ಇತ್ತೀಚಿನ ಸುದ್ದಿ
ಮಂಗಳೂರು: ರಸ್ತೆಯಲ್ಲೇ ಖಾಸಗಿ ಬಸ್ ಸಿಬ್ಬಂದಿಗಳ ಬೀದಿ ಕಾಳಗ; ಇಬ್ಬರ ಬಂಧನ
26/02/2023, 17:12
ಮಂಗಳೂರು(reporterkarnataka.com): ಟೈಮಿಂಗ್ಸ್ ವಿಚಾರದಲ್ಲಿ ಖಾಸಗಿ ಬಸ್ ಸಿಬ್ಬಂದಿಗಳು ಹೊಡೆದಾಡಿಕೊಳ್ಖುವುದು ಸಾಮಾನ್ಯವಾಗಿ. ಸಾರ್ವಜನಿಕವಾಗಿ ಆಶ್ಲೀಲ ಪದಗಳಿಂದ ಪರಸ್ಪರ ಬೈದಾಡಿಕೊಂಡು ರಟ್ಟೆ ಬಲವನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಇಂತಹ ಘಟನೆ ಮತ್ತೊಮ್ಮೆ ಮರುಕಳಿಸಿದೆ. ನಗರದ ಶೇಡಿಗುರಿ ಬಸ್ ನಿಲ್ದಾಣದ ಮುಂದೆ ಇಬ್ಬರು ಸಿಬ್ಬಂದಿಗಳು ಬೀದಿ ಕಾಳಗ ಮಾಡಿದ್ದಾರೆ.
ಒಂದು ಖಾಸಗಿ ಬಸ್ ಚಾಲಕ ಸಾಗರ್ ಮತ್ತು ನಿರ್ವಾಹಕ ಸುಧೀರ್ ಹಾಗೂ ಇನ್ನೊಂದು ಬಸ್
ಚಾಲಕ ವಿಶ್ಲೇಶ್ ಮತ್ತು ನಿರ್ವಾಹಕ ಶ್ರೀಧರ್ ಎಂಬವರು ಪಾಲನೆ ವಿಚಾರದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಅಶೋಕ ನಗರದ ಶೇಡಿಗುರಿ ಬಸ್ ನಿಲ್ದಾಣದ ಮುಂದೆ ಈ ಫೈಟಿಂಗ್ ನಡೆದಿದೆ.
ಬಸ್ ಚಾಲಕರು ಪರಸ್ಪರ ಅಡ್ಡಾದಿಡ್ಡಿಯಾಗಿ ಬಸ್‌ಗಳನ್ನು ನಿಲ್ಲಿಸಿ ಪರಸ್ಪರ ಬೈದಾಡಿ, ತಳ್ಳಾಡುತ್ತಾ ಸಾರ್ವಜನಿಕರ ಶಾಂತಿ ನೆಮ್ಮದಿಗೆ ಭಂಗ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಬಸ್ಸುಗಳನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರನ್ನು ಬಂಧಿಸಿ ಕಾನೂನು ಕ್ರಮ ಜರಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.














