ಇತ್ತೀಚಿನ ಸುದ್ದಿ
ಮಂಗಳೂರು ವೆಂಕಟರಮಣ ದೇಗುಲದ ಪ್ರತಿಷ್ಠಾ ದಶಮಾನೋತ್ಸವ: ವಿಶೇಷ ದೀಪಾಲಂಕಾರ ಸೇವೆ
25/01/2022, 09:03

ಚಿತ್ರ : ಮಂಜು ನೀರೇಶ್ವಾಲ್ಯ ಮಂಗಳೂರು(reporterkarnataka.com) : ನಗರದ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಪ್ರತಿಷ್ಠಾ ದಶಮಾನೋತ್ಸವ ಪ್ರಯುಕ್ತ ಸೋಮವಾರ ಶ್ರೀದೇವಳ ದಲ್ಲಿ ವಿಶೇಷ ” ದೀಪಾಲಂಕಾರ ಸೇವೆ ” ನಡೆಯಿತು.
ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ದೀಪಪ್ರಜ್ವಲನೆ ನಡೆದು ಬಳಿಕ ಶ್ರೀ ದೇವರ ಪ್ರತಿಷ್ಠಾ ದಶಮಾನೋತ್ಸವ ಪ್ರಯುಕ್ತ ಮಹಾ ಪ್ರಾರ್ಥನೆ ನೆರವೇರಿತು. ಶ್ರೀ ಗಳವರಿಂದ ಮಹಾ ಮಂಗಳಾರತಿ ನಡೆದು ತದನಂತರ ಪ್ರಸಾದ ವಿತರಿಸಲಾಯಿತು. ದೇವಳದ ಮೊಕ್ತೇಸರರಾದ ಸಿ ಎಲ್ ಶೆಣೈ , ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ ಉಪಸ್ಥಿತರಿದ್ದರು.