11:36 PM Wednesday14 - May 2025
ಬ್ರೇಕಿಂಗ್ ನ್ಯೂಸ್
Bangalore | ಗ್ರಾಹಕರ ದೂರು ನಿರ್ವಹಣೆಗೆ ಡಿಜಿಟಲ್ ಪೋರ್ಟಲ್: ಬೆಸ್ಕಾಂ ಎಂಡಿ ಡಾ.ಎನ್.… Bangalore | ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ Bangalore | ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ: ಮಹತ್ವದ ಸಭೆ Bangalore | ಅಕ್ಟೋಬರ್ ನಲ್ಲಿ ಅಂಗನವಾಡಿ ಸುವರ್ಣ ಮಹೋತ್ಸವ ಆಚರಣೆ: ಸಚಿವೆ ಲಕ್ಷ್ಮೀ… ಮೋಸ್ಟ್‌ ವಾಂಟೆಡ್‌ ಉಗ್ರರನ್ನು ನಿರ್ನಾಮ ಮಾಡಿದ್ದೇವೆ: ಹುಬ್ಬಳ್ಳಿ ಎಬಿವಿಪಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು… Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ…

ಇತ್ತೀಚಿನ ಸುದ್ದಿ

ಮಂಗಳೂರು ಕೆಎಸ್ಸಾರ್ಟಿಸಿ ಎಡವಟ್ಟು!: ಶಿರಾಡಿ ಮಾರ್ಗವಾಗಿ ತೆರಳಿದ ನೈಟ್ ಸರ್ವಿಸ್ ಬಸ್!; ಕೊನೆಗೂ ಚಾರ್ಮಾಡಿ ಸುತ್ತಿ ಬೆಂಗಳೂರಿಗೆ!!

22/07/2022, 11:57

ಅಶೋಕ್ ಕಲ್ಲಡ್ಕ ಮಂಗಳೂರು

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಮಂಗಳೂರು- ಬೆಂಗಳೂರು ಮಧ್ಯೆ ಸಿಗುವ ಶಿರಾಡಿ ಘಾಟಿಯಲ್ಲಿ ಘನ ವಾಹನಗಳ ಸಂಚಾರಕ್ಕೆ ನಿಷೇಧವಿದೆ ಎನ್ನುವುದು ಇಡೀ ಲೋಕಕ್ಕೆ ಗೊತ್ತಿದ್ದರೂ, ಮಂಗಳೂರಿನ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಗೊತ್ತಿಲ್ಲ ಎಂದರೆ ಯಾರಿಗೂ ಆಶ್ಚರ್ಯವಾಗಬಹುದು. ಆದರೆ ಇದು ಸತ್ಯ. ಮಳೆ, ಭೂಕುಸಿತದ ಹಿನ್ನೆಲೆಯಲ್ಲಿ ಶಿರಾಡಿ ಘಾಟಿಯಲ್ಲಿ ಘನವಾಹನಗಳನ್ನು ಬಿಡುತ್ತಿಲ್ಲ ಎನ್ನುವ ಅಂಶ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದ ಡಿಟಿಒ, ಡಿಪೋ ಮ್ಯಾನೇಜರ್ ಗೆ ಗೊತ್ತಿಲ್ಲ. ಆಯಕಟ್ಟಿನ ಹುದ್ದೆಯಲ್ಲಿರುವ ಒಬ್ಬ ಕೆಎಸ್ಸಾರ್ಟಿಸಿ ಅಧಿಕಾರಿಯ ಅಜ್ಞಾನದಿಂದ ಬಸ್ಸಿನಲ್ಲಿದ್ದ ಎಲ್ಲ ಪ್ರಯಾಣಿಕರು ಪಡಬಾರದ ಪಾಡು ಪಟ್ಟಿದ್ದರು. ಅದರಲ್ಲೂ ಒಂಟಿಯಾಗಿ ಪ್ರಯಾಣಿಸುತ್ತಿರುವ ಮಹಿಳೆಯರ ಪಾಡಂತು ಹೇಳಿ ತೀರದು.


ಮಂಗಳೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ನೈಟ್ ಸರ್ವಿಸ್ ಬಸ್ ಹೊರಟ್ಟಿತ್ತು. ಡಿಪೋ ಮ್ಯಾನೇಜರ್ ಶಿರಾಡಿ ಘಾಟಿಯಾಗಿ ಸಂಚರಿಸಲು ಡ್ರೈವರ್ ಗೆ ಸೂಚನೆ ನೀಡಿದ್ದರು. ಬಸ್ ಪಡೀಲ್- ಬಿ.ಸಿ.ರೋಡ್ – ಮಾಣಿಯಾಗಿ ಉಪ್ಪಿನಂಗಡಿ ಸೇರಿತ್ತು. ಅಷ್ಟರಲ್ಲಿ ಶಿರಾಡಿಯಿಂದ ಬಸ್ ಹೋಗಲ್ಲ ಎಂಬ ಸ್ಪಷ್ಟ ಮಾಹಿತಿ ಡ್ರೈವರ್ ಗೆ ಲಭಿಸಿತು. ಇನ್ನೇನು ಮಾಡುವುದು? ಅಂತ ಯೋಚಿಸಿದರೆ, ಉಳಿದಿರುವುದು ಒಂದೇ ರೂಟ್. ಅದೇನೆಂದರೆ ಧರ್ಮಸ್ಥಳ ಮಾರ್ಗವಾಗಿ ಉಜಿರೆಗೆ ಬಂದು ಅಲ್ಲಿಂದ ಚಾರ್ಮಾಡಿ ಘಾಟಿ ಮೂಲಕ ಬೆಂಗಳೂರು ಸೇರಿರುವುದು.

ಮಂಗಳೂರಿನಿಂದ ಉಪ್ಪಿನಂಗಡಿ ವರೆಗಿನ ಸರಿ ಸುಮಾರು ಒಂದು ತಾಸಿನ ಪ್ರಯಾಣ ವೇಸ್ಟ್ ಆದ ಬಳಿಕ ಬಸ್ ಧರ್ಮಸ್ಥಳ ಮಾರ್ಗವಾಗಿ ಪ್ರಯಾಣ ಬೆಳೆಸಿತು. ಇನ್ನೇನು ಸುಖ ಪ್ರಯಾಣ ಸಾಧ್ಯವಾಗುತ್ತದೆ ಎನ್ನುವಷ್ಟರಲ್ಲಿ ಚಾರ್ಮಾಡಿ ಘಾಟಿಯಲ್ಲಿ ಮತ್ತೊಂದು ಕಂಟಕ ಎದುರಾಯಿತು.


ಘಾಟಿಯ 8ನೇ ತಿರುವಿನಲ್ಲಿ ಲಾರಿಯೊಂದು ಕೆಟ್ಟು ನಿಂತು ಉದ್ದಕ್ಕೆ ವಾಹನಗಳು ಸಾಲು ಸಾಲಾಗಿ ನಿಂತಿದ್ದವು.

ಮತ್ತೆ ಪ್ರಯಾಣಿಕರ ಸಂಕಟ, ನರಕ ವೇದನೆ ಶುರುವಾಯಿತು. ಘಾಟಿಯುದ್ಧಕ್ಕೂ ಮೊಬೈಲ್ ನೆಟ್ ವರ್ಕ್ ಸಿಗುವುದಿಲ್ಲ, ಹೆಲ್ಫ್ ಲೈನ್ ವ್ಯವಸ್ಥೆ ಇಲ್ಲ, ದ.ಕ. ಹಾಗೂ ಚಿಕ್ಕಮಗಳೂರು ಎರಡೂ ಜಿಲ್ಲೆಗಳ ನೈಟ್ ಪೆಟ್ರೋಲ್ ವ್ಯವಸ್ಥೆ ಇಲ್ಲ, ಗಸ್ತು ಪೊಲೀಸ್ ಇಲ್ಲ. ಎಲ್ಲರೂ ಕಷ್ಟದಲ್ಲೇ ಇರೋರು,ಕಷ್ಟ ಹೇಳಿಕೊಳ್ಳೋಕೆ ಸಾಧ್ಯವೇ ಇಲ್ಲದ ಪರಿಸ್ಥಿತಿ.ಬಸ್ ಕಿಟಕಿ ತೆಗೆದರೆ ಸೊಳ್ಳೆ, ನೊಣ, ಜೀರುಂಡೆಗಳ ಕಾಟ. ಕಿಟಕಿ ಕ್ಲೋಸ್ ಮಾಡಿದರೆ ಉಸಿರಾಟಕ್ಕೆ ತೊಂದರೆ ಎನ್ನುವ ಸ್ಥಿತಿ. ಇವೆಲ್ಲದರ ಮಧ್ಯೆ ಸುಮಾರು ಒಂದು ತಾಸಿಗೂ ಅಧಿಕ ಸಮಯ ಪ್ರಯಾಣಿಕರು ಬಸ್ ನಲ್ಲಿ ಕಷ್ಟಪಡಬೇಕಾಯಿತು.

ಇದಕ್ಕೆಲ್ಲ ಕಾರಣ ಮಂಗಳೂರು ಕೆಎಸ್ಸಾರ್ಟಿಸಿ ಎಡವಟ್ಟು!: ಶಿರಾಡಿ ಮಾರ್ಗವಾಗಿ ತೆರಳಿದ ನೈಟ್ ಸರ್ವಿಸ್ ಬಸ್!; ಕೊನೆಗೂ ಚಾರ್ಮಾಡಿ ಸುತ್ತಿ ಬೆಂಗಳೂರಿಗೆ!!ಷ್ಟ ಹೇಳಿಕೊಳ್ಳೋಕೆ ಸಾಧ್ಯವೇ ಇಲ್ಲದ ಪರಿಸ್ಥಿತಿ. ಬಸ್ ಕಿಟಕಿ ತೆಗೆದರೆ ಸೊಳ್ಳೆ, ನೊಣ, ಜೀರುಂಡೆಗಳ ಕಾಟ. ಕಿಟಕಿ ಕ್ಲೋಸ್ ಮಾಡಿದರೆ ಉಸಿರಾಟಕ್ಕೆ ತೊಂದರೆ ಎನ್ನುವ ಸ್ಥಿತಿ. ಇವೆಲ್ಲದರ ಮಧ್ಯೆ ಸುಮಾರು ಒಂದು ತಾಸಿಗೂ ಅಧಿಕ ಸಮಯ ಪ್ರಯಾಣಿಕರು ಬಸ್ ನಲ್ಲಿ ಕಷ್ಟಪಡಬೇಕಾಯಿತು.

ಇದಕ್ಕೆಲ್ಲ ಕಾರಣ ಮಂಗಳೂರು ಕೆಎಸ್ಸಾರ್ಟಿಸಿ ಆಡಳಿತ ವೈಖರಿ. ಈ ಕುರಿತು ಕೆಎಸ್ಸಾರ್ಟಿಸಿ ಡಿವಿಜನಲ್  ಟ್ರಾಫಿಕ್ ಕಂಟ್ರೋಲರ್ (ಡಿಟಿಒ) ಅವರಲ್ಲಿ ರಿಪೋರ್ಟರ್ ಕರ್ನಾಟಕ ಮಾತನಾಡಿಸಿದಾಗ, ನಾನು ರಜೆಯಲ್ಲಿದ್ದೆ. ಕಮ್ಯುನಿಕೇಶನ್ ಸಮಸ್ಯೆಯಿಂದ ಎಡವಟ್ಟು ಆಗಿದೆ. ಸಕಲೇಶಪುರ ಕಡೆ ವಿಚಾರಿಸಿದಾಗ, ಬಸ್ ಸಂಚಾರ ಮಾಡುತ್ತದೆ ಎಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಇಲ್ಲಿಂದ ಶಿರಾಡಿ ಮಾರ್ಗವಾಗಿ ಬಸ್ ಬಿಡಲಾಗಿದೆ. 

ಇನ್ನು ಮುಂದೆ ಜಿಲ್ಲಾಧಿಕಾರಿ ಆದೇಶವನ್ನೇ ಪರಿಗಣಿಸಿ ಬಸ್ ಸಂಚಾರ ನಡೆಸುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.

ನಿಜವಾಗಿ ಈ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಸ್ವಲ್ಪವಾದರೂ ಯೋಚನಾಶಕ್ತಿ ಇರುತ್ತಿದ್ದರೆ, ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿ ಆದೇಶ ಏನು ಹೇಳುತ್ತದೆ ಎನ್ನುವುದನ್ನು ಮನದಟ್ಟು ಮಾಡಿಕೊಂಡು ಬಸ್ ರೂಟ್ ಕಾರ್ಯಗತ ಮಾಡಬೇಕಿತ್ತು. ಅದು ಬಿಟ್ಟು ಯಾವನೋ ಹೇಳಿದ ಅಂತ ಬಸ್ ಬಿಟ್ಟೆ ಅಂದ್ರೆ ಅದಕ್ಕೆ ಏನಾರದೂ ಅರ್ಥವಿದೆಯೇ? ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳು ಇದಕ್ಕೆ ಉತ್ತರಿಸಬೇಕು.

ಇತ್ತೀಚಿನ ಸುದ್ದಿ

ಜಾಹೀರಾತು