ಇತ್ತೀಚಿನ ಸುದ್ದಿ
Mangaluru | ಪಣಂಬೂರು ಜಂಕ್ಷನ್: ಸರಣಿ ಅಪಘಾತಕ್ಕೆ ಆಟೋದಲ್ಲಿ 3 ಮಂದಿ ದಾರುಣ ಸಾವು
15/11/2025, 21:26
ಮಂಗಳೂರು(reporterkarnataka.com): ನಗರದ ಪಣಂಬೂರು ಜಂಕ್ಷನ್ ನಲ್ಲಿ ಇಂದು ನಡೆದ ಭೀಕರ ಸರಣಿ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಬೆಳಗ್ಗೆ ಸುಮಾರು 11. 15 ಗಂಟೆಗೆ ಪಣಂಬೂರು ಜಂಕ್ಷನ್ ನಲ್ಲಿ ದನ ಒಂದು ರಸ್ತೆ ದಾಟುತ್ತಿರುವುದನ್ನು ನೋಡಿ ಮೊದಲಿಗೆ ಮುಲ್ಕಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ನ್ನು ಚಾಲಕ ನಿಲ್ಲಿಸಿದ್ದಾರೆ. ಅದರ ಹಿಂದೆ ಬರುತ್ತಿದ್ದ ಆಟೋರಿಕ್ಷಾ ನಿಲ್ಲಿಸಿದಾಗ ಅದರ ಹಿಂದೆ ಇದ್ದಂತಹ ಇನ್ನೋವಾ ಕಾರ್ ನ ಚಾಲಕನು ಕೂಡ ನಿಲ್ಲಿಸಿದ್ದಾನೆ. ಇದೇ ಸಂದರ್ಭದಲ್ಲಿ ಹಿಂದುಗಡೆಯಿಂದ ಬರುತ್ತಿದ್ದ ಇನ್ನೊಂದು ಟ್ಯಾಂಕರ್ ರಭಸವಾಗಿ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇನೋವಾ ಕಾರು ಎಡಗಡೆಗೆ ಇದ್ದ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಎರಡು ಟ್ಯಾಂಕರ್ ನ ಮಧ್ಯೆ ಸಿಲುಕಿಕೊಂಡ ರಿಕ್ಷಾ ನಜ್ಜುಗುಜ್ಜಾಗಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾ ಚಾಲಕ ಹಾಗೂ ಇಬ್ಬರು ಪ್ರಯಾಣಿಕರು ಸೇರಿದಂತೆ 3 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.












