್ಲಿಂ ಯುವತಿಯೊಬ್ಬಳು ಟಿಸಿ ವಾಪಾಸ್‌ ಪಡೆದಿದ್ದಾಳೆ.

ಹಿಜಾಬ್‌ ಧರಿಸಲು ಅವಕಾಶ ನೀಡುವಂತೆ 15 ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದರು, 15 ವಿದ್ಯಾರ್ಥಿನಿಯರ ಪೈಕಿ ಓರ್ವ ವಿದ್ಯಾರ್ಥಿನಿ ಟಿಸಿ ವಾಪಾಸ್‌ ಪಡೆದುಕೊಂಡಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಹಿಜಾಬ್ ನಿಷೇಧದ ಹಿನ್ನೆಲೆಯಲ್ಲಿ ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಐವರು ಮುಸ್ಲಿಂ ವಿದ್ಯಾರ್ಥಿನಿಯರು ಬೇರೆ ಕಾಲೇಜುಗಳಿಗೆ ಸೇರಲು ವರ್ಗಾವಣೆ ಪ್ರಮಾಣಪತ್ರ(ಟಿಸಿ) ನೀಡುವಂತೆ ಕಾಲೇಜು ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ.

ಕಾಲೇಜು ತರಗತಿಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿದ್ದು, ಇದರ ವಿರುದ್ಧ ಮುಸ್ಲಿಂ ವಿದ್ಯಾರ್ಥಿಗಳು ಪ್ರತಿಭಟನೆ ಸಹ ನಡೆಸಿದ್ದರು.

ಇತ್ತೀಚೆಗಷ್ಟೇ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪಿ ಎಸ್ ಯಡಪಡಿತ್ತಾಯ ಅವರು, ವಿದ್ಯಾರ್ಥಿಗಳು ಆಯಾ ಸಂಸ್ಥೆಗಳು ನಿಗದಿಪಡಿಸಿದ ಡ್ರೆಸ್ ಕೋಡ್‌ಗೆ ಬದ್ಧರಾಗಿರಬೇಕು ಮತ್ತು ಹೈಕೋರ್ಟ್ ನಿರ್ದೇಶನವನ್ನು ಅನುಸರಿಸಬೇಕು. ಬೇರೆ ಕಾಲೇಜ್ ಗುಳಿಗೆ ಸೇರಬಯಸುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ ವಿವಿ ವಿಶೇಷ ವ್ಯವಸ್ಥೆ ಮಾಡಲಿದೆ ಎಂದು ಹೇಳಿದ್ದರು.

ಐವರು ವಿದ್ಯಾರ್ಥಿಗಳು ಟಿಸಿಗಾಗಿ ಮನವಿಯೊಂದಿಗೆ ತಮ್ಮ ಬಳಿಗೆ ಬಂದಿದ್ದರು ಮತ್ತು ತಾವು ಹಿಜಾಬ್ ಅನುಮತಿಸುವ ಇತರ ಕಾಲೇಜುಗಳಿಗೆ ಸೇರಿಕೊಳ್ಳಲು ಟಿಸಿ ನೀಡುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ ಎಂದು ಕಾಲೇಜು ಪ್ರಿನ್ಸಿಪಾಲ್  ತಿಳಿಸಿದ್ದಾರೆ.

ಆದರೆ ಅವರು ನೀಡಿದ ಪತ್ರಗಳು ಅಪೂರ್ಣವಾಗಿ ಕಂಡುಬಂದಿದ್ದರಿಂದ, ಹೊಸ ಪತ್ರ ನೀಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಅವರು ಇನ್ನೂ ಹೊಸ ಪತ್ರಗಳೊಂದಿಗೆ ಬಂದಿಲ್ಲ ಎಂದು 

ಅವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು