ಇತ್ತೀಚಿನ ಸುದ್ದಿ
ಮಂಗಳೂರಿನ ಸಂತ ತೆರೆಜಾ ಚರ್ಚಿನಲ್ಲಿ 3 ದಿನಗಳ ಧ್ಯಾನ ಕೂಟ ಉದ್ಘಾಟನೆ
05/03/2024, 20:37
ಮಂಗಳೂರು(reporterkarnataka.com): ನಗರದ ಸಂತ ತೆರೆಜಾ ಚರ್ಚಿನಲ್ಲಿ ತಪಸ್ಸು ಕಾಲದ 3 ದಿನದ ಧ್ಯಾನ ಕೂಟವನ್ನು ಬೈಬಲ್‌ಗೆ ಹೂವನ್ನು ಅರ್ಪಿಸುವ ಮೂಲಕ ಉದ್ಘಾಟಿಸಲಾಯಿತು.
ಧ್ಯಾನ ಕೂಟವನ್ನು ನಡೆಸಿಕೊಡುವ ಶಿವಮೊಗ್ಗ ಧರ್ಮಕ್ಷೇತ್ರದ ವಂ| ಫಾ| ರೋಮನ್ ಪಿಂಟೊರವರು ಬೈಬಲಿಗೆ ನಮಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ| ಫಾ| ಆಲ್ಬನ್ ಡಿ’ಸೋಜ , ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಆಧ್ಯಾತ್ಮಿಕ ಸಮಿತಿಯ ಸಂಯೋಜಕಿ ಪ್ರೆಸಿಲ್ಲಾ ಫೆರ್ನಾಂಡಿಸ್ ಉಪಸ್ಥಿತರಿದ್ದರು.