ಇತ್ತೀಚಿನ ಸುದ್ದಿ
ಮಂಗಳೂರು ರಥಬೀದಿ ಶ್ರೀ ವೀರ ವೆಂಕಟೇಶ ದೇವರ ಚಾತುರ್ಮಾಸ ಆರಂಭ: ಶತಕಲಶಾಭಿಷೇಕ
09/07/2022, 23:01

ಚಿತ್ರ: ಮಂಜು ನೀರೇಶ್ವಾಲ್ಯ
ಮಂಗಳೂರು(reporterkarnataka.com): ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಪ್ರಧಾನ ಶ್ರೀ ವೀರ ವೆಂಕಟೇಶ ದೇವರ ಶುಭ ಕೃತ ನಾಮ ಸಂವತ್ಸರದ ಚಾತುರ್ಮಾಸ ವ್ರತ ಇಂದು ಪ್ರಾರಂಭಗೊಂಡಿದ್ದು ಶನಿವಾರ ಶ್ರೀದೇವರಿಗೆ ಪಂಚಾಮೃತ , ಶತಕಲಶಾಭಿಷೇಕ , ಗಂಗಾಭಿಷೇಕ ನೆರವೇರಿತು , ಮಧ್ಯಾಹ್ನ ಮಹಾ ಪೂಜೆ ಬಳಿಕ ಸಮಾರಾಧನೆ ನಡೆಯಿತು.
ಈ ಸಂದರ್ಭದಲ್ಲಿ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ , ಸಾಹುಕಾರ್ ಕಿರಣ್ ಪೈ , ಸತೀಶ್ ಪ್ರಭು , ಗಣೇಶ್ ಕಾಮತ್ , ಜಗನ್ನಾಥ್ ಕಾಮತ್ , ಚಾತುರ್ಮಾಸ ಸಮಿತಿಯ ಗೌರವ ಅಧ್ಯಕ್ಷ ಮುಂಡ್ಕುರ್ ರಾಮದಾಸ್ ಕಾಮತ್ , ಅಧ್ಯಕ್ಷ ಪದ್ಮನಾಭ ಪೈ , ಪ್ರಧಾನ ಸಂಯೋಜಕ ಸುರೇಶ ಕಾಮತ್ , ಕಾರ್ಯದರ್ಶಿಗಳಾದ ಗಣಪತಿ ಪೈ , ಸುದರ್ಶನ್ ಮಲ್ಯ , ಗುರುದತ್ ಕಾಮತ್ , ಕೋಶಾಧಿಕಾರಿ ಬಿ ಆರ್ ಭಟ್ , ಮಾರೂರ್ ಶಶಿಧರ್ ಪೈ ಹಾಗೂ ಸಾವಿರಾರು ಭಜಕರು ಉಪಸ್ಥಿತರಿದ್ದರು.