9:39 AM Friday19 - December 2025
ಬ್ರೇಕಿಂಗ್ ನ್ಯೂಸ್
ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ… ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು: ಸದನದ ಗಮನ ಸೆಳೆದ ಶಾಸಕ ಡಾ.… Kodagu | ಭಾಗಮಂಡಲ ಮೀಸಲು ಅರಣ್ಯದಲ್ಲಿ ಅಕ್ರಮ ಜಿಂಕೆ ಬೇಟೆ: ಆರೋಪಿಗಳು ಅರಣ್ಯ… 1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ

ಇತ್ತೀಚಿನ ಸುದ್ದಿ

ಮಂಗಳೂರು ಕುಂಟಿಕಾನ ಬಳಿ ಕಾರು ಚಾಲಕನ ನಿರ್ಲಕ್ಷ್ಯ ಚಾಲನೆ: ಸ್ಕೂಟರ್ ಸವಾರ ದಾರುಣ ಸಾವು

12/10/2023, 12:17

ಮಂಗಳೂರು(reporterkarnataka.com): ನಗರದ ಕುಂಟಿಕಾನ ಎ. ಜೆ. ಆಸ್ಪತ್ರೆಯ ಬಳಿ ನಡೆದ ರಸ್ತೆ ಅಪಘಾತದಲ್ಲಿ ಸ್ಕೂಟರ್ ಚಾಲಕ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಕುಂಟಿಕಾನದ ಕೆನರಾ ಬ್ಯಾಂಕಿನ ಎಟಿಎಮ್ ಎದುರುಗಡೆ ಸರ್ವಿಸ್ ರಸ್ತೆಯಲ್ಲಿ ಎ ಜೆ ಆಸ್ಪತ್ರೆ ಬಳಿಯ ಹೋಟೆಲ್ ಹೈವೆ ಎದುರುಗಡೆ ಬಾರೆಬೈಲ್ ಕ್ರಾಸ್ ಕಡೆಯಿಂದ ಎ ಜೆ ಆಸ್ಪತ್ರೆ ಎದುರುಗಡೆಯಾಗಿ ಕುಂಟಿಕಾನ ಕಡೆಗೆ ಎಲೆಕ್ಟ್ರಿಕಲ್ ಆಟೋರಿಕ್ಷಾ
ಸಾಗುತ್ತಿದ್ದ ವೇಳೆ ಎ. ಜೆ. ಆಸ್ಪತ್ರೆ ಎದುರುಗಡೆಯ ಕೆನರಾ ಬ್ಯಾಂಕ್ ಎಟಿಎಮ್ ಬಳಿ ರಸ್ತೆಗೆ ಬಂದು ತಲುಪಿದ ವೇಳೆ ಆಟೋ ರಿಕ್ಷಾದ ಹಿಂದುಗಡೆಯಿಂದ ಬಾರೆಬೈಲ್ ಕ್ರಾಸ್ ಕಡೆಯಿಂದ ಎ.ಜೆ. ಆಸ್ಪತ್ರೆ ಎದುರುಗಡೆಯಾಗಿ ಕುಂಟಿಕಾನ ಕಡೆಗೆ ಸಾಗುತ್ತಿದ್ದ ಸ್ಕೂಟರ್ ಆಟೋ ರಿಕ್ಷಾದ ಹಿಂದುಗಡೆಗೆ ತಾಗಿ ಸ್ಕೂಟರ್ ಸಮೇತ ಸವಾರ ಕೌಶಿಕ್ ಎಂಬವರು ಡಾಮಾರು ರಸ್ತೆಯ ಬಲ ಬದಿಗೆ ಬಿದ್ದರು. ಈ ವೇಳೆ ಕುಂಟಿಕಾನ ಕಡೆಯಿಂದ ಎ. ಜೆ. ಆಸ್ಪತ್ರೆಯ ಎದುರುಗಡೆಯಾಗಿ ಬಾರೆಬೈಲ್ ಕ್ರಾಸ್ ಕಡೆಗೆ ಸಾಗಿರುವ ಸರ್ವಿಸ್ ರಸ್ತೆಯಲ್ಲಿ
KA-19-MD-7779 ನೊಂದಣಿ ನಂಬ್ರದ ಕಾರನ್ನು ಕೆ ರಮೇಶ ಎಂಬುವರು ಅಜಾಗರುಕತೆಯಿಂದ ಮತ್ತು ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಮೇಲೆ ಬಿದ್ದಿದ್ದ ಸ್ಕೂಟರ್ ಸವಾರನ ತಲೆಯ ಭಾಗದ ಮೇಲೆ ಕಾರಿನ ಚಕ್ರವನ್ನು ಚಾಲಯಿಸಿಕೊಂಡು ಹೋದ ಪರಿಣಾಮ ಕೌಶಿಕ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಸಾರ್ವಜನಿಕರ ಸಹಾಯದಿಂದ ಗಾಯಾಳುವನ್ನು ತಕ್ಷಣ
ಎ ಜೆ ಆಸ್ಪತ್ರೆಗೆ ಸಾಗಿಸಲಾಗಿದ್ದು ಆತನನ್ನು ಅಪಘಾತ ಸ್ಥಳದಿಂದ ಕರೆತರುವ ವೇಳೆ ಗಾಯಾಳು ಮೃತ ಪಟ್ಟಿರುವುದಾಗಿ ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು