ಇತ್ತೀಚಿನ ಸುದ್ದಿ
ಮಂಗಳೂರು: ಪಾಲ್ಡನೆ ಚರ್ಚ್ ನಲ್ಲಿ ಕ್ರೈಸ್ತ ಶಿಕ್ಷಣ ದಿನಾಚರಣೆ
27/02/2024, 14:33
ಮಂಗಳೂರು(reporterkarnataka.com): ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚಿನಲ್ಲಿ ಕ್ರೈಸ್ತ ಶಿಕ್ಷಣ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚರ್ಚಿನ ಧರ್ಮಗುರು ಫಾ. ಆಲ್ಬನ್ ಡಿ ಸೋಜ ಅವರು ವಹಿಸಿ ದಿನದ ಮಹತ್ವವನ್ನು ವಿವರಿಸಿದರು. ಚರ್ಚಿನ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ ಮಕ್ಕಳಿಗೆ ಕ್ರೈಸ್ತ ಶಿಕ್ಷಣ ನೀಡಿದ ಶಿಕ್ಷಕರ ಸೇವೆಯನ್ನು ಸ್ಮರಿಸಿ ಅಭಿನಂದಿಸಿದರು. ಕಾರ್ಯದರ್ಶಿ ಆಸ್ಟಿನ್ ಮೊಂತೇರೊ ಶುಭ ಹಾರೈಸಿದರು. ಕ್ರೈಸ್ತ ಶಿಕ್ಷಣ ಸಂಯೋಜಕಿ ಲಿಝೀ ಫೆರ್ನಾಂಡಿಸ್ ಸ್ವಾಗತಿಸಿದರು. ಶಿಕ್ಷಕಿಯರಾದ ಗ್ರಾಸಿಯಾ ಪಿಂಟೊ, ಮಾಲಿನಿ ಫೆರ್ನಾಂಡಿಸ್, ನಿಶಾ ಬ್ರಾಗ್ಸ್, ಲಿಝೀ ಫೆರ್ನಾಂಡಿಸ್, ರೆನಿಟಾ ಟೆಲ್ಲಿಸ್, ಮಾರ್ಸೆಲಿನ್ (ಲೀನಾ) ಫೆರ್ನಾಂಡಿಸ್, ಪ್ಯಾಟ್ಸಿ ಮೊಂತೆರೊ, ಅಸುಂತ ಮೊಂತೇರೊ, ಮರ್ಲಿನ್ ಮೊಂತೆರೊ, ಪ್ರವೀಣ್ ಮೊಂತೆರೊ, ಸಹ ಶಿಕ್ಷಕಿಯರಾದ ಶಾಂತಿ ಮೊಂತೆರೊ, ರಿಯೋನಾ ಫೆರ್ನಾಂಡಿಸ್, ಮಾಯೋಲಾ ಡಿ ಸೋಜಾ ಉಪಸ್ಥಿತರಿದ್ದರು. ಪ್ರವೀಣ್ ಮೊಂತೆರೊ ವಂದಿಸಿದರು.ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ನಡೆದವು.