8:44 PM Sunday13 - July 2025
ಬ್ರೇಕಿಂಗ್ ನ್ಯೂಸ್
Kodagu | ಕಾಡಾನೆಗಳ ಕಾಡಿಗೆ ಅಟ್ಟುವ ಕಾರ್ಯಾಚರಣೆ ಯಶಸ್ವಿ: 18 ಸಲಗಗಳು ಮರಳಿ… ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆಯಲ್ಲಿ ಲೂಟಿ ಮಾಡುವ ಉದ್ದೇಶ: ಪ್ರತಿಪಕ್ಷ ನಾಯಕ… ಬೆಂಗಳೂರು ಕಾಲ್ತುಳಿತ ಪ್ರಕರಣ: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಜಸ್ಟೀಸ್ ಜಾನ್ ಮೈಕೆಲ್ ಡಿ.ಕುನ್ನಾ ವರದಿ… ಚಿಕ್ಕಮಗಳೂರು- ತಿರುಪತಿ ರೈಲಿಗೆ ಚಾಲನೆ: ಕಾಫಿನಾಡಿಗರ ದಶಕಗಳ ಕನಸು ಕೊನೆಗೂ ನನಸು Kodagu | ವಿರಾಜಪೇಟೆ ಕ್ಷೇತ್ರದ 1600 ಆದಿವಾಸಿಗಳಿಗೆ ಜಮೀನು ಹಕ್ಕುಪತ್ರ ವಿತರಣೆಗೆ ಅಸ್ತು:… ಹೆಚ್ಚುತ್ತಿರುವ ಕಾಡಾನೆಗಳ ದಾಂಧಲೆ: ವಿರಾಜಪೇಟೆ ತಿತಿಮತಿ ವ್ಯಾಪ್ತಿಯಲ್ಲಿ ಬಿರುಸುಗೊಂಡ ಕಾಡಿಗಟ್ಟುವ ಕಾರ್ಯಾಚರಣೆ Bangaluru | ನಾಗರಬಾವಿಯ ವಿಟಿಯು ಹಬ್ ಆ್ಯಂಡ್ ಸ್ಪೋಕ್ ಕೇಂದ್ರ ಉದ್ಘಾಟನೆ: ಕೇಂದ್ರ… SCSP-TSP ಯೋಜನೆ | ಅಧಿಕಾರಿಗಳು ಮೈಮರೆತರೆ ಪ್ರಕರಣ ದಾಖಲು ಗ್ಯಾರಂಟಿ: ಸಚಿವ ಡಾ.… New Delhi | ಮಿಸ್ ಯೂನಿವರ್ಸ್ ಕರ್ನಾಟಕ ವಿಜೇತೆ ಚಿಕ್ಕಮಗಳೂರಿನ ವಂಶಿ ಮುಖ್ಯಮಂತ್ರಿ… Kodagu | ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಡಿಕ್ಕಿ ಹೊಡೆದು ವ್ಯಕ್ತಿ ಸಾವು

ಇತ್ತೀಚಿನ ಸುದ್ದಿ

ಮಂಗಳೂರು ವಿವಿ 42ನೇ ಘಟಿಕೋತ್ಸವ: 155 ಮಂದಿಗೆ ಪಿಎಚ್.ಡಿ; ಮೂವರು ಉದ್ಯಮಿಗಳಿಗೆ ಗೌರವ ಡಾಕ್ಟರೇಟ್

15/06/2024, 22:57

ಚಿತ್ರ :ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ದೇಶದಲ್ಲಿ ತಲೆ ಎತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಹಿಮ್ಮೆಟ್ಟಿಸಲು ರಾಜ್ಯ ಸರಕಾರ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ, ಮಂಗಳೂರು ವಿವಿ ಸಹ ಕುಲಾಧಿಪತಿ ಡಾ. ಎಂ.ಸಿ. ಸುಧಾಕರ್ ಹೇಳಿದರು.
ಕೊಣಾಜೆಯಲ್ಲಿರುವ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಶನಿವಾರ ಮಂಗಳೂರು ವಿಶ್ವವಿದ್ಯಾನಿಲಯದ ೪೨ನೇ ವಾರ್ಷಿಕ ಘಟಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.



೨೦ರಿಂದ ೨೪ ವರ್ಷ ವಯೋಮಾನದ ಯುವಕರಲ್ಲಿ ಶೇ.೪೪ರಷ್ಟು ನಿರುದ್ಯೋಗ ಸಮಸ್ಯೆ ಇದ್ದರೆ, ೨೫ರಿಂದ ೨೯ ವಯೋಮಾನದವರಲ್ಲಿ ಶೇ.೧೪ರಷ್ಟಿದೆ. ೨೦೨೪ರ ಏಪ್ರಿಲ್ ವೇಳೆಗೆ ದೇಶದ ಗ್ರಾಮಾಂತರ ಪ್ರದೇಶದಲ್ಲಿ ಶೇ.೭.೮ರಷ್ಟು ಹಾಗೂ ನಗರ ಪ್ರದೇಶದಲ್ಲಿ ಶೇ.೮.೭ರಷ್ಟು ನಿರುದ್ಯೋಗವಿದೆ. ಐಟಿ ವಲಯದಲ್ಲಿ ಉದ್ಯೋಗವಕಾಶ ಕಡಿಮೆಯಾಗುತ್ತಿದ್ದು, ಕಳೆದ ವರ್ಷ ಶೇ.೫ರಷ್ಟು ಇಳಿಕೆಯಾಗಿದೆ. ಉದ್ಯೋಗ ಸಿಗಬೇಕಾದರೆ ಅನುಭವದ ನಿರೀಕ್ಷೆ ಹೆಚ್ಚುತ್ತಿದ್ದು, ಅದಕ್ಕಾಗಿ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದರು.
ವಿದ್ಯಾರ್ಥಿಗಳಲ್ಲಿ ಕೌಶಲ್ಯ ಹೆಚ್ಚಿಸಲು ಇಂಟರ್ನ್‌ಶಿಪ್ ಆಧಾರಿತ ಕೋರ್ಸ್‌ಗಳು, ತಾಂತ್ರಿಕ ಶಿಕ್ಷಣದಲ್ಲೂ ಹಲವು ಬದಲಾವಣೆಗಳನ್ನು ತರಲಾಗುತ್ತಿದೆ. ಕೌಶಲ್ಯಾಧಾರಿತ ಡಿಗ್ರಿ ಕೋರ್ಸ್‌ಗಳನ್ನು ಪರಿಚಯಿಸಲಾಗುತ್ತಿದ್ದು, ಹಲವು ಒಪ್ಪಂದಗಳನ್ನು ರೂಪಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಪ್ರಸ್ತುತ ಹಲವು ಸಮಸ್ಯೆಗಳನ್ನು ವಿಶ್ವವಿದ್ಯಾನಿಲಯಗಳು ಎದುರಿಸುತ್ತಿವೆ. ಹೆಚ್ಚೆಚ್ಚು ವಿವಿಗಳ ಸ್ಥಾಪನೆ ಒಂದೆಡೆಯಾದರೆ, ವಿವಿಗಳ ಆರ್ಥಿಕ ವ್ಯವಸ್ಥೆ ಕುಸಿಯುತ್ತಿದೆ. ಇದರಿಂದ ಶೈಕ್ಷಣಿಕ ವ್ಯವಸ್ಥೆ ಹದಗೆಡದಂತೆ ಸರಿದೂಗಿಸುವ ಕಾರ್ಯ ಆಗಬೇಕಿದೆ ಎಂದು ಹೇಳಿದರು.
೧೯೯೪ರಲ್ಲಿ ನಾನು ಕೂಡ ಮಂಗಳೂರು ವಿವಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದೆ. ಇಂದು ಇದೇ ವಿವಿಗೆ ಸಹಕುಲಾಧಿಪತಿಯಾಗಿ ಭಾಗವಹಿಸುವ ಅವಕಾಶ ಲಭಿಸಿದೆ. ಮಂಗಳೂರು ವಿವಿ ವಿದ್ಯಾರ್ಥಿಯಾಗಿದ್ದ ಅವಧಿ ನನ್ನ ಜೀವನದ ಮಹತ್ತರ ಘಟ್ಟವಾಗಿತ್ತು. ನನ್ನ ಜೀವನದ ಮಹತ್ವದ ತಿರುವು ಇಲ್ಲಿಂದಲೇ ಆಗಿದೆ ಎಂದು ಡಾ.ಸುಧಾಕರ್ ಸ್ಮರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದೆಹಲಿಯ ಅಭಿವೃದ್ಧಿಶೀಲ ರಾಷ್ಟ್ರಗಳ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆಯ ಮಹಾ ನಿರ್ದೇಶಕ ಪ್ರೊ. ಸಚಿನ್ ಚತುರ್ವೇದಿ ಘಟಿಕೋತ್ಸವ ಭಾಷಣ ಮಾಡಿದರು. ಸಂಶೋಧನಾ ಸಂಸ್ಥೆಗಳು ಮತ್ತು ವಿಶ್ವ ವಿದ್ಯಾನಿಲಯಗಳ ನಡುವೆ ಒಂದು ರೀತಿಯ ಅಂತರವಿದೆ. ಈ ಅಂತರವನ್ನು ಸರಿದೂಗಿಸಿದರೆ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ ಎಂದು ಅವರು ತಿಳಿಸಿದರು.
ಘಟಿಕೋತ್ಸವದಲ್ಲಿ ವಿವಿಧ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪದವಿ ಪ್ರದಾನ ಮಾಡಿದರು. ಒಟ್ಟು ೧೬೮ ರಾಂಕ್‌ಗಳಲ್ಲಿ ಪ್ರಥಮ ರಾಂಕ್ ಪಡೆದ ೭೨ ಮಂದಿಗೆ ರಾಂಕ್ ಪ್ರಮಾಣ ಪತ್ರ ನೀಡಲಾಯಿತು. ೧೫೫ ಮಂದಿಗೆ ಪಿಎಚ್.ಡಿ ಪದವಿ (ಕಲೆ-೫೧, ವಿಜ್ಞಾನ-೭೩, ವಾಣಿಜ್ಯ-೨೬, ಶಿಕ್ಷಣ-೦೫) ಪ್ರದಾನ ಮಾಡಲಾಯಿತು.
ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವವಿದ್ಯಾನಿಲಯದ ಸಾಧನೆಯ ವಿವರ ನೀಡಿದರು. ವಿವಿ ರಿಜಿಸ್ಟ್ರಾರ್ ಕೆ. ರಾಜು ಮೊಗವೀರ, ಪರೀಕ್ಷಾಂಗ ಕುಲಸಚಿವ ಪ್ರೊ. ಎಚ್. ದೇವೇಂದ್ರಪ್ಪ ಉಪಸ್ಥಿತರಿದ್ದರು.
*ಮೂವರು ಉದ್ಯಮಿಗಳಿಗೆ ಗೌರವ ಡಾಕ್ಟರೇಟ್ ಪ್ರದಾನ:*
ಮಂಗಳೂರು ವಿಶ್ವವಿದ್ಯಾನಿಲಯದ ೪೨ನೇ ಘಟಿಕೋತ್ಸವದಲ್ಲಿ ಉದ್ಯಮಿಗಳಾದ ಡಾ. ರೊನಾಲ್ಡ್ ಕೊಲಾಸೋ, ಎಂ.ಆರ್.ಜಿ. ಗ್ರೂಪ್ ಸ್ಥಾಪಕಾಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಹಾಗೂ ತುಂಬೆ ಗ್ರೂಪ್ ಸ್ಥಾಪಕಾಧ್ಯಕ್ಷ ಡಾ. ತುಂಬೆ ಮೊಯ್ದಿನ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಘಟಿಕೋತ್ಸವದಲ್ಲಿ ಡಾ. ತುಂಬೆ ಮೊಯ್ದೀನ್ ಗೈರು ಹಾಜರಾಗಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು