2:57 AM Sunday14 - December 2025
ಬ್ರೇಕಿಂಗ್ ನ್ಯೂಸ್
ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ…

ಇತ್ತೀಚಿನ ಸುದ್ದಿ

ಮಂಗಳೂರು ತಣ್ಣೀರು ಬಾವಿ ಬೀಚ್: ಡಾಲ್ಫಿನ್ ಮೃತದೇಹ ಪತ್ತೆ; ಸಾವಿನ ಕಾರಣ ನಿಗೂಢ

25/02/2023, 21:20

ಮಂಗಳೂರು(reporterkarnataka.com): ತಣ್ಣೀರಬಾವಿ ಬೀಚಿನ ಫಾತಿಮಾ ಚರ್ಚ್ ಪ್ರದೇಶದಲ್ಲಿ ಡಾಲ್ಫಿನ್ ಕೊಳೆತ ಮೃತದೇಹವೊಂದು ಪತ್ತೆಯಾಗಿದೆ.

ಸತ್ತು ಬಿದ್ದಿರುವ ಡಾಲ್ಫಿನನ್ನು ಬ್ಲೂ ಫ್ಲಾಗ್ ಬೀಚ್‌ನ ಕಾರ್ಮಿಕರು ಹಾಗೂ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಿಬ್ಬಂದಿ ಮತ್ತು ಲೈಫ್ ಗಾರ್ಡ್‌ಗಳು
ಹಗ್ಗದ ಮೂಲಕ ದಡಕ್ಕೆ ತಂದು ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಿದ್ದರು. ನಂತರ ಡಾಲ್ಫಿನ್ ಮೃತದೇಹವನ್ನು ಐದೂವರೆ ಅಡಿ ಆಳದ ಹೊಂಡದಲ್ಲಿ ಸುಟ್ಟು ಹಾಕಲಾಯಿತು ಎಂದು ಯೋಜಕ ಇಂಡಿಯಾದ ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ ರೀಫ್ ವಾಚ್ ಮೆರೈನ್ ಕನ್ಸರ್ವೇಶನ್ ಕರ್ನಾಟಕ ಸಂಯೋಜಕಿ ತೇಜಸ್ವಿನಿ ಭೇಟಿ ನೀಡಿ, ಪಶು ವೈದ್ಯಾಧಿಕಾರಿ ಡಾ.ಸುರಂಜನಾ ನೇತೃತ್ವದಲ್ಲಿ ಡಾಲ್ಪಿನ್ ಶವ ಪರೀಕ್ಷೆ ನಡೆಸಿದರು. ಡಾಲ್ಫಿನ್ ಸಾವಿಗೆ ನಿಖರ ಕಾರಣ ಕಂಡು ಹಿಡಿಯುವುದು ಕಷ್ಟ. ಮೃತದೇಹ ಕೊಳೆತ ಸ್ಥಿತಿಯಲ್ಲಿದೆ. ಆಕಸ್ಮಿಕವಾಗಿ ಬಲೆಗೆ ಸಿಕ್ಕಿಬಿದ್ದ ನಂತರ ಅದು ಹಸಿವಿನಿಂದ ಸತ್ತಿರಬಹುದು. ಇಲ್ಲವೇ ಆಮ್ಲಜನಕದ ಕೊರತೆಯ, ಯಾವುದಾದರೂ ಸೋಂಕಿನಿಂದ ಬಳಲಿ ಸತ್ತಿರಬಹುದು ಎಂದು ತಿಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು