ಇತ್ತೀಚಿನ ಸುದ್ದಿ
ಮಂಗಳೂರು; ಸಹಕಾರ ರತ್ನ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಸಾರ್ವಜನಿಕ ಅಭಿನಂದನೆ
11/11/2023, 23:57

ಮಂಗಳೂರು(reporterkarnataka.com): ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ, ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ನಗರದ ಪಡೀಲ್ ನ ಆತ್ಮಶಕ್ತಿ ಸೌಧದಲ್ಲಿ ಶನಿವಾರ ನಡೆಯಿತು.
ಬಿಜೆಪಿ ನಾಯಕ ಕ್ಯಾ. ಬ್ರಿಜೇಶ್ ಚೌಟ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಮಂಗಳೂರು ಮಹಾನಗರಪಾಲಿಕೆ ಪ್ರತಿಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ ಮುಂತಾದ ಗಣ್ಯರು ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.