ಇತ್ತೀಚಿನ ಸುದ್ದಿ
ಮಂಗಳೂರು; ಎನ್ ಎಸ್ ಯುಐನಿಂದ ನಿರ್ಗತಿಕರಿಗೆ, ನಿರಾಶ್ರಿತರಿಗೆ ಸಂಗ್ರಹಿಸಿದ ಬಟ್ಟೆ ವಿತರಣೆ
20/06/2021, 12:10
ಮಂಗಳೂರು(reporterkarnataka news) : ಎನ್.ಎಸ್.ಯು.ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಅವರ ಹುಟ್ಟುಹಬ್ಬದ ಪ್ರಯುಕ್ತ ‘ಬಟ್ಟೆ ಸಂಗ್ರಹ ಅಭಿಯಾನ’ ದಿಂದ ಸಂಗ್ರಹಿಸಲಾದ ಬಟ್ಟೆಗಳನ್ನು ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾಗಿರುವ 500ಕ್ಕೂ ಹೆಚ್ಚು ನಿರ್ಗತಿಕರಿಗೆ ಹಾಗೂ ನಿರಾಶ್ರಿತರಿಗೆ ನಗರದ ಸ್ಟೇಟ್ ಬ್ಯಾಂಕ್ ಪ್ರದೇಶದಲ್ಲಿ ವಿತರಿಸಲಾಯಿತು
ಈ ಸಂದರ್ಭದಲ್ಲಿ ಎನ್.ಎಸ್.ಯು.ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ, ಸಮಾಜ ಸೇವಕ ಸುಹಾನ್ ಆಳ್ವ, ಅನ್ಸಾರುದ್ದೀನ್ ಸಾಲ್ಮರ, ಎನ್.ಎಸ್.ಯು.ಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಫಾರೂಕ್ ಬಯಬೆ,, ಉಪಾಧ್ಯಕ್ಷ ನಿಖಿಲ್ ಪೂಜಾರಿ, ಎನ್.ಎಸ್.ಯು.ಐ ಉಪಾಧ್ಯಕ್ಷ ಅಂಕುಶ್ ಶೆಟ್ಟಿ,ಬಾತೀಷ್ ಅಳಕೆಮಜಲು ಎನ್.ಎಸ್.ಯು.ಐ ಶ್ರೀನಿವಾಸ್ ವಿಶ್ವವಿದ್ಯಾಲಯ ಅಧ್ಯಕ್ಷ ತಮೀಝ್ ಅಳಕೆಮಜಲು, ಅಯಾಝ್ ಚಾರ್ಮಾಡಿ, ಎನ್.ಎಸ್.ಯು.ಐ ಸುಳ್ಯ ತಾಲೂಕು ಉಪಾಧ್ಯಕ್ಷ ಯಶವಂತ್ ಅಡ್ಯಡ್ಕ,ನಜೀಬ್ ಮಂಚಿ ಹಾಗೂ ಇನ್ನಿತರು ಉಪಸ್ಥಿತರಿದ್ದರು.