ಇತ್ತೀಚಿನ ಸುದ್ದಿ
ಮಂಗಳೂರು ಮಹಾನಗರಪಾಲಿಕೆ ಕಮಿಷನರ್ ಚನ್ನಬಸಪ್ಪ ವರ್ಗಾವಣೆ? ಕೃಷ್ಣಮೂರ್ತಿ ನೂತನ ಆಯುಕ್ತ?
10/06/2023, 20:51
ಮಂಗಳೂರು(reporterkarnataka.com): ಮಂಗಳೂರು ಮಹಾನಗರ ಪಾಲಿಕೆ ಕಮಿಷನರ್ ಚನ್ನಬಸಪ್ಪ ಕೆ. ಅವರು ವರ್ಗಾವಣೆಯಾಗಲಿದ್ದು, ಹೆಚ್ಚುವರಿ ಜಿಲ್ಲಾಧಿಕಾರಿ ಆಗಿರುವ ಕೃಷ್ಣಮೂರ್ತಿ ಅವರು ಹೊಸ ಕಮಿಷನರ್ ಆಗಿ ಪಾಲಿಕೆಗೆ ಆಗಮಿಸಲಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.
ಚನ್ನಬಸಪ್ಪ ಅವರನ್ನು ಗೃಹ ಸಚಿವರ ಆಪ್ತ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗುತ್ತಿದ್ದು, ಸೋಮವಾರ ಅಧಿಕೃತ ಆದೇಶ ಹೊರಬೀಳಲಿದೆ ಎಂಬ ಮಾಹಿತಿ ರಿಪೋರ್ಟರ್ ಕರ್ನಾಟಕಕ್ಕೆ
ಲಭ್ಯವಾಗಿದೆ.
ನೂತನ ಕಮಿಷನರ್ ಆಗಿ ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಅಥವಾ ಈ ಹಿಂದೆ ಪಾಲಿಕೆಯಲ್ಲಿ ಜಂಟೀ ಆಯುಕ್ತರಾಗಿದ್ದ ಸಂತೋಷ್ ಕುಮಾರ್ ಅವರು ನೇಮಕವಾಗುವ ಸಾಧ್ಯತೆಗಳಿವೆ.