ಇತ್ತೀಚಿನ ಸುದ್ದಿ
Mangaluru | ಹುಟ್ಟೂರು ಬಂಟ್ವಾಳದತ್ತ ಸುಹಾಸ್ ಶೆಟ್ಟಿ ಪಾರ್ಥಿವ ಶರೀರ ಮೆರವಣಿಗೆ: ಬಿಗಿ ಪೊಲೀಸ್ ಬಂದೋಬಸ್ತ್
02/05/2025, 12:45

ಮಂಗಳೂರು(reporterkarnataka.com):ದುಷ್ಕರ್ಮಿಗಳಿಂದ ನಿನ್ನೆ ಬಜಪೆ ಸಮೀಪ ಹತ್ಯೆಗೀಡಾದ ಸುಹಾಸ್ ಶೆಟ್ಟಿ ಅವರ ಪಾರ್ಥಿವ ಶರೀರವನ್ನು ಹುಟ್ಟೂರಾದ ಬಂಟ್ವಾಳಕ್ಕೆ ಕೊಂಡೊಯ್ಯಲಾಯಿತು.
ನಗರದ ಕುಂಟಿಕಾನ ಬಳಿಯ ಎ.ಜೆ. ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನು ಅಲಂಕೃತ ತೆರೆದ ವಾಹನದಲ್ಲಿ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಮೆರವಣಿಗೆ ಮೂಲಕ ಕೊಂಡಯ್ಯಲಾಯಿತು. ಪಾರ್ಥಿವ ಶರೀರದ ಜತೆ ನೂರಾರು ದ್ವಿಚಕ್ರ ವಾಹನ ಮತ್ತು ಚತುಶ್ಚಕ್ರ ವಾಹನಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಪೊಲೀಸ್ ಬೆಂಗಾವಲಿನೊಂದಿಗೆ ಮೆರವಣಿಗೆ ನಡೆಯಿತು. ಆಯಕಟ್ಟಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.