ಇತ್ತೀಚಿನ ಸುದ್ದಿ
ಮಂಗಳೂರು: ಆ.7-10ರ ವರೆಗೆ ‘ಮಿಸ್ ಡಿವೈನ್ ದಿವಾ’ ರಾಷ್ಟ್ರಮಟ್ಟದ ಸೌಂದರ್ಯ ಸ್ಪರ್ಧೆ
17/07/2025, 10:04

ಚಿತ್ರ:ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಅಸ್ತ್ರ ಗ್ರೂಫ್ ಆಶ್ರಯದಲ್ಲಿ‘ಮಿಸ್ ಡಿವೈನ್ ದಿವಾ’ ರಾಷ್ಟ್ರಮಟ್ಟದ ಫ್ಯಾಷನ್ ಪೇಜೆಂಟ್ ಸೌಂದರ್ಯ ಸ್ಪರ್ಧೆ ಮತ್ತು ಗ್ರ್ಯಾಂಡ್ ಫಿನಾಲೆ ನಗರದ ಅವತಾರ್ ಹೋಟೆಲ್ನಲ್ಲಿ ಆ.೭ರಿಂದ ೧೦ರವರೆಗೆ ಜರಗಲಿದೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಯೋಜಕ ಸಾಹಿಲ್ ಅವರು, ‘ಮಿಸ್ ಡಿವೈನ್ ಕರಾವಳಿಗೆ ಹೊಸ ಅವಕಾಶದ ಬಾಗಿಲು. ಜಗತ್ತಿಗೆ ಮಂಗಳೂರಿನ ಸೌಂದರ್ಯವನ್ನು ಪಸರಿಸಲು ಸೂಕ್ತ ವೇದಿಕೆ. ಇದರಲ್ಲಿ ಕಾಶ್ಮೀರದಿಂದ ತೊಡಗಿ ದೇಶದ ವಿವಿಧ ಭಾಗಗಳ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಅಜಯ್ ಕುಮಾರ್ ಹಾಗೂ ಸಾಹಿಲ್ ಈವೆಂಟ್ಸ್ ಆಶ್ರಯದಲ್ಲಿ ಸ್ಪರ್ಧೆ ಆಯೋಜನೆಯಾಗಿದೆ.
ಕರಾವಳಿಯ ಪ್ರವಾಸೋದ್ಯಮಕ್ಕೆ ಇದೊಂದು ಹೊಸ ಸಾಧ್ಯತೆಯ ದಾರಿ’ ಎಂದು ಅವರು ನುಡಿದರು.
ಅಸ್ತ್ರ ಗ್ರೂಪ್ ಸಿಇಒ ಲಂಚುಲಾಲ್ ಕೆ.ಎಸ್. ಮಾತನಾಡಿ, ‘ದೇಶದ ವಿವಿಧ ಭಾಗಗಳಿಂದ ಆಯ್ದ ೫೦ ಮಂದಿ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದು, ಮಂಗಳೂರಿನ ಹೆಸರು ರಾಷ್ಟ್ರಮಟ್ಟದಲ್ಲಿ ಮಿಂಚಬೇಕು ಮತ್ತು ಇಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಡಿವೈನ್ ದಿವಾ ಸ್ಪರ್ಧೆಗೆ ಅಸ್ತ್ರ ಸಂಸ್ಥೆಯು ಪ್ರಾಯೋಜಕತ್ವ ವಹಿಸಿದೆ. ಇದರಿಂದ ಹೊಸಬರಿಗೆ ಅವಕಾಶ ಸಿಗಲಿದೆ’ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಅಜಯ್ ಕುಮಾರ್, ಮೋಹನ್ ದಾಸ್ ರೈ, ಮಿಸ್ ಸೆಲೆಸ್ಟಿಯಲ್ ಆಫ್ ವರ್ಲ್ಢ್ ಸೃಷ್ಟಿವೇಣು, ಪ್ರಮುಖರಾದ ಪಮ್ಮಿ ಕೊಡಿಯಾಲ್ ಬೈಲ್, ಮೋಹನ್ದಾಸ್ ರೈ, ಸಂದೀಪ್ ಶೆಟ್ಟಿ, ಯಶಿಕಾ, ಫವಾಜ್, ಅಭಿಷೇಕ್, ಇಮ್ರಾನ್, ಅಜಿತ್ ಸಿಂಗ್ ಉಪಸ್ಥಿತರಿದ್ದರು.