ಇತ್ತೀಚಿನ ಸುದ್ದಿ
ಮಂಗಳೂರು ಮಹಾನಗರಪಾಲಿಕೆ ನೂತನ ಕಮಿಷನರ್ ಆಗಿ ಆನಂದ ಸಿ.ಎಲ್. ನೇಮಕ
28/06/2023, 12:03
ಮಂಗಳೂರು(reporterkarnataka.com): ಮಂಗಳೂರು ಮಹಾನಗರಪಾಲಿಕೆಯ ನೂತನ ಕಮಿಷನರ್ ಆಗಿ ಆನಂದ ಸಿ.ಎಲ್. ಅವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ.
ಪಾಲಿಕೆ ಕಮಿಷನರ್ ಆಗಿದ್ದ ಚನ್ನಬಸಪ್ಪ ಅವರನ್ನು ಗೃಹ ಸಚಿವರ ಆಪ್ತ ಕಾರ್ಯದರ್ಶಿಯಾಗಿ ನೇಮಕ ಮಾಡಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಹಾಸನದ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಹಿರಿಯ ಶ್ರೇಣಿಯ ಕೆಎಎಸ್ ಆನಂದ ಅವರನ್ನು ನೇಮಿಸಲಾಗಿದೆ.
ಈ ನಡುವೆ ಮನ್ಸೂರ್ ಆಲಿ ಅವರನ್ನು ಪಾಲಿಕೆ ಕಮಿಷನರ್ ಆಗಿ ನೇಮಿಸಿ ಸರಕಾರ ಆದೇಶ ಹೊರಡಿಸಿತ್ತು. ನಂತರ ಮನ್ಸೂರ್ ಆಲಿ ಅವರನ್ನು ಮುಡಾ ಕಮಿಷನರ್ ಆಗಿ ನೇಮಿಸಲಾಯಿತು. ಸುಮಾರು 15ಕ್ಕೂ ಹೆಚ್ಚು ದಿನಗಳಿಂದ ಪಾಲಿಕೆ ಕಮಿಷನರ್ ಹುದ್ದೆ ಖಾಲಿ ಬಿದ್ದಿತ್ರು.
ಉಪ ಆಯುಕ್ತ(ಅಭಿವೃದ್ಧಿ) ಹುದ್ದೆಗೆ ಮಂಗಳೂರು ಸ್ಮಾರ್ಟ್ ಸಿಟಿಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಕೆ.ಎಸ್.
ಲಿಂಗೇಗೌಡ ಅವರನ್ನು ನೇಮಿಸಿ ಇದೇ ವೇಳೆ ಸರಕಾರ ಆದೇಶ ಹೊರಡಿಸಿದೆ.