ಇತ್ತೀಚಿನ ಸುದ್ದಿ
ಮಂಗಳೂರು: ವೀಸಾ ಅವಧಿ ಮುಗಿದ ಬಳಿಕ ಅಕ್ರಮ ವಾಸ್ತವ್ಯ: ಇಬ್ಬರು ವಿದೇಶಿ ಪ್ರಜೆಗಳ ಬಂಧನ; ಡಿಟೆನ್ಶನ್ ಸೆಂಟರ್ ಗೆ ವರ್ಗಾವಣೆ
22/10/2023, 18:48

ಮಂಗಳೂರು(reporterkarnataka.com): ವೀಸಾ ಅವಧಿ ಮುಗಿದ ಬಳಿಕ ಅಕ್ರಮವಾಗಿ ವಾಸ್ತವ್ಯ ಹೂಡಿದ ಆರೋಪದ ಮೇಲೆ ಇಬ್ಬರು ವಿದೇಶಿ ಪ್ರಜೆಗಳನ್ನು ಮಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವಿದೇಶಿಯರನ್ನು ನೈಜೀರಿಯಾ ದ ಆ್ಯಂಕಿಟೋಲಾ ಹಾಗೂ ಗಾನಾ ದೇಶದ ಸಲಾಮ್ ಕ್ರಿಸ್ಟಿಯನ್ ಎಂದು ಗುರುತಿಸಲಾಗಿದೆ.
ವೀಸಾ ಅವಧಿ ಮುಗಿದ ಬಳಿವೂ ಮಂಗಳೂರಿನಲ್ಲಿ ವಾಸ್ತವ್ಯವಿದ್ದ ಹಿನ್ನೆಲೆಯಲ್ಲಿ ಈ ಇಬ್ಬರು ವಿದೇಶಿ ಪ್ರಜೆಗಳನ್ನು ನಗರದ ಪೂರ್ವ ಠಾಣೆ ವ್ಯಾಪ್ತಿ ಯಲ್ಲಿ ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಬೆಂಗಳೂರಿನ ಫಾರಿನರ್ಸ್ ರೀಜನಲ್ ರಿಜಿಸ್ಟ್ರೇಶನ್ ಆಫೀಸಿಗೆ ಹಾಜರುಪಡಿಸಲಾಗಿದೆ. ಅವರನ್ನು ಬೆಂಗಳೂರಿನ ಡಿಟೆನ್ಶನ್ ಸೆಂಟರ್ ಗೆ ವರ್ಗಾಯಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದ್ದಾರೆ.