ಇತ್ತೀಚಿನ ಸುದ್ದಿ
ಮಂಗಳೂರಿನ ಪಾಲ್ದನೆ ಚರ್ಚ್: ವನಮಹೋತ್ಸವ, ಉರಗಗಳ ಬಗ್ಗೆ ಮಾಹಿತಿ
14/07/2024, 18:41

ಮಂಗಳೂರು(reporterkarnataka.com): ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನ ಐಸಿವೈಎಂ ಘಟಕದ ವತಿಯಿಂದ ವನಮಹೋತ್ಸವ ಮತ್ತು ಉರಗಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ಭಾನುವಾರ ಏರ್ಪಡಿಸಲಾಗಿತ್ತು.
ಉರಗ ತಜ್ಞ ಬಂಟ್ವಾಳದ ಸ್ನೇಕ್ ಕಿರಣ್ ಅವರು ಹಾವುಗಳ ಬಗ್ಗೆ ಮತ್ತು ಅವುಗಳಿಂದ ಪರಿಸರಕ್ಕೆ ಕೊಡುಗೆ ಹಾಗೂ ಹಾವುಗಳ ಸಂರಕ್ಷಣೆಗೆ ನಾವೇನು ಮಾಡಬಹುದು ಎಂಬುದರ ಬಗ್ಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಐಸಿವೈಎಂ ಸಂಚಾಲಕ ರೋಶನ್ ಮೊಂತೇರೊ, ನೀರುಮಾರ್ಗ ವಲಯ ಕಾಂಗ್ರೆಸ್ ಅಧ್ಯಕ್ಷ ವಾಲ್ಟರ್ ಡಿ ಕುನ್ಹಾ, ಐಸಿವೈಎಂ ಅಧ್ಯಕ್ಷ ವಿಲ್ಸನ್ ಪಿಂಟೊ ಉಪಸ್ಥಿತರಿದ್ದರು.