ಇತ್ತೀಚಿನ ಸುದ್ದಿ
ಮಂಗಳೂರು: ಸ್ಟೇಟ್ ಬ್ಯಾಂಕ್ ನಲ್ಲಿ ಸೇವಾ ಕೇಂದ್ರ ಕರ್ನಾಟಕ ಒನ್ ಉದ್ಘಾಟನೆ
13/02/2023, 19:29
ಮಂಗಳೂರು(reporterkarnataka.com): ನಗರದ ಸ್ಟೇಟ್ ಬ್ಯಾಂಕ್ ನಲ್ಲಿ ಪ್ರೀತೆಶ್ ಅವರ ನೇತೃತ್ವದ ಸರಕಾರದ ಸೇವಾ ಕೇಂದ್ರವಾದ ಕರ್ನಾಟಕ ಒನ್ ನ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಇಸ್ಕಾನ್ ನ ಜಿಲ್ಲಾ ಕಾರ್ಯದರ್ಶಿ ಸನ್ನನಂದನ ದಾಸ್ ಅವರು ನೆರವೇರಿಸಿ ಪ್ರೀತೇಶ್ ರವರ ಸಮಾಜ ಮುಖಿ ಕಾರ್ಯವನ್ನು ಶ್ಲಾಘಿಸಿದರು ಹಾಗೂ ಈ ಸಂಸ್ಥೆಯ ಮುಖಾಂತರ ಇನ್ನಷ್ಟು ಸೇವೆಯನ್ನು ನೀಡುವ0ಂತೆ ಆಗಲಿ ಎಂದು ಹಾರೈಸಿದರು.
ಶಾಸಕ ವೇದವ್ಯಾಸ್ ಕಾಮತ್ ಅವರು ಶುಭ ಹಾರೈಸಿದರು. ವಿಧಾನ ಪರಿಷತ್ ನ ಮಾಜಿ ಸದಸ್ಯರಾದ ಐವನ್ ಡಿಸೋಜ ಅವರು ಮಾತನಾಡಿ ಒಳ್ಳೆಯ ಸೇವೆ ಜನರಿಗೆ ಸಿಗುವಂತಾಗಲಿ ಎಂದು ಹಾರೈಸಿದರು. ಮಂಗಳೂರು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ನವೀನ್ ಡಿಸೊಜ ಅವರು ಮಾತನಾಡಿ, ಪ್ರೀತೆಶ್ ರವರು ಕರ್ನಾಟಕ ಒನ್ ಆರಂಭಿಸುವ ಮೊದಲಿನಿಂದಲೂ ಜನಸೇವೆ ಮಾಡುತ್ತಾ ಜನ ಸಾಮಾನ್ಯರಿಗೆ ಚಿರಪರಿಚಿತರಾಗಿರುವುದಾಗಿ ತಿಳಿಸಿ ಮಹಾನಗರ ಪಾಲಿಕೆಯ ಎಲ್ಲಾ ಸೇವೆಗಳು ಈ ಸೇವಾ ಕೇಂದ್ರ ದಲ್ಲಿ ದೊರೆಯಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯ ಬೇಕು ಎಂದು ಆಶಿಸಿದರು. ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಕೊಶಾದಿಕಾರಿ ಪದ್ಮರಾಜ್ ಆರ್. ಅವರು ತನ್ನ ಸಣ್ಣ ವಯಸ್ಸಿನಲ್ಲೇ ಸಮಾಜ ಸೇವೆಯಲ್ಲಿ ತೊಡಗಿಕೊಂದಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ ಯುವ ಜನರು ದಾರಿ ತಪ್ಪುವ ವಯಸಿನಲ್ಲೆ ಸಮಾಜ ಸೇವೆ ಯಲ್ಲಿ ತೊಡಗಿ ಯುವಕರಿಗೆ ಮಾದರಿ ವ್ಯಕ್ತಿಯಾಗಿರುವುದಾಗಿ ಹಾಗೂ ಇನ್ನಷ್ಟು ಸೇವೆ ಮಾಡಲು ದೇವರು ಸಹಕರಿಸಲಿ ಎಂದು ಹಾರೈಸಿದರು.
ವೇದಿಕೆ ಯಲ್ಲಿ ಶಂಶುದೀನ್ ಕುದ್ರೋಳಿ, ಇಜ಼್ಜಾ ಬಜಾಲ್, ಪ್ರಭಾಕರ್ ಮತ್ತು ಮಾಲತಿ ಉಪಸ್ಥಿತರಿದ್ದರು. ನ್ಯಾಯವಾದಿ ರಘುನಾಥ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.