3:21 AM Saturday11 - October 2025
ಬ್ರೇಕಿಂಗ್ ನ್ಯೂಸ್
ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;… ಸೋಮವಾರಪೇಟೆ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತರ ಬಲೆಗೆ: 25 ಸಾವಿರ ಲಂಚ…

ಇತ್ತೀಚಿನ ಸುದ್ದಿ

ಮಂಗಳೂರು: ರೇಖಾ ಸುದೇಶ್ ರಾವ್ ಅವರ ‘ಹೊಂಬೆಳಕು’ ಕವನ ಸಂಕಲನ ಲೋಕಾರ್ಪಣೆ

02/11/2023, 16:47

ಮಂಗಳೂರು(reporterkarnataka.com): ಮಂಗಳೂರಿನ ಪಿ.ವಿ.ಪ್ರದೀಪ್ ಕುಮಾರ್ ಸಾರಥ್ಯದ ಕಥಾಬಿಂದು ಪ್ರಕಾಶನದ 16ನೇ ವಾರ್ಷಿಕ ಸಾಹಿತ್ಯೋತ್ಸವ ಸಮಾರಂಭದಲ್ಲಿ ನಗರದ ಮಂಗಳಾದೇವಿ ನಿವಾಸಿ ರೇಖಾ ಸುದೇಶ ರಾವ್ ಅವರ ಹೊಂಬೆಳಕು ಕವನ ಸಂಕಲನವನ್ನು ಪುರಭವನದಲ್ಲಿ ಬಿಡುಗಡೆಗೊಳಿಸಲಾಯಿತು.

ಮೂಡುಬಿದಿರೆಯ ಶ್ರೀಪತಿ ಭಟ್ ಲೋಕಾರ್ಪಣೆ ಮಾಡಿದರು. ಮಂಗಳೂರಿನ ವೈದ್ಯ, ಬರಹಗಾರ ಡಾ ಸುರೇಶ ನೆಗಳಗುಳಿ ಅವರು ಅವರ ಕೃತಿ ವಿಮರ್ಶೆ ಮಾಡುತ್ತಾ ಅದರೊಳಗಿನ ರಚನೆಯೊಂದನ್ನು ವಾಚಿಸಿದರು.
ಮುಂಬಯಿಯ ಸರ್ವ ಅರಸ ಶಟ್ಟಿ, ವಾಮನ್ ರಾವ್ ಬೇಕಲ್, ಕೊಳ್ಚಪ್ಪೆ ಗೋವಿಂದ ಭಟ್,ರಾಧಾ ಕೃಷ್ಣ ಉಳಿಯತ್ತಡ್ಕ, ವೀಣಾ ಕಾರಂತ್ , ಜಯಾನಂದ ಪೆರಾಜೆ ಹಾಗೂ ಪಿ.ವಿ ಪ್ರದೀಪ್ ಕುಮಾರ್ ವೇದಿಕೆಯಲ್ಲಿದ್ದರು. ಬಳಿಕ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ರಶ್ಮಿ ಸನಿಲ್ ನಿರೂಪಣೆ ಗೈದ ಈ ಸಮಾರಂಭದಲ್ಲಿ ಹಾ.ಮ.ಸತೀಶ,ರತ್ನಾ ಭಟ್,ಕಲ್ಲಚ್ವು ಮಹೇಶ್ ನಾಯಕ್ , ಚುಸಾಪ ಅಧ್ಯಕ್ಷ ಜಿ.ಕೆ ಶಾಸ್ತ್ರಿ, ಸೌಮ್ಯಾ ಗೋಪಾಲ್, ನಾಡಿನ ಸಮಾಚಾರ‌ ಪತ್ರಿಕೆಯ ಬಸವರಾಜ್ ಯಲ್ಲಪ್ಪಾ ಉಪ್ಪಾರಟ್ಟಿ, ರೇಮಂಡ್ ಡಿಕುನ್ಹ , ರಾಧಾಕೃಷ್ಣ ಉಳಿಯತ್ತಡ್ಕ ,ವಾಮನ ರಾವ್ ಬೇಕಲ್,ವೀಣಾ ಕಾರಂತ ಮುಂತಾದವರು ಉಪಸ್ಥಿತರಿದ್ದರು
ಇದೇ ಸಮಾರಂಭದಲ್ಲಿ 50 ಕವಿಗಳ ಕೃತಿಗಳು ಲೋಕಾರ್ಪಿತವಾದುದು ವಿಶೇಷವಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು