ಇತ್ತೀಚಿನ ಸುದ್ದಿ
ಮಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ: ಎಸ್‌ಪಿಜಿ ತಂಡದಿಂದ ಭದ್ರತಾ ಪರಿಶೀಲನೆ; ಪೊಲೀಸ್ ಇಲಾಖೆ ಸಾಥ್
11/04/2024, 15:18

ಚಿತ್ರ : ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com):ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಏ.14ರಂದುಮಂಗಳೂರಿನಲ್ಲಿ ಆಯೋಜನೆಗೊಂಡಿರುವ ಹಿನ್ನಲೆಯಲ್ಲಿ ನಗರದ ರಸ್ತೆಯಲ್ಲಿ ಎಸ್‌ಪಿಜಿ ಹಾಗೂ ಪೊಲೀಸ್ ತಂಡಗಳಿಂದ ಭದ್ರತಾ ಪರಿಶೀಲನೆ ನಡೆಯಿತು.
ನಗರದ ಲೇಡಿಹಿಲ್ ಬಳಿಯ ನಾರಾಯಣ ಗುರು ವೃತ್ತದಿಂದ ಹಂಪನ್‌ಕಟ್ಟೆ ಸಿಗ್ನಲ್‌ವರೆಗೆ ರೋಡ್ ಶೋ ನಡೆಯಲಿದ್ದು ಸುರಕ್ಷತೆ ನಿಟ್ಟಿನಿಂದ ಪೂರ್ವಭಾವಿ ಪರಿಶೀಲನೆ ನಡೆಸಲಾಯಿತು.
ಡಿಸಿಪಿ ಸಿದ್ಧಾರ್ಥ ಗೋಯಲ್, ಸಂಚಾರ ವಿಭಾಗ ಡಿಸಿಪಿ ದಿನೇಶ್ ಕುಮಾರ್, ಎಸಿಪಿ ನಜ್ಮಾ ಫಾರೂಕಿ, ಸಿಸಿಬಿ ಎಸಿಪಿ ಗೀತಾ ಕುಲಕರ್ಣಿ, ಎಸಿಪಿ ಧನ್ಯ ನಾಯಕ್, ಎಸಿಪಿ ಮನೋಜ್ ಕುಮಾರ್ ನಾಯಕ್, ಪ್ರತಾಪ್ ಸಿಂಗ್ ಥೋರಾಟ್ ,ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜಗದೀಶ್ ಶೇಣವ, ಜೆಡಿಎಸ್ ಯುವ ಮೋರ್ಚ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ಜೆಡಿಎಸ್ ಯುವ ಮುಖಂಡ ರತೀಶ್ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.