ಇತ್ತೀಚಿನ ಸುದ್ದಿ
ಮಂಗಳೂರು ಮಹಾನಗರಪಾಲಿಕೆ ಪ್ರತಿಪಕ್ಷದ ನಾಯಕನಾಗಿ ಕಾಂಗ್ರೆಸ್ಸಿನ ಪ್ರವೀಣ್ ಚಂದ್ರ ಆಳ್ವ ಆಯ್ಕೆ
26/09/2023, 19:30
ಮಂಗಳೂರು(reporterkarnataka.com): ಮಂಗಳೂರು ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕನಾಗಿ ಕಾಂಗ್ರೆಸ್ ಪಕ್ಷದ ಪ್ರವೀಣ್ ಚಂದ್ರ ಆಳ್ವ ಆಯ್ಕೆಯಾಗಿದ್ದಾರೆ.
ಪಾಲಿಕೆ ವ್ಯಾಪ್ತಿಯ ಕಂಕನಾಡಿ ಬಿ ವಾರ್ಡ್ ನಿಂದ ಎರಡನೇ ಬಾರಿ ಆಯ್ಕೆಯಾದ ಪ್ರವೀಣ್ ಚಂದ್ರ ಆಳ್ವ ಅವರನ್ನು ಪಕ್ಷದ ಕಾರ್ಪೋರೇಟರ್ ಗಳ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನವೀನ್ ಡಿಸೋಜ ಅವರ ಸ್ಥಾನಕ್ಕೆ ಪ್ರವೀಣ್ ಆಯ್ಕೆಗೊಂಡಿದ್ದಾರೆ. ಪಾಲಿಕೆಯಲ್ಲಿ ಕಳೆದ ಬಾರಿ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದಾಗ ಅವರು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಗೊಂಡು ಆಡಳಿತದ ಅನುಭವ ಹೊಂದಿದ್ದಾರೆ. ನೇರ ನಡೆ ನುಡಿಗೆ ಖ್ಯಾತರಾದ ಪ್ರವೀಣ್ ಚಂದ್ರ ಆಳ್ವ ಅವರು ಮಂಗಳೂರು ತುಂಬಾ ಚಿರಪರಿಚಿತರು.