ಇತ್ತೀಚಿನ ಸುದ್ದಿ
Mangaluru | ಸೈಂಟ್ ಅಲೋಶಿಯಸ್ ವಿಶ್ವವಿದ್ಯಾಲಯದಲ್ಲಿ ‘ನೋವೇಶನ್ 2025’ ಅಂತಾರಾಷ್ಟ್ರೀಯ ಸಮ್ಮೇಳನ
27/04/2025, 16:16
ಮಂಗಳೂರು(reporterkarnataka.com): ಸೈಂಟ್ ಅಲೋಶಿಯಸ್ (ಸ್ವಾಯತ್ತ ವಿಶ್ವವಿದ್ಯಾಲಯ), ಏಮಿಟ್(AIMIT) ಬೀರಿ ಕ್ಯಾಂಪಸಿನ ಎಂಬಿಎ ವಿಭಾಗ, ಸ್ಕೂಲ್ ಆಫ್ ಬಿಸಿನೆಸ್ ಅಂಡ್ ಮ್ಯಾನೇಜ್’ಮೆಂಟ್ ನಡೆಸಿದ 8ನೇ ಅಂತಾರಾಷ್ಟ್ರೀಯ ಸಮ್ಮೇಳನ ‘ನೋವೇಶನ್ 2025’: ಇಂಡಸ್ಟ್ರಿ 5.0, 6.0 ಮತ್ತು ಅದರ ಮುಂಬರುವ ತಂತ್ರಜ್ಞಾನಗಳಲ್ಲಿ ನಾವೀನ್ಯತೆಗಳು – ಭವಿಷ್ಯದ ವ್ಯವಸ್ಥಾ ಮಾದರಿಗಳ ಅಭಿವೃದ್ಧಿ ಎಂಬ ವಿಷಯದ ಮೇಲೆ ಏರ್ಪಡಿಸಲಾಯಿತು.




ಉದ್ಘಾಟನೆಯ ಮುಖ್ಯ ಅತಿಥಿ ಎಂ.ಆರ್.ಪಿ.ಎಲ್.ನ ಮುಖ್ಯ ಜನರಲ್ ಮ್ಯಾನೇಜರ್(ಎಚ್.ಆರ್), ಸಂದೇಶ್ ಜೆ. ಕುಟೀನ್ಹೋ ಪ್ರಭು, ಮುಂದಿನ ದಶಕದಲ್ಲಿ (5.0) ಮತ್ತು ಅದರ ನಂತರದ ದಶಕದಲ್ಲಿ (6.0) ಸಂಭವಿಸಬಹುದಾದ ಬದಲಾವಣೆಗಳು ಮತ್ತು ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಮಾನವ ಶಕ್ತಿಯನ್ನು ಸಜ್ಜುಗೊಳಿಸುವ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ಉದ್ಯಮದ ಬದಲಾವಣೆಗಳ ಅಗತ್ಯತೆಗಳನ್ನು ಪೂರೈಸಲು ಅವರು ಚುರುಕುತನ (Agility), ಹೊಂದಾಣಿಕೆ (Adaptability), ಮತ್ತು ಸಾಮರಸ್ಯ (Alignment) ಎಂಬ ಮೂರು ಎ (AAA) ಸೂತ್ರಗಳನ್ನು ನೀಡಿದರು.
ನ್ಯೂಯಾರ್ಕಿನ ಸ್ಟೇಟ್ ಯೂನಿವರ್ಸಿಟಿ ಆಫ್ ಆಲ್ಬನಿಯ ಪ್ರೊಫೆಸರ್ (ಡಾ.) ಡೇವಿಡ್ ಎಂ. ಸ್ಮಿತ್; ಮಾರಿಷಸ್ ಸರ್ಕಾರದ ಹಣಕಾಸು ಸಚಿವಾಲಯದ ಡಾ. ಯತಿನ್ ಮತ್ತು ಲೊಯೊಲಾ ಕಾಲೇಜ್ ಆಫ್ ಸೋಷಿಯಲ್ ಸೈನ್ಸಸ್ (ಸ್ವಾಯತ್ತ), ತಿರುವನಂತಪುರಂನ ಪ್ರಾಧ್ಯಾಪಕ ಡಾ. ಫಾ. ರಂಜಿತ್ ಜಾರ್ಜ್ ಎಸ್.ಜೆ. ಸಮ್ಮೇಳನದ ಪ್ರಮುಖ ಭಾಷಣಕಾರರಾಗಿ ಭಾಗವಹಿಸಿದ್ದರು. ಸೇಂಟ್ ಅಲೋಶಿಯಸ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ರೋನಾಲ್ಡ್ ನಜರೆತ್, ಉದ್ಘಾಟನೆಯ ಅಧ್ಯಕ್ಷತೆ ವಹಿಸಿದ್ದರು, ಏಮಿಟ್(AIMIT)ಯ ನಿರ್ದೇಶಕ ಡಾ. (ಫಾದರ್) ಕಿರಣ್ ಕೋತ್ ಎಸ್.ಜೆ., ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸ್ಕೂಲ್ ಆಫ್ ಬಿಸಿನೆಸ್ ಅಂಡ್ ಮ್ಯಾನೇಜ್’ಮೆಂಟ್’ನ ಡೀನ್ ಡಾ. ರಜನಿ ಸುರೇಶ್, ಸಭೆಯನ್ನು ಸ್ವಾಗತಿಸಿದರು ಮತ್ತು ಸಮ್ಮೇಳನದ ಅವಲೋಕನವನ್ನು ನೀಡಿದರು.
60ಕ್ಕೂ ಹೆಚ್ಚು ಸಂಶೋಧನಾ ಪತ್ರಗಳನ್ನು ಶಿಕ್ಷಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಪ್ರಸ್ತುತಪಡಿಸಿದರು.














