4:40 PM Monday23 - December 2024
ಬ್ರೇಕಿಂಗ್ ನ್ಯೂಸ್
ಸರಕಾರ ರೈತರ ಪರವಾಗಿದೆ: ಚನ್ನರಾಯಪಟ್ಟಣ ರೈತ ನಿಯೋಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಚಿಕ್ಕಮಗಳೂರು: ಬಂಧನಕ್ಕೊಳಗಾಗಿ ಬಿಡುಗಡೆಗೊಂಡ ಸಿ.ಟಿ. ರವಿಗೆ ಭಾರೀ ಸ್ವಾಗತ; ಮೆರವಣಿಗೆ ಸಿ. ಟಿ. ರವಿ ಸದಸ್ಯತ್ವ ಅನರ್ಹಗೊಳಿಸಿ: ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ… ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಿಸೋಣ: ಆರ್ಚ್ ಬಿಷಪ್ಸ್ ಹೌಸ್ ಕ್ರಿಸ್ಮಸ್ ಆಚರಣೆಯಲ್ಲಿ ಮುಖ್ಯಮಂತ್ರಿ… ವಕ್ಫ್ ಹೋರಾಟಕ್ಕೆ ಮಣಿದು ಸಮಿತಿ ರಚನೆಗೆ ಸರಕಾರ ನಿರ್ಧಾರ: ಪ್ರತಿಪಕ್ಷ ನಾಯಕ ಆರ್‌.… ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ: ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ರಾತ್ರಿಯಡೀ ಪೊಲೀಸ್ ವಾಹನದಲ್ಲಿ ಸಿ.ಟಿ. ರವಿ ಸುತ್ತಾಟ!: ಕಾರಣ ಏನು ಗೊತ್ತೇ? ಸಿ.ಟಿ.ರವಿ ಬಂಧನ: ಚಿಕ್ಕಮಗಳೂರು, ಕೊಟ್ಟಿಗೆಹಾರದಲ್ಲಿ ಬಿಜೆಪಿ ಭಾರೀ ಪ್ರತಿಭಟನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಪಿಒಸಿ ದರ್ಜೆ: ವಿಮಾನಯಾನ ಸಚಿವ ಜತೆ ಸಂಸದ ಕ್ಯಾಪ್ಟನ್… ಮಂಗಳೂರು: ಹೊಸ ವರ್ಷದ ಆಚರಣೆಗೆ ತರಿಸಿದ್ದ 9 ಲಕ್ಷ ರೂ. ಮೌಲ್ಯದ ಡ್ರಗ್ಸ್…

ಇತ್ತೀಚಿನ ಸುದ್ದಿ

ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿಎಸ್ಸಿ ವಿಶುವಲ್ ಕಮ್ಯುನಿಕೇಶನ್ ಶಿಕ್ಷಣ

18/09/2022, 23:34

ಮಂಗಳೂರು(reporterkarnataka.com):ನಗರದ ಸಂತ ಅಲೋಶಿಯಸ್ ಕಾಲೇಜು ಪತ್ರಿಕೋದ್ಯಮ ವಿಭಾಗದಲ್ಲಿ ಹೊಸತಾಗಿ  ಬಿಎಸ್ಸಿ ವಿಶುವಲ್ ಕಮ್ಯುನಿಕೇಶನ್ ಎಂಬ ಕೋರ್ಸ್ ನ್ನು ಅಲೋಶಿಯಸ್ ವಿದ್ಯಾಸಂಸ್ಥೆಗಳ ರೆಕ್ಟರ್ ವಂ. ಫಾ ಮೆಲ್ವಿನ್ ಜೆ ಪಿಂಟೋ  ಲೋಕಾರ್ಪಣೆಗೊಳಿಸಿದರು.

ಕಾರ್ಯಕ್ರಮದ  ಉದ್ಘಾಟನೆಯನ್ನು  ಕಾಲೇಜಿನ ಎಲ್ ಎಫ್ ರಸ್ಕಿನ್ಹಾ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಂದ ಪೋಲರಾಯ್ಡ್ ಕ್ಯಾಮರಾದಿಂದ ಭಾವಚಿತ್ರ ತೆಗೆಯೋ ಮುಖಾಂತರ ಜರುಗಿತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮೊಟ್ಟ ಮೊದಲ ಬಾರಿಗೆ ವಿಶುವಲ್ ಕಮ್ಯೂನಿಕೇಶನ್ ನಲ್ಲಿ ಬಿ.ಎಸ್ಸಿ. ಪದವಿಯನ್ನು ಪರಿಚಯಿಸಲಾಗುತ್ತಿದೆ.

ಕಾರ್ಯಕ್ರಮದ ಮುಖ್ಯ ಅತಿಥಿ, ರೀಲ್ ಟ್ರೈಬ್ ಡಿಜಿಟಲ್ ಸಂಸ್ಥೆಯ ಸ್ಥಾಪಕ  ಹೃಶಿಕೇಶ್ ಅನಿಲ್ ಕುಮಾರ್ ರವರು ವಿಶುವಲ್ ಕಮ್ಯೂನಿಕೇಶನ್ ವಿಭಾಗದ ಅಧಿಕೃತ ಯೂಟ್ಯೂಬ್ ವಾಹಿನಿ ಮತ್ತು ‘ ಕ್ಯಾಂಪಸ್ ಬಝ್’ ಎಂಬ ವಿದ್ಯಾರ್ಥಿ ಬ್ಲಾಗ್ ಗೆ ಚಾಲನೆ ನೀಡಿದರು.

ಅವರು ಮಾತನಾಡಿ ಮೊದಲ ವರ್ಷದ ಪದವಿಗೆ ಸೇರಲು ಬಯಸುವ ವಿದ್ಯಾರ್ಥಿಗಳು ನಗರದ ಮೊಟ್ಟ ಮೊದಲ ವಿಶುವಲ್ ಕಮ್ಯೂನಿಕೇಶನ್ ಬ್ಯಾಚ್ ನ ಭಾಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಬಹುದು ಎಂದರು.

ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ತಯಾರಿಸಲಾದ ಮರಳು ಕಲೆಯ ಚಿತ್ರವೊಂದನ್ನೂ ಅನಾವರಣಗೊಳಿಸಲಾಯಿತು. 

ಈ ಕೋರ್ಸ್ ನ ಉದ್ದೇಶ ಕಲೆ, ಸೃಜನಶೀಲತೆ, ಮತ್ತು ತಂತ್ರಜ್ಞಾನದ ಸಂಗಮದೊಂದಿಗೆ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ದಾರಿದೀಪವಾಗುವುದಲ್ಲದೆ, ಆಧುನಿಕ ಮಾಧ್ಯಮ ಜಗತ್ತಿಗೆ ಸಮರ್ಥ ಅಭ್ಯರ್ಥಿಗಳನ್ನು ತಯಾರಿಸುವುದಾಗಿದೆ. 

ಅಲೋಶಿಯಸ್ ವಿದ್ಯಾಸಂಸ್ಥೆಗಳ ರೆಕ್ಟರ್ ವಂ. ಫಾ ಮೆಲ್ವಿನ್ ಜೆ ಪಿಂಟೋ ಎಸ್ ಜೆ, ಪ್ರಾಂಶುಪಾಲರಾದ ವಂ. ಡಾ ಪ್ರವೀಣ್ ಮಾರ್ಟಿಸ್, ಎಸ್ ಜೆ, ಕುಲಪತಿ ಡಾ ಆಲ್ವಿನ್ ಡಿಸಾ, ವಿಭಾಗ ಮುಖ್ಯಸ್ಥರಾದ ಡಾ ಶ್ವೇತಾ ಮಂಗಳತ್ ಮತ್ತು ಕೋರ್ಸ್ ಸಂಯೋಜಕರಾದ ಅಬ್ದುಲ್ ರಶೀದ್, ಕ್ಸೇವಿಯರ್ ವಿಜ್ಞಾನ ಬ್ಲಾಕ್ ನ ನಿರ್ದೇಶಕ ಡಾ ನಾರಾಯಣ ಭಟ್, AIMIT ಬೀರಿಯ ನಿರ್ದೇಶಕರಾದ ವಂ. ಡಾ ಮೆಲ್ವಿನ್ ಪಿಂಟೋ ಉಪಸ್ಥಿತರಿದ್ದರು. ಸಂವಾದ ಕಾರ್ಯಕ್ರಮ ನಡೆಯಿತು.

ಇತ್ತೀಚಿನ ಸುದ್ದಿ

ಜಾಹೀರಾತು